ತುಮಕೂರು : ಭಾರತೀಯ ಜೀವ ವಿಮಾ ನಿಗಮದಿಂದ ೬೭ನೇ ವಿಮಾ ಸಪ್ತಾಹ ಕಾರ್ಯಕ್ರಮವನ್ನು ಸೆಪ್ಟೆಂಬರ್ ೧ ರಿಂದ ೭ ರವರೆಗೆ ಆಯೋಜಿಸಲಾಗಿದೆ. ವಿಮಾ ಸಪ್ತಾಹಕ್ಕೆ ತುಮಕೂರು ಶಾಖೆ ೧ ರಲ್ಲಿ ಹಿರಿಯ ಶಾಖಾಧಿಕಾರಿ ಶ್ರೀ ಗಾಳೆಪ್ಪ ತಳವಾರ್ರವರು ದೀಪ ಬೆಳಗಿಸುವುದರ ಮೂಲಕ ಮೂಲಕ ಚಾಲನೆ ನೀಡಿದರು.
ಸಂಘಟನೆಯನ್ನು ಉದ್ದೇಶಿಸಿ ಮಾತನಾಡಿ ಗ್ರಾಹಕರ ನಂಬಿಕೆ ಉಳಿಸಿಕೊಂಡು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎಲ್.ಐ.ಸಿ.ಯ ಪಾತ್ರ ಅಪಾರ. ಲಕ್ಷಾಂತರ ವಿಮಾ ಪ್ರತಿನಿಧಿಗಳಿಗೆ ಎಲ್.ಐ.ಸಿ. ಜೀವನ ರೂಪಿಸಿಕೊಟ್ಟಿದೆ ಎಂದು ತಿಳಿಸಿದರಲ್ಲದೇ ವಿಮಾ ಪಾಲಿಸಿ ಆಕ್ಟ್ ಮೂಲಕ ಜನರ ಹಣ ಜನರ ಕಲ್ಯಾಣಕ್ಕಾಗಿ ಎನ್ನುವ ಸೂತ್ರದಲ್ಲಿ ಸಾಮಾಜಿಕ ಪರಿವರ್ತನೆಯಲ್ಲಿಯೂ ತನ್ನ ಪಾತ್ರವಹಿಸಿದೆ. ಪ್ರತೀ ವಿಭಾಗ ಮಟ್ಟದಲ್ಲಿ ಪ್ರತೀ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಂಸ್ಥೆ ನೀಡುತ್ತಿದೆ ಎಂದು ಹೇಳಿದರು. ಎಲ್.ಐ.ಸಿ.ಯಲ್ಲಿ ಒಮ್ಮೆ ಆನ್ಲೈನ್ನಲ್ಲಿ ನೊಂದಣಿ ಮಾಡಿಕೊಂಡಲ್ಲಿ ಎಲ್.ಐ.ಸಿ. ಸಂಸ್ಥೆಯ ಎಲ್ಲಾ ಸೇವೆಗಳು ಮತ್ತು ಹೊಸ ಸ್ಕೀಂ ಗಳ ಕುರಿತಾದ ಮಾಹಿತಿಯು ಲಭ್ಯವಾಗಲಿದೆ, ಇದೀಗ ಎಲ್.ಐ.ಸಿ. ಸಹ ಡಿಜಿಟಲೀಕರಣವಾಗಿದ್ದು ನವೀನ ಮಾದರಿಯಲ್ಲಿ ಗ್ರಾಹಕರಿಗೆ ಹತ್ತಿರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ-ಶಾಖಾಧಿಕಾರಿ ಬಾಲಸುಬ್ರಹ್ಮಣ್ಯಂ, ಯುಬಿಐ ಬ್ಯಾಂಕ್ ಮ್ಯಾನೇಜರ್ ಶರವಣನ್, ಪ್ರಥಮ ಪಾಲಿಸಿದಾರ ಸಂದೀಪ್, ಅಭಿವೃದ್ಧಿ ಅಧಿಕಾರಿಗಳು, ಶಾಖಾ ಸಿಬ್ಬಂದಿಗಳು, ವಿಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ನಂಜುAಡ ಸ್ವಾಮಿರವರು ಕಾರ್ಯಕ್ರಮವನ್ನು ನಿರೂಪಿಸಿದರು, ಅಭಿವೃದ್ಧಿ ಅಧಿಕಾರಿ ಎಂ.ಎಸ್.ಭಟ್ ಸ್ವಾಗತಿಸಿದರು, ಎ.ಎ.ಓ. ಸಾಗಾರ್ ವಂದಿಸಿದರು.