ತುಮಕೂರು ತಾಲೂಕು, ಅದರಲ್ಲಿಯೂ ಗ್ರಾಮಾಂತರ ಕ್ಷೇತ್ರದಲ್ಲಿ ಅಬಕಾರಿ ಇಲಾಖೆ ಸಂಪೂರ್ಣವಾಗಿ ನಿಷ್ಕಿçಯಗೊಂಡಿದ್ದು, ಗ್ರಾಮಾಂತರ ಪ್ರದೇಶದ ಮನೆ ಮನೆಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮದ್ಯಕ್ಕೆ ಕಡಿವಾಣ ಹಾಕದಿದ್ದರೆ, ಸಂಬAಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಶಾಸಕ ಬಿ.ಸುರೇಶಗೌಡ ಎಚ್ಚರಿಕೆ ನೀಡಿದ್ದಾರೆ.ನಗರದ ತಾ.ಪಂ.ಸಭಾAಗಣದಲ್ಲಿ ಶಾಸಕ ಅಧ್ಯಕ್ಷತೆಯಲ್ಲಿ ನಡೆದ ೨೦೨೩-೨೪ ನೇ ಸಾಲಿನ ಮೊದಲ ತ್ರೆöÊಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ಮಾತನಾಡಿದ ಅವರು,ಗಂಗೋನಹಳ್ಳಿಯಲ್ಲಿ ಯುವಕನೊಬ್ಬ ಮದ್ಯ ಕುಡಿದ ಅವಲಿನಲ್ಲಿ ಕೆರೆಗೆ ಹಾರಿದ್ದಾನೆ.ಪ್ರತಿ ಗ್ರಾಮದ ಹತ್ತಾರು ಮನೆಗಳಲ್ಲಿ ಮದ್ಯ ಮಾರಾಟ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ.ಕೆಲವೊಂದು ಮದ್ಯದಂಗಡಿ ಮಾಲೀಕರೇ ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ಮನೆ ಮನೆಗಳಲ್ಲಿ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಆರೋಪವಿದೆ. ಕೂಡಲೇ ಆರೋಪವಿರುವ ಹಳ್ಳಿಗಳ ಮೇಲೆ ದಾಳಿ ಮಾಡಿ, ಕ್ರಮ ಕೈಗೊಳ್ಳದಿದ್ದರೆ ಮಹಿಳೆಯರೊಂದಿಗೆ ನಿಮ್ಮ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಶಾಸಕರು ಎಚ್ಚರಿಸಿದರು.ಅಬಕಾರಿ ನಿಯಮದ ಪ್ರಕಾರ ಸಿ.ಎಂ.೦೭ ಮತ್ತು ೦೯ ಅಂಗಡಿಗಳನ್ನು ಇಂತಿಷ್ಟು ಗಂಟೆಯಿAದ ತೆರೆಯಬೇಕೆಂಬ ನಿಯಮವಿದ್ದರೂ ಬೆಳಗ್ಗೆ ೭ ಗಂಟೆಗೆ ತೆರೆಯಲಾಗುತ್ತಿದೆ.ಅಲ್ಲದೆ ಗ್ರಾಮೀಣ ಭಾಗದಲ್ಲಿ ರೈತಾಪಿ ಜನರಿಗೆ ಕುಡಿಯಲು ಮದ್ಯ ಸಾಲ ನೀಡಿ,ದುಬಾರಿ ಹಣ ವಸೂಲಿ ಮಾಡಿರುವ ಕ್ರಮಗಳಿವೆ.ನಿಮ್ಮ ಇಲಾಖೆಗೆ ಜನರ ಪ್ರಾಣಕ್ಕಿಂತ ಅದಾಯಕ್ಕಷ್ಟೇ ಸಿಮಿತವಾಗಿದೆ.ಹಾಗಾಗಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಇಲ್ಲಿನ ಅಧಿಕಾರಿಗಳ ವಿರುದ್ದ ನೇರ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತೇನೆ.ಅಲ್ಲದೆ ಸದನದಲ್ಲಿಯೂ ಪ್ರಾಸ್ತಾಪಿಸುತ್ತೇನೆ ಎಂದು ಶಾಸಕ ಬಿ.ಸುರೇಶಗೌಡ ತಿಳಿಸಿದರು.