ಸಂವಿಧಾನದ ಹಕ್ಕು ಪಡೆಯಬೇಕೆಂದರೆ ಸ್ಲಂ ಜನರು ಸಂಘಟಿರಾಗಬೇಕು -ಎ.ನರಸಿಂಹಮೂರ್ತಿ
ಇAದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಜಿ.ಜಿ.ವಿ ರೂರಲ್ ಡೆವಲಪ್ಮೆಂಟ್ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಪ್ರಾಯೋಜಕತ್ವದಲ್ಲಿ ನಗರದ ಕ್ಯಾತ್ಸಂದ್ರ ಎಳ್ಳರಬಂಡೆ ಸ್ಲಂ ಶಾಖೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಭಿರ ಹಾಗೂ ವಿವಿಧ ಕೌಶಲ್ಯಧಾರಿತ ತರಬೇತಿಗಳಿಗೆ ಜಾಗೃತಿ/ ನೊಂದಣಿ ಅಭಿಯಾನವನ್ನು ಸ್ಲಂ ಘೋಷಣೆ. ಹಕ್ಕುಪತ್ರ ಸಾಮಾಜಿಕ ಆರ್ಥಿಕ ಸಮೀಕ್ಷೆ ಕುರಿತು ಮುಂದಿನ ಹೋರಾಟಗಳ ಬಗ್ಗೆ ಬಹಿರಂಗ ಸಭೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಸತತ ೧೨ ವರ್ಷಗಳ ಪ್ರಯತ್ನವಾಗಿ ಕ್ಯಾತಂದ್ರದ ಎಳ್ಳರಬಂಡೆ ಪ್ರದೇಶವನ್ನು ಸ್ಲಂ ಕಾಯಿದೆ ೧೯೭೩ ಕಲಂ ೩ರಡಿಯಲ್ಲಿ ಘೋಷಣೆ ಮಾಡುವ ಮೂಲಕ ಸಂವಿಧಾನ ಬಡಜನರಿಗೆ ನೀಡಿರುವ ಹಕ್ಕನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ಫಲ ನೀಡಲಿದೆ ಎಂಬುದಕ್ಕೆ ಇಲ್ಲಿನ ಸ್ಲಂ ಶಾಖೆ ಪದಾಧಿಕಾರಿಗಳ ನಿರಂತರ ಹೋರಾಟದಿಂದ ಅನಧಿಕೃತ ಎಂಬ ಹಣೆ ಪಟ್ಟಿಯಿಂದ ಮುಕ್ತಿ ದೊರತಂತಾಗಿದೆ. ರಾಜ್ಯದ ಬಹುತೇಕ ನಗರ ಜನಸಂಖ್ಯೆಯಲ್ಲಿ ೪೦% ಅಧಿಕ ಜನರು ಸ್ಲಂಗಳಲ್ಲಿ ವಾಸ ಮಾಡುತ್ತಿದ್ದು ಇಂದಿಗೂ ಅತಂತ್ರವಾಗಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಧ್ವನಿಯಿಲ್ಲದ ಜನರ ಧ್ವನಿಯಾಗಿ ಸಂಘಟನೆ ನಗರದಲ್ಲಿ ಕೆಲಸ ಮಾಡುತ್ತಿದೆ. ಸರ್ಕಾರ ಅಥವಾ ಆಡಳಿತ ಪಕ್ಷಗಳು ನಗರಕ್ಕಾಗಿ ದುಡಿಯುವ ಜನರ ಸಂಕಷ್ಟಗಳಿAದ ಹೊರಬರಬೇಕಾದರೆ ಜನರಿಗೆ ಸಂವಿಧಾನದ ಅರಿವು ಬಹಳ ಮುಖ್ಯ ನಮ್ಮ ಭಾರತ ಸಂವಿಧಾನ ನಮ್ಮ ಹಕ್ಕಗಳನ್ನು ಪಡೆಯುವ ಖಾತ್ರಿ ನೀಡಿದೆ, ಈ ನೆಲೆಯಲ್ಲಿ ಜನರು ಜಾಗೃತರಾಗಬೇಕು ಸರ್ಕಾರಿ ಸವಲತ್ತು ಪಡೆಯಬೇಕೆಂದರೆ ಎಲ್ಲಾರು ಒಗ್ಗಟ್ಟಾಗಿ ಸಂಘಟಿತರಾಗಿ ಎಂದರು ಎಳ್ಳರಬಂಡೆ ಸ್ಲಂ ನಿವಾಸಿಗಳ ವಸತಿ ಹಕ್ಕು ಪತ್ರ, ಮತ್ತು ಮೂಲಭೂತ ಸೌಕರ್ಯ ಒದಗಿಸಲು ಪ್ರಮಾಣಿಕ ಪ್ರಯತ್ನ ಸ್ಲಂ ಸಂಘಟನೆ ಮಾಡುತ್ತದೆ ಎಂದರು.
ಸಂವಿಧಾನದ ಹಕ್ಕು ಪಡೆಯಬೇಕೆಂದರೆ ಸ್ಲಂ ಜನರು ಸಂಘಟಿರಾಗಬೇಕು
Leave a comment
Leave a comment