ತುಮಕೂರು:ಹಲವಾರು ಜನರ ತ್ಯಾಗ ಬಲಿದಾನದಿಂದ ಪಡೆದಿರುವ ಸ್ವಾತಂತ್ರವನ್ನು ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ೭೬ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಸ್ವಾತಂತ್ರದ ಹಿಂದಿನ ಹಲವಾರು ಹೋರಾಟಗಳಿಗೆ ಬೆಲೆ ಸಿಗಬೇಕಾದರೆ ಹಲವಾರು ಧರ್ಮ, ಜಾತಿ, ಭಾಷೆಗಳು ಸೇರಿ ನಿರ್ಮಾಣವಾಗಿರುವ ಭಾರತದಲ್ಲಿ ಅಹಿಂಸೆಗೆ ಹೆಚ್ಚು ಪ್ರಾಧ್ಯಾನತೆ ನೀಡಿ,ಜನರು ನೆಮ್ಮದಿ, ಶಾಂತಿಯಿAದ ಬದುಕುವಂತಹ ವಾತಾವರಣ ನಿರ್ಮಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಆತೀಕ್ ಅಹಮದ್,ಬಿ.ಜಿ.ಲಿಂಗರಾಜು,ಷಣ್ಮುಖಪ್ಪ,ನಾಗಮಣಿ,ಸುಜಾತ, ಮೇಯರ್ ಪ್ರಭಾವತಿ,ಪಾಲಿಕೆ ಸದಸ್ಯರಾದ ದೀಪಶ್ರೀ ಶೆಟ್ಟಾಳಯ್ಯ,ನಯಾಜ್ ಅಹಮದ್,ತರುಣೇಶ್,ಹೆಚ್.ಸಿ.ಹನು ಮಂತಯ್ಯ, ಕೈದಾಳ ರಮೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
Leave a comment
Leave a comment