Tumkur ನಗರದ ಮರಳೂರು ಸಮೀಪದ ರಿಂಗ್ ರಸ್ತೆಯ ಸಮೀಪ ಅಶ್ವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭ ಮೇ ೧೨ ರಂದು ಮಧ್ಯಾಹ್ನ ೨.೩೦ ಗಂಟೆಗೆ ನಡೆಯಲಿದೆ ಎಂದು ಆಸ್ಪತ್ರೆಯ ಸಂಸ್ಥಾಪಕ ಹಾಗೂ ನಿರ್ದೇಶಕ ಡಾ. ರಾಘವೇಂದ್ರ ತಿಳಿಸಿದರು.
ಆಸ್ಪತ್ರೆಯ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಉದ್ಘಾಟಿಸುವರು ಎಂದರು.
ರೆಡ್ಕ್ರಾಸ್ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ನಾಗಣ್ಣ, ಜಿ.ಪಂ. ಸಿಇಒ ಡಾ. ಕೆ.ವಿದ್ಯಾಕುಮಾರಿ, ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್, ಪಾಲಿಕೆ ಆಯುಕ್ತ ದರ್ಶನ್, ಜಯದೇವ ಆಸ್ಪತ್ರೆಯ ಡಾ. ಶಂಕರ್, ಚಿಕ್ಕಣ್ಣದೇವರಹಟ್ಟಿ ಪ್ರಧಾನ ಅರ್ಚಕ ಪಾಪಣ್ಣ, ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಐಎಂಎ ರಾಜ್ಯ ಶಾಖೆ ಅಧ್ಯಕ್ಷ ಡಾ. ಎಸ್.ಶ್ರೀನಿವಾಸ್, ನಿರ್ದೇಶಕ ಡಾ. ಜಿ.ಎನ್.ಪ್ರಭಾಕರ್, ಸೇಕ್ರೇಡ್ ಹಾರ್ಟ್ ಗ್ರೂಪ್ನ ಸುಜಯ್ ಪಾಯಸ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು.
ಪ್ರಮುಖ ೨೦ ಮಂದಿ ದಾನಿಗಳ ಸಹಕಾರದೊಂದಿಗೆ ಈ ಆಸ್ಪತ್ರೆ ಆರಂಭವಾಗುತ್ತಿದ್ದು, ಮಾನವೀಯತೆಗೆ ಮೊದಲ ಆಧ್ಯತೆ ನೀಡುವ ಮೂಲಕ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆ ಮತ್ತು ಚಿಕಿತ್ಸೆಯನ್ನು ನೀಡುವ ಹಂಬಲ ಹೊಂದಿರುವುದಾಗಿ ತಿಳಿಸಿದರು.
ವಿಜಯ ಆಸ್ಪತ್ರೆಯ ಡಾ. ವಿಜಯಕುಮಾರ್, ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಸಮಾಜ ಸೇವಕ ಮನ್ಸೂರ್, ಪಾಪಣ್ಣ, ನರಸಿಂಹಮೂರ್ತಿ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ತುಮಕೂರಿನಲ್ಲಿ ಅಶ್ವಿನಿ ಆಸ್ಪತ್ರೆ ಉದ್ಘಾಟನೆ
Leave a comment
Leave a comment