ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸ್ವಾಮಿ ವಿವೇಕಾನಂದ ನಗರ ಪಾವಗಡ ಹಾಗೂ ಡಾಕ್ಟರ್ ಎಸ್ ಆರ್ ಚಂದ್ರಶೇಖರ್ ಮತ್ತು ಶ್ರವಣ ಸಂಸ್ಥೆ ಬೆಂಗಳೂರು ವತಿಯಿಂದ ಬರದ ನಾಡಿನ ವರವಾಗಿರುವಂತಹ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಡಿ ಭಾಗದಲ್ಲಿ ಆರಂಭಿಸುತ್ತಿರುವ ಏಕೈಕ ಸುಸಜ್ಜಿತವಾದ ವಾಕ್ಯಗಳಿಂದ ನಡೆಯುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ ಇದಕ್ಕೆ ಸಹಕಾರವಾಗಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆ ವತಿಯಿಂದ ಕೈಗೊಳ್ಳಲಾಗಿದೆ ಎಂದು ಶ್ರೀ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಅಧ್ಯಕ್ಷರಾದ ಶ್ರೀ ಜಪಾನಂದ ಸ್ವಾಮೀಜಿ ರವರು ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಥಿಯಲ್ಲಿ ಮಾತನಾಡುತ್ತಾ, ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮದ ನೂರಾರು ಜನರಿಗೆ ಕಳೆದ ಮೂರು ದಶಕಗಳಿಂದ ಪಾವಗಡ ತಾಲೂಕಿನ ಸುತ್ತಮುತ್ತಲಿನ ಜನರಿಗೆ ಉನ್ನತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತ ಬಂದಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು.
ಮಹಾನಗರಗಳಲ್ಲಿ ದೊರೆಯುವ ಶ್ರವಣ ಹಾಗೂ ವಾಕ್ ದೋಷಗಳ ಪತ್ತೆ ಹಚ್ಚುವಿಕೆ ಹಾಗೂ ಸರಿಪಡಿಸುವಿಕೆಗೆ ತಜ್ಞರ ಸಹಕಾರದಿಂದ ನ್ಯೂನತೆ ಇರುವವರಿಗೆ ಎಲ್ಲ ರೀತಿಯ ಅಭ್ಯಾಸವನ್ನು ಹಾಗೂ ಪರಿಕರಗಳನ್ನು ನೀಡುವಂತಹ ಮಹತ್ ಯೋಜನೆಯಾಗಿದೆ. ಪಾವಗಡದಂತಹ ಹಿಂದುಳಿದ ಗ್ರಾಮಾಂತರ ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನದೊAದಿಗೆ ಈಗಾಗಲೇ ನೇತ್ರ ಚಿಕಿತ್ಸೆಗಳನ್ನು, ಕುಷ್ಠರೋಗ, ಕ್ಷಯರೋಗ, ಹೆಚ್.ಐವಿ/ಏಡ್ಸ್ ಮುಂತಾದ ಯೋಜನೆಗಳೊಂದಿಗೆ ಇದೀಗ ಸಂಪೂರ್ಣ ಸುಸಜ್ಜಿತವಾದ ಇ.ಎನ್.ಟಿ. ವಿಭಾಗವನ್ನು ನವೀಕರಿಸಿ ಜೊತೆಗೆ ನೂತನ ಆಡಿಯೋಮೆಟ್ರಿ ಸೆಂಟರ್ ಮುಂತಾದವುಗಳನ್ನು ಹಾಗೂ ಬೆಂಗಳೂರಿನ ಡಾ.ಎಸ್.ಆರ್.ಚಂದ್ರಶೇಖರ್ ಸಂಸ್ಥೆಯ ಸಹಕಾರದೊಂದಿಗೆ ಪ್ರತಿ ದಿನ ಈ ಯೋಜನೆಯ ಮೂಲಕ ನೂರಾರು ಜನರಿಗೆ ಸಹಾಯ ನೀಡುವ ಯೋಜನೆಯಾಗಿದೆ ಎಂದರು.
ಕಿವಿ ಮೂಗು ಗಂಟಲು ಭಾಗದ ಸೇವೆಗಳನ್ನು ವಿಸ್ತರಿಸುವ ಸಲುವಾಗಿ ಆಡಿಯೋ ಮೆಟ್ರಿ ಶ್ರವಣದೋಷದ ಪರೀಕ್ಷಾವಿಭಾಗವನ್ನು ಸಂಸ್ಥೆಯಲ್ಲಿ ಆರಂಭಿಸಲಾಗಿದೆ ಗ್ರಾಮೀಣ ಭಾಗದ ಅದರಲ್ಲಿ ಮುಖ್ಯವಾಗಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಮಕ್ಕಳಿಗೆ ಸರ್ವ ರೀತಿಯಲ್ಲಿ ಪರೀಕ್ಷೆಗಳನ್ನು ಕೈಗೊಂಡು ವಿವಿಧ ಸೌಲತ್ತುಗಳನ್ನು ನೀಡಲು ಅನುಕೂಲವಾಗುವ ರೀತಿಯಲ್ಲಿ ಪರಿಕರಕಗಳನ್ನು ವಿತರಣೆ ಮಾಡಲಾಗುವುದು
ಈ ಒಂದು ಮಹತ್ತರವಾದ ಯೋಜನೆಗೆ ನಾಡಿನ ಸುಪ್ರಸಿದ್ಧ ಸಂಸ್ಥೆಯಾದ ಡಾ. ಎಸ್ ಆರ್ ಚಂದ್ರಶೇಖರ್ ಸಂಸ್ಥೆ ಬೆಂಗಳೂರು ಅವರ ಸಹಕಾರದಿಂದ ಗ್ರಾಮಾಂತರ ವಿಭಾಗದಲ್ಲಿ ಮೊಟ್ಟಮೊದಲ ಗ್ರಾಮಾಂತರ ಶಾಖೆಯನ್ನು ಆರಂಭಿಸಲಾಗುತ್ತಿದೆ. ಸರಿಸುಮಾರು ೮೦ ಲಕ್ಷ ರೂ.ಗಳ ಮೌಲ್ಯದ ಯಂತ್ರೋಪಕಣಗಳನ್ನು ಅಳವಡಿಸಲಾಗಿದೆ, ಈ ಘಟಕವನ್ನು ಆಧುನಿಕ ತಂತ್ರಜ್ಞಾನಗಳೊAದಿಗೆ ಹಾಗೂ ಯಂತ್ರೋಪಕರಣಗಳೊAದಿಗೆ ಮತ್ತು ಉನ್ನತೀಕರಿಸಲಾಗಿದೆ. ಹಾಗೂ ಗಡಿ ಭಾಗದ ಜನರಿಗೆ ಅದರಲ್ಲೂ ಉಸಿರಾಟದ ತೊಂದರೆ, ಆಹಾರವನ್ನು ನುಂಗುವ ತೊಂದರೆ ಹಾಗೂ ಎಲ್ಲ ರೀತಿಯ ಸೂಕ್ಷಾ÷್ಮನುಸೂಕ್ಷ÷್ಮದ ಅತಿ ಪ್ರಯಾಸದ ಹಾಗೂ ಸಮಯ ತೆಗೆದುಕೊಳ್ಳುವ ಶಸ್ತç ಚಿಕಿತ್ಸೆಗಳನ್ನೂ ಸಹ ನೆರವೇರಿಸಲಾಗುತ್ತಿದೆ. ಎಂದು ತಿಳಿಸಿದರು.
ಜೂನ್ ೮ರಂದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ನೆರವೇರಿಸುತ್ತಾರೆ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಮೆಡಿಕಲ್ ಕಾಲೇಜು ಹಿರಿಯ ಪ್ರಾಧ್ಯಾಪಕಿÀ ಮುಖ್ಯಸ್ಥೆ ಡಾ. ಭಾರತಿ ಎಂ.ಬಿ. ಅಖಿಲ ಭಾರತ ಕಿವಿ, ಮೂಗು, ಗಂಟಲು ತಜ್ಞರ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರಾದ ಕೃಷ್ಣಾರೆಡ್ಡಿ, ಡಿಹೆಚ್ಓ ಡಾ.ಮಂಜುನಾಥ್, ಹಾಗೂ ಇತರ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಜಪಾನಂದ ಸ್ವಾಮೀಜಿ ಅವರು ತಿಳಿಸಿದರು.
ಆಡಿಯೋ ಮೆಟ್ರಿ ಕೊಠಡಿ ಹಾಗೂ ವಿಶೇಷ ತಪಾಸಣಾ ಯೋಜನೆಗಳ ಉದ್ಘಾಟನೆ
Leave a comment
Leave a comment