ಗುಬ್ಬಿ ತಾಲ್ಲೂಕಿನ ಸಿಎಸ್ ಪುರ ಹೋಬಳಿಯ ಇಡಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಗತ್ಸಿಂಗ್ ಸ್ಕೌಟ್ಸ್ ಘಟಕ ಉದ್ಘಾಟನೆಯಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕಾರಗಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಅಂಜಿನಪ್ಪರವರು ಮಾತನಾಡಿ, ಈ ಶಾಲೆಯಲ್ಲಿ ಘಟಕದ ಉದ್ಘಾಟನೆಗೆ ಹೆಚ್ಚು ಶ್ರಮಿಸಿದ ಚಿತ್ರಕಲಾ ಶಿಕ್ಷಕ ನಾಗೇಂದ್ರಕುಮಾರ್ ಎಸ್ ಹೆಚ್ರವರು ಮೊದಲು ಅಭಿನಂದನಾರ್ಹರು. ಶಾಲಾ ಕಾಲೇಜುಗಳ ಮಟ್ಟದಲ್ಲಿ ಎನ್ ಸಿ ಸಿ, ಎನ್ ಎಸ್ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್ರಂತಹ ಸಂಸ್ಥೆಗಳಲ್ಲಿ ಮಕ್ಕಳು ತೊಡಗಿಸಿಕೊಂಡು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ನಾನು ಕೂಡ ವಿದ್ಯಾರ್ಥಿಯಾಗಿದ್ದಾಗ, ಎನ್ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ನಲ್ಲಿ ತೊಡಗಿಸಿಕೊಂಡು ಇಂದಿಗೂ ಸಂಸ್ಥೆಯ ಜಿಲ್ಲಾ, ತಾಲ್ಲೂಕು ಸಂಸ್ಥೆಟಲ್ಲಿ ಸಕ್ರಿಯವಾಗಿದ್ದೇನೆ. ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಜಿಲ್ಲೆಗೆ ಹೋಲಿಸಿದರೆ ಗುಬ್ಬಿ ತಾಲ್ಲೂಕಿನ ಶಾಲಾ ಕಾಲೇಜುಗಳಲ್ಲಿ ಹೆಚ್ಚು ಸಕ್ರಿಯವಾಗಿದೆ.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಸ್ಕೌಟ್ಸ್ ಅಂಡ್ ಗೈಡ್ಸ್ ಗುಬ್ಬಿ ತಾಲ್ಲೂಕು ಸ್ಥಳೀಯ ಸಂಸ್ಥೆ ಅಧ್ಯಕ್ಷರಾದ ಜಿ ಆರ್ ಶಿವಕುಮಾರ್ರವರು ಮಾತನಾಡಿ, ಈ ಸಂಸ್ಥೆಯ ಮೂಲ ಉದ್ದೇಶವೇ ನಾಯಕತ್ವ, ಬ್ರಾತೃತ್ವ, ಸರ್ವಧರ್ಮ ಸಮಾನತೆ ಬೆಳೆಸುವುದಾಗಿದೆ. ತಾಲ್ಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಪ್ರಾರಂಭ ಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ನಿಷ್ಠೆ ಬೆಳೆಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಇಡಗೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸುಶಾಂತ್ರವರು ಮಾತನಾಡಿ, ಈ ಹಿಂದೆ ನಾವು ಇದೇ ಶಾಲೆಯಲ್ಲಿ ಓದುತ್ತಿದ್ದಾಗ ಹೆಚ್ಚು ಆಸಕ್ತಿಯಿಂದ ಭಾಗವಹಿಸಿದ್ದೆವು. ಈಗ ನೂತನ ಘಟಕ ಉದ್ಘಾಟನೆ ಮಾಡಿರುವುದು ಸಂತೋಷ ತಂದಿದೆ. ಮುಂದೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಬರವಸೆ ನೀಡಿದರು.
ನೂತನ ಸ್ಕೌಟ್ಸ್ ಘಟಕ ಉದ್ಘಾಟನೆ
Leave a comment
Leave a comment