ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ,ಸಕ್ರಮದಲ್ಲಿ ಅನಧಿಕೃತ ನೀರಾವರಿ ಪಂಪ್ ಸೇಟ್ ಗಳ ಸಕ್ರಮಕ್ಕೆ ಹಣ ಕಟ್ಟಿರುವ ಸುಮಾರು ೨೧೮೯ ರೈತರ ಪಂಪಸೆಟ್ ಗಳ ಸಕ್ರಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಬಿ.ಸುರೇಶಗೌಡ ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರಿAಗ್ ಪ್ರಶಾಂತ್ ಕೂಡಗಿ ಅವರಿಗೆ ಸೂಚನೆ ನೀಡಿದ್ದಾರೆ.ಬೆಸ್ಕಾಂ ಇಇ ಅವರ ಕಛೇರಿಯಲ್ಲಿಂದ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಚ್.ವಿ.ಡಿ.ಎಸ್ ಮತ್ತು ಯುಎನ್ ಐಪಿ ಅಡಿಯಲ್ಲಿ ಈಗಾಗಲೇ ೧೧,೨೨೯ ಐಪಿ ಸೇಟ್ ಗಳಿಗೆ ಟಿ.ಸಿ.ಅಳವಡಿಸಿದ್ದು,ಯುಎನ್ಐಪಿ ಅಡಿಯಲ್ಲಿ ಬಾಕಿ ಇರುವ ಪ್ರಕರಣಗಳ ಜೊತೆಗೆ ಹೊಸದಾಗಿ ಅರ್ಜಿ ಸಲ್ಲಿಸಿರುವ ೫೧೫ ಪ್ರಕರಣಗಳನ್ನು ತ್ವರಿತವಾಗಿ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಕ್ಷೇತ್ರದಲ್ಲಿನ ಎಲ್ಲಾ ಮನೆಗಳಿಗೆ ಅಡೆಚಣೆಯಿಲ್ಲದೆ ವಿದ್ಯುತ್ ಸರಬರಾಜು ಮಾಡಲು ಅರಿಯೂರು, ಗೂಳೂರು ಮತ್ತು ನೇರಳಾಪುರ ಗ್ರಾಮಗಳಗಳಲ್ಲಿ ೧೧ ಕೆ.ವಿ.ಉಪವಿದ್ಯುತ್ ಸ್ಥಾವರಗಳನ್ಬು ಸ್ಥಾಪಿಸಲು ಸರಕಾರಿ ಜಾಗವನ್ನು ಗುರುತಿಸಿ, ಮಂಜೂರಾತಿಗೆ ಪತ್ತ ಬರೆಯುವಂತೆ ಬೆಸ್ಕಾಂ ಇಇ ಮತ್ತು ಎಲ್ಲಾ ಸಬ್ ಡಿವಿಜ್ಹನ್ ಗಳ ಎಇಇ ಅವರುಗಳಿಗೆ ತಾಕೀತು ಮಾಡಿದ ಸುರೇಶಗೌಡ, ಈಗಿರುವ ಕೆಲವು ೮ ಸಾವಿರ ಮೇಘಾ ವ್ಯಾಟ್ ಸ್ಥಾವರಗಳನ್ಬು ಬೇಡಿಕೆಗೆ ಅನುಗುಣವಾಗಿ ೨೦ ಸಾವಿರ ಮೇ.ವ್ಯಾ.ಗೆ ಹೆಚ್ಚಿಸಲು ಈಗಾಗಲೇ ಕೆ.ಆರ್.ಇ.ಸಿ.ಗೆ ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಅನುಮೋಧನೆ ಕೊಡಿಸಲು ಅಗತ್ಯ ಕ್ರಮ ವಹಿಸಲು ಸಂಬAಧಿಸಿದ ಸಚಿವರೊಂದಿಗೆ ಮಾತನಾಡುವ ಭರವಸೆ ನೀಡಿದರು.