ತುಮಕೂರು : ದಿವಂಗತ ಜಿ.ಇಂದ್ರಕುಮಾರ್ರವರು ಕೇವಲ ಒಬ್ಬ ಪತ್ರಕರ್ತನಾಗಿ ಅಲ್ಲದೇ ಲೇಖಕಕರೂ ಆಗಿದ್ದರು. ಸಮಾಜದ ಅಶಕ್ತ ಜನರಿಗೆ ಬೆನ್ನೆಲುಬಾಗಿ ಸರ್ಕಾರದ ಮಟ್ಟದಲ್ಲಿ ತಾವೇ ಮುಂದೆ ನಿಂತು ನೆರವು ಕೊಡಿಸುವ ಕಾರ್ಯ ಮಾಡುತ್ತಿದ್ದರು ಎಂದು ಎಲೆರಾಂಪುರ ಕುಂಚಿಟಿಗ ಸಂಸ್ಥಾನ ಮಠದ ಶ್ರೀ ಹನುಮಂತನಾಥ ಸ್ವಾಮೀಜಿರವರು ಜಿ.ಇಂದ್ರಕುಮಾರ್ ಸ್ಮರಣಾರ್ಥ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸ್ಮರಿಸಿದರು.ಲೇಖಕ, ಪತ್ರಕರ್ತ ಜಿ.ಇಂದ್ರಕುಮಾರ್ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹನುಮಂತನಾಥ ಸ್ವಾಮೀಜಿಗಳು ದಿವಂಗತ ಇಂದ್ರಕುಮಾರ್ರವರು ಎಲ್ಲಾ ವರ್ಗದವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಜಾತಿ, ಮತ ಮೀರಿ ಸಮಾಜದ ಒಳ್ಳೆಯ ಕೆಲಸಗಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಿದ್ದರು. ಕೃಷಿ, ಹೈನುಗಾರಿಕೆ ಬಗ್ಗೆ ವಿಶೇಷ ಆಸಕ್ತಿಯನ್ನು ಇಟ್ಟುಕೊಂಡಿದ್ದರು, ಅವರ ಸಾಮಾಜಿಕ ಕಳಕಳಿ ಅವರ ಬರವಣಿಗೆ, ಮಾತುಗಳಲ್ಲಿ ವ್ಯಕ್ತವಾಗುತ್ತಿದ್ದರು. ಜಾತ್ಯಾತೀತವಾದ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡಿದ್ದರು. ಚಿಂತಕರಾಗಿ, ಸಾಹಿತಿಗಳಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸೃಜನಶೀಲ ಸೇವೆ ಸಲ್ಲಿಸಿದ್ದಾರೆ. ಇವರ ಸಾಧನೆಗಳು ಅನೇಕ ಪ್ರಶಸ್ತಿಗಳು ಹರಸಿ ಬಂದಿದ್ದವು. ಆದರೆ ಕಡಿಮೆ ವಯಸ್ಸಿಗೆ ನಮ್ಮನ್ನೆಲ್ಲ ಅಗಲಿದ್ದು ದುರಂತದ ಸಂಗತಿ ಎಂದರು.ಕುAಚಿಟಿಗ ಸಮಾಜಕ್ಕೆ ಇಂದ್ರಕುಮಾರ್ರವರು ಸೇರಿಲ್ಲವಾದರೂ ಮಠಕ್ಕೆ ಸಂಬAಧಿಸಿದ ಕಡತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಫೈಲ್ ತರಿಸಿ ಸೈನ್ ಹಾಕಿಸಿ ಅನುಕೂಲ ಮಾಡಿಕೊಟ್ಟರು ಎಂದು ಶ್ರೀಗಳು ಸ್ಮರಿಸಿದರು. ಇಂದ್ರಕುಮಾರ್ ಅವರು ಆಸ್ತಿ ಮಾಡಲಿಲ್ಲ, ಹಣ ಮಾಡಲಿಲ್ಲ, ಬದಲಾಗಿ ಜನರ ಪ್ರೀತಿಯನ್ನು ಸಂಪಾದಿಸಿದ್ದರು ಡಯಾಲಿಸಿಸ್ ನಡುವೆಯೇ ಮಠಕ್ಕೆ ಬಂದು ಹೋಗುತ್ತಿದ್ದರು. ರಾಗಿ ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು, ಸುಮಾರು ೩೦೦ ಪುಟಗಳಷ್ಟು ಬರವಣಿಗೆ ಮಾಡಿದು ಅದು ಪ್ರಕಟವಾಗಬೇಕಿದೆ, ಅನೇಕ ಕೃತಿಗಳನ್ನು ಪ್ರಕಟಿಸುವ ಜೊತೆಗೆ ವಿವಿಧ ಲೇಖಕರ ಬರಹಗಳನ್ನು ಸಂಪಾದಿಸಿ ಮೌಲ್ಯಯುತ ಕೃತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆಂದು ಶ್ರೀಗಳು ತಿಳಿಸಿದರು.ಮುಂದುವರೆದು ಲೇಖಕಿ ಬಿ.ಸಿ.ಶೈಲಾ ನಾಗರಾಜ್ ಮಾತನಾಡಿ ತಮ್ಮೊಂದಿಗಿನ ಇಂದ್ರಕುಮಾರ್ ಒಡನಾಟವನ್ನು ಸ್ಮರಿಸಿದರು. ನಂತÀರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಪತ್ರಕರ್ತರ ಸಂಘಕ್ಕೆ ಇಂದ್ರಕುಮಾರ್ರವರ ಕೊಡುಗೆ, ಬರವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರಲ್ಲದೇ ಅವರು ನಮ್ಮ ಜಿಲ್ಲಾ ಕೆ.ಯು.ಡಬ್ಲೂö್ಯ.ಜೆ. ಸಂಘಕ್ಕೆ ಸದಾ ಸ್ಮರಣೀಯರು ಎಂದು ತಿಳಿಸಿದರು. ಇನ್ನು ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಆರ್.ದೊಡ್ಡಲಿಂಗಪ್ಪ ಮಾತನಾಡಿ ಇಂದ್ರಕುಮಾರ್ರವರು ತಮ್ಮನ್ನು ಭೇಟಿಯಾಗುತ್ತಿದ್ದ ಸಂದರ್ಭದಲ್ಲಿ ತಮಗಾಗುತ್ತಿದ್ದ ನೋವನ್ನು ಹೇಳಿಕೊಳ್ಳುತ್ತಿರಲಿಲ್ಲ, ಆದರೆ ಅವರು ಜೀವನದಲ್ಲಿ ಎಲ್ಲಾ ರೀತಿಯ ನೋವು ನಲಿವುಗಳನ್ನು ಕಂಡAತಹ ವ್ಯಕ್ತಿ ಇಂದು ಅವರು ನಮ್ಮೊಂದಿಗೆ ಇಲ್ಲದೇ ಇರುವುದು ಬೇಸರದ ಸಂಗತಿ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಇಂದ್ರಕುಮಾರ್ ಅವರ ಪತ್ನಿ ಜಯಶ್ರೀರವರು ಉದ್ಘಾಟಿಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅಗಮ್ಯ ಸೇವೆಗಳನ್ನು ಗುರ್ತಿಸಿ ಸನ್ಮಾನವನ್ನು ನೆರವೇರಿಸಲಾಯಿತು, ಸಾಹಿತ್ಯ ಲೋಕದಲ್ಲಿ ಸೇವೆ ಸಲ್ಲಿಸುತ್ತಿರುವ ಲೇಖಕಿ ಶ್ರೀಮತಿ ವಿಜಯಮೋಹನ್, ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಂಗಕರ್ಮಿ ಮೆಳೇಹಳ್ಳಿ ದೇವರಾಜ್, ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಮುನೀರ್ ಅಹಮದ್ ಹಾಗೂ ಪತ್ರಿಕಾ ಛಾಯಾಗ್ರಾಹಕ ಎಸ್.ಉದಯ್ಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.