ತುಮಕೂರು ತಾಲ್ಲೂಕು ಊರ್ಡಿಗೆರ ಹೋಬಳಿ ಕೆಸರಮಡು ಗ್ರಾಮದಲ್ಲಿ ಶ್ರೀ ಮಹಾಗಣಪತಿ, ಶ್ರೀಕೃಷ್ಣ, ಧರ್ಮರಾಯ, ಆದಿಶಕ್ತಿ ದ್ರೌಪದಿ, ಭೀಮ, ಅರ್ಜುನ, ನಕುಲ, ಸಹದೇವರುಗಳ ಸ್ಥಿರಬಿಂಬ ಪ್ರತಿಷ್ಠಾಪನಾ, ವಿಮಾನಗೋಪುರದ ಕಲಶ ಪ್ರತಿಷ್ಠಾಪನಾ ಹಾಗೂ ನೂತನವಾಗಿ ನಿರ್ಮಾಣವಾಗಿರುವ ದಾಸೋಹ ಭವನದ ಉದ್ಘಾಟನೆಯನ್ನು ತಿಪಟೂರು ತಾಲ್ಲೂಕಿನ ಶ್ರೀ ಶನೈಶ್ಚರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸೋಮೇಶ್ವರ ಸ್ವಾಮೀಜಿಯವರು ನೆರವೇರಿಸಿದರು.
ಪೂಜ್ಯ ಸ್ವಾಮೀಜಿಯವರು ಭಗವದ್ಗೀತೆ ಮತ್ತು ಮಹಾಭಾರತದ ವಿಶೇಷತೆಯನ್ನು ವಿಶ್ಲೇಷಿಸದರಲ್ಲದೇ ಭಗವದ್ಗೀತೆಯಲ್ಲಿ ಒಟ್ಟು 18 ಅಧ್ಯಾಯಗಳು ಒಳಗೊಂಡಿದೆ, ದೇವಿ ಮಹಾತ್ಮೆ 18 ಅಧ್ಯಾಯಗಳಿವೆ, ಶಬರಿಮಲೈ ಅಯ್ಯಪ್ಪಸ್ವಾಮಿಯ ದೇಗುಲಕ್ಕೆ 18 ಮೆಟ್ಟಿಲುಗಳು ಇವೆ, ಶನಿ ಮಹಾತ್ಮರು 18 ವರ್ಷಗಳ ಕಾಲ ಮಾನವನನ್ನು ಪರೀಕ್ಷಿಸಿ ಅವರಿಗೆ ಸನ್ಮಂಗಳವನ್ನು ತಂದುಕೊಡುತ್ತಾರೆ, ಹೀಗೆ ನಮ್ಮ ಆಧ್ಯಾತ್ಮಿಕ ಕ್ಷೇತ್ರದಲ್ಲಿ 9 ಮತ್ತು 18ಕ್ಕೆ ವಿಶೇಷ ಸ್ಥಾನಮಾನವಿದೆ ಏಕೆಂದರೆ 18ನ್ನು ಕೂಡಿದರೆ ಬರುವುದು 9ರ ಸಂಖ್ಯೆ ಈ ಸಂಖ್ಯೆಯು ನಮ್ಮ ಸನಾತನದ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆಯಲ್ಲದೇ ಹೀಗೆ ಇದರ ಅಧ್ಯಯನ ಮಾಡುತ್ತಾ ಹೋದರೆ ಮಾನವ ಸಾಧಿಸುವುದು ಬಹಳಷ್ಟಿದೆ, ಜೊತೆಗೆ ಇಂದಿನ ದಿನಾಂಕ 01ನೇ ತಾರೀಖು 08 ನೇ ತಿಂಗಳು ಇಲ್ಲಿಯೂ ಸಹ 09 ಬಂದಿದ್ದು ಈ ದಿನದಂದು ಇಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊoದಿಗೆ ಭಗವತ್ ಕೈಂಕರ್ಯಗಳು ಅಚ್ಚುಕಟ್ಟಾಗಿ ಸಮಾಜದ ಅಣ್ಣ-ತಮ್ಮಂದಿರು ನೆರವೇರಿಸಿರುವುದು ತುಂಬಾ ಸಂತೋಷಕರ ವಿಷಯವೆಂದು ತಿಳಿಸಿದರು. ಜೊತೆಗೆ ಈ ಮಹತ್ಕಾರ್ಯಕ್ಕೆ ಸೇವೆ ಸಲ್ಲಿಸಿದ ಮಹನೀಯರುಗಳಿಗೆ ಗೌರವಿಸಿ ಸತ್ಕರಿಸುತ್ತಿರುವುದು ಒಳ್ಳೆಯ ಸಂಸ್ಕೃತಿ ಎಂದರು.