ಸಿರಾ:- ಮಕ್ಕಳು ಮತ್ತು ಯುವಜನರು ಈ ದೇಶದ ಬದಲಾವಣೆಯನ್ನು ತರುವುದಕ್ಕೆ ಮುಂಚೂಣಿಯಲ್ಲಿರಬೇಕಾಗಿದೆ. ಪ್ರಸ್ತುತವಾಗಿ ಶಿಕ್ಷಣವನ್ನು ಕಲಿಯುವುದರ ಜೊತೆ ಬದುಕಿಗೆ ಬೇಕಾದ ಎಲ್ಲಾ ಕೌಶಲ್ಯಗಳನ್ನು ಸಹ ಕಲಿಯಬೇಕಾದ ಅನಿವಾರ್ಯತೆಯಿದೆ. ಕೌಶಲ್ಯಯುಕ್ತ ಯುವಜನರಿಂದ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ. ಆಗಾಗಿ ಉತ್ತಮ ಸಮಾಜದ ಪರಿವರ್ತನೆಗಾಗಿ ದೇಶದ ಪ್ರತಿಯೊಬ್ಬರೂ ಶ್ರಮಿಸಬೇಕಾದದ್ದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಸಿಎಮ್ಸಿಎ ಸಂಸ್ಥೆಯು ಯುವಜನರ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಯಾವುದೇ ಲಾಭವನ್ನು ಆಪೇಕ್ಷಿಸದೆ ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಶಾಲೆಯ ಪ್ರಾಂಶುಫಾಲರಾದ ರಂಗಹನುಮಯ್ಯ ಎನ್.ಕೆ ರವರು ಅಭಿಪ್ರಾಯಪಟ್ಟರು.
ಇವರು ಅಲ್ಪಸಂಖ್ಯಾತರ ನಿರ್ದೇಶನಾಲಯ ಹಾಗೂ ಸಿಎಮ್ಸಿಎ ಸಂಸ್ಥೆಯ ಸಹಯೋಗದಲ್ಲಿ ಸಿರಾ ತಾಲ್ಲೂಕಿನ ಭುವನಹಳ್ಳಿಯ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಕ್ಲಬ್ ಸದಸ್ಯರಿಗೆ ಬ್ಯಾಡ್ಜ್ ಹಾಕುವ ಮೂಲಕ “ಇಂಡಿಯನ್ಸ್ ಸಿಎಮ್ಸಿಎ ಕ್ಲಬ್” ಉದ್ಘಾಟನೆಯನ್ನು ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿಎಮ್ಸಿಎ ತರಗತಿಯಲ್ಲಿ ಅನೇಕ ಹೊಸ ಹೊಸ ವಿಚಾರಗಳನ್ನು ಮಕ್ಕಳು ಕಲಿಯುವುದಕ್ಕೆ ಅವಕಾಶವಿದೆ. ಮಕ್ಕಳು ತರಗತಿಯಲ್ಲಿ ತಾವು ಕಲಿತ ವಿಷಯಗಳನ್ನು ಸಹಪಾಠಿಗಳಿಗೆ, ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುವ ಮೂಲಕ ಅವರಲ್ಲಿಯೂ ಸಹ ಮೌಲ್ಯಗಳನ್ನು ಬಿತ್ತಬಹುದಾಗಿದೆ. ಈ ಮೂಲಕ ಸಮಾಜದ ಬದಲಾವಣೆಗಾಗಿ ಎಲ್ಲರನ್ನು ಒಳಗೊಳ್ಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು
ಕ್ಲಬ್ ಸದಸ್ಯರಿಗೆ ಬ್ಯಾಡ್ಜ್ ಹಾಕುವ ಮೂಲಕ “ಇಂಡಿಯನ್ಸ್ ಸಿಎಮ್ಸಿಎ ಕ್ಲಬ್” ಉದ್ಘಾಟನೆ
Leave a comment
Leave a comment