ಕುಣಿಗಲ್ ಮತ್ತು ಶಿರಾ ತಾಲ್ಲೂಕುಗಳಲ್ಲಿ ಇಂದು ಭಾರತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ
ತುಮಕೂರು(ಕ.ವಾ.) ಫೆ.3: ಭಾರತ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವನ್ನು ಇಂದು (ದಿ.3-2-2024) ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕಗ್ಗೆರೆ, ಕೋಡಗೀಹಳ್ಳಿ, ಅಮೃತೂರು, ಜಿನ್ನಗರ, ಪಡುವಗೆರೆ ಮತ್ತು ಯಾಡವಣಿ ಗ್ರಾ.ಪಂಗಳಲ್ಲಿ ಹಾಗೂ ಶಿರಾ ತಾಲ್ಲೂಕಿನ ಚಂಗಾವರ, ದ್ವಾರನಕುಂಟೆ, ಹುಲಿಕುಂಟೆ, ತಡಕಾಲೂರು, ದೊಡ್ಡಬಾಣಗೆರೆ ಮತ್ತು ಬರಗೂರು ಗ್ರಾಮ ಪಂಚಾಯ್ತಿಗಳಲ್ಲಿ ಹಮ್ಮಿಕೊಳ್ಳಲಾಯಿತು.
ಈ ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ನಿಗಧಿಪಡಿಸಿರುವ ವೇಳಾ ಪಟ್ಟಿಯಂತೆ ಸ್ಥಳೀಯ ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರುಗಳು ಭಾರತ ಸಂವಿಧಾನ ಜಾಗೃತಿ ಜಾಥಾಕ್ಕೆ ಕುಂಬಕಳಸ, ಆರತಿಗಳೊಂದಿಗೆ ಹೊತ್ತು ತಂದು ಭವ್ಯ ಸ್ವಾಗತವನ್ನು ನೀಡಿ ಬರಮಾಡಿಕೊಂಡು ಸಂವಿಧಾನ ಪೀಠಿಕೆಯನ್ನು ಓದಿ ಹೇಳಲಾಯಿತು ಹಾಗೂ ವಿದ್ಯಾರ್ಥಿಗಳು ಸಾಂಸೃತಿಕ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟರು. ಶಿಕ್ಷಕರು ಸಂವಿಧಾನ ಕುರಿತಂತೆ ವಿಷಯ ಮತ್ತು ಮಹತ್ವವನ್ನು ತಿಳಿಸಿಕೊಟ್ಟರು. ಕುಣಿಗಲ್ ತಾಲ್ಲೂಕಿನ ಕಗ್ಗೆರೆ ಹಾಗೂ ಶಿರಾ ತಾಲ್ಲೂಕಿನ ಚಂಗಾವರ ಗ್ರಾಮಪಂಚಾಯತಿಯ ಸ್ಥಳೀಯರು ಬೈಕ್ ರ್ಯಾಲಿ ನಡೆಸಿದರು.
ಭಾರತ ಸಂವಿಧಾನ ಜಾಗೃತಿ ಜಾಥಾವು ಈ ಹಿಂದೆಯೇ ನಿಗಧಿಪಡಿಸಿರುವ ರೂಟ್ ಮ್ಯಾಪ್ನಂತೆ ನಿಗಧಿತ ಪಂಚಾಯ್ತಿಗಳಿಗೆ ಸಂಚರಿಸಿ ಭಾರತ ಸಂವಿಧಾನ ಕುರಿತು ವಿವಿಧ ಕಾರ್ಯಕ್ರಮಗಳ ಮೂಲಕ ಸಡಗರ ಸಂಭ್ರಮದಿoದ ಕೂಡಿದ ಕಾರ್ಯಕ್ರಮಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ವಿಶೇಷವಾಗಿ ಭಾರತ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ರವರ ಬಗ್ಗೆ ಅಭಿಮಾನ, ಆಸಕ್ತಿ, ಅರಿವು ಮೂಡುವಂತಾಗಿದೆ. ಭಾರತ ಸಂವಿಧಾನ ಜಾಗೃತಿ ಕಾರ್ಯಕ್ರಮವು ಎಲ್ಲಾ ಪಂಚಾಯ್ತಿಗಳಲ್ಲಿ ನಡೆಯುತ್ತಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ಮತ್ತು ಪಾಲ್ಗೊಳ್ಳುವಿಕೆಯಿಂದಾಗಿ ತುಮಕೂರು ಜಿಲ್ಲೆಯಲ್ಲಿ ಸರ್ವರಲ್ಲಿಯೂ ಸಂಚಲನ ಮತ್ತು ಸಂತೋಷ ಉಂಟು ಮಾಡಿದೆ. ಈ ಹಿಂದೆ ಯಾವ ವರ್ಷದಲ್ಲೂ ಭಾರತ ಸಂವಿಧಾನ ಕುರಿತು ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳು ನಡೆದಿರುವುದಿಲ್ಲ. ಸಂವಿಧಾನಕ್ಕೆ 75 ವರ್ಷಗಳು ತುಂಬಿರುವ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಜಿಲ್ಲೆಯ ಸರ್ವಜನರಲ್ಲಿ ಹೊಸ ಸಂಚಲನ ಮತ್ತು ಸಂತೋಷವನ್ನುoಟು ಮಾಡಿದೆ.