ಈ ಕಲಬುರ್ಗಿ ಕಂದ ಇಂಗ್ಲಿಷ್ ಶಬ್ದ ಕೇಳಿದಾಕ್ಷಣ ಪಟಪಟನೆ ಬಿಡುವಿಲ್ಲದೆ 5 ನಿಮಿಷದಲ್ಲಿ 310 ಇಂಗ್ಲಿಷ್ ಶಬ್ದಗಳ ಸ್ಪೆಲಿಂಗ್ ಹೇಳುತ್ತಾನೆ .ಅಂದ ಹಾಗೆ ಈ ಪೋರನಿಗೆ ಕೇವಲ 5 ವರ್ಷ 10ತಿಂಗಳು 13 ದಿನ .ಹೌದು ಈ ಮುದ್ದು ಬಾಲಕನ ಹೆಸರು *ಧ್ರುವಂತ್ ರಾಜೀವ ಆಲೂರು*ಇಂಗ್ಲಿಷ್ ಶಬ್ದಗಳ ಸ್ಪೆಲಿಂಗ್ ಹೇಳಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ ನಲ್ಲಿ ಮತ್ತು ಏಶಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿಯೂ ಕೂಡ ತನ್ನದೇ ಆದ ಚಾಪು ಮೂಡಿಸಿ ಸಾಧನೆ ಮಾಡಿ ಗ್ರ್ಯಾಂಡ ಮಾಸ್ಟರ್ ಪ್ರಶಸ್ತಿ ಪಡೆದಿದ್ದಾನೆ. ಇಂದು ಕಲ್ಬುರ್ಗಿ ನಗರದಲ್ಲಿ ಪತ್ರಿಕಾ ಭವನದಲ್ಲಿ ಅತಿವ ಸಂತೋಷಗೊಂಡು ವಿದ್ಯಾರ್ಥಿಯ ತಂದೆ ತಾಯಿ ಮತ್ತು ಶಿಕ್ಷಕ ವೃಂದ ಮಾತನಾಡುತ್ತಾ ನಮ್ಮ ಕಲಬುರ್ಗಿ ಜಿಲ್ಲೆಗೆ ನನ್ನ ಮಗ ಒಳ್ಳೆ ಹೆಸರು ತಂದು ಕೊಟ್ಟಿದ್ದಾನೆ ಈ ರೀತಿ ಸಾಧನೆ ಮಾಡಿದ ಮೊದಲಿಗ ನನ್ನ ಮಗ ಎಂದರು. ತದನಂತರ ಮಾತನಾಡಿದ ಶಾಲೆಯ ಶಿಕ್ಷಕಿ ನಾವು ಶಾಲೆಯಲ್ಲಿ ಹೇಳಿದ ಎಲ್ಲಾ ಕೆಲಸಗಳನ್ನು ಚಾಚು ತಪ್ಪದೇ ಮಾಡುತ್ತಿದ್ದನು ಒಳ್ಳೆಯ ಶಿಸ್ತು ಸಂಯಮ ಹೊಂದಿರುವ ವಿದ್ಯಾರ್ಥಿ ಎಂದರು ಈ ರೀತಿ ಸಾಧನೆ ಮಾಡಿದ ನೋಡಿದರೆ ನಮಗೆ ತುಂಬಾನೇ ಸಂತೋಷವೆನಿಸುತ್ತದೆ. ವಿದ್ಯಾರ್ಥಿ ಸಾಧನೆ ಬೇರೆ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಲಿದೆ ಎಂದರು.