ತೊಂದರೆಯಾಗುತ್ತಿದೆ.ಗ್ರಾಮ ಆಡಳಿತಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರುಗಳು ಇದರ ಬಗ್ಗೆ ಗಮನ ಹರಿಸಿ, ನಕಾಶೆ ದಾರಿ,ಬಂಡಿ ಜಾಡು, ರಾಜಗಾಲುವೆ ಒತ್ತುವರಿ ಮಾಡಿದ್ದರೆ ಸೂಕ್ತ ಕ್ರಮವಹಿಸಿ.
ಕ್ಷೇತ್ರದಲ್ಲಿ ರೈತರು ಫಾರಂ 50-53 ಮತ್ತು 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಉರ್ಡಿಗೆರೆ, ಗೂಳೂರು, ಹೆಬ್ಬೂರು, ಹೊನ್ನುಡಿಕೆ,ಊರುಕೆರೆ ಬಾಗದಲ್ಲಿ ಸುಮಾರು 4386 ಅರ್ಜಿ ಗಳು ಬಂದಿದ್ದು,ಇವುಗಳಲ್ಲಿ 4214 ಅರ್ಜಿಗಳನ್ನು ಪರಿಶೀಲನೆ ನಡೆಸಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಶಾಸಕರು ರಾಮೇನಹಳ್ಳಿ,ಕಲ್ಕಕೆರೆ,ಚೋಳಾಪುರ, ಡಣಾನಾಯಕ ನಪುರ,ದೊಡ್ಡಗೊಲ್ಲಹಳ್ಳಿ, ಸೋರೆಕುಂಟೆ ಮತ್ತಿತರ ಕಡೆಗಳಲ್ಲಿ ನಮ್ಮ ಕಾಲದಲ್ಲಿ ನೀಡಿದ ಹಕ್ಕುಪತ್ರಗಳಿಗೆ ಖಾತೆ, ಪಹಣಿ ಮಾಡಿಲ್ಲ.ಸೋರೆಕುಂಟೆ ಗ್ರಾಮದ ಸರ್ವೆ ನಂ 41ರ ಮೇಲಿದ್ದ ಕೇಸು ಖುಲಾಸೆಯಾಗಿದ್ದು,ಫಲಾನುಭವಿಗಳಿಗೆ ಪಹಣಿ, ಖಾತೆ ಮಾಡಿಕೊಡಲು ಶಾಸಕ ಬಿ.ಸುರೇಶಗೌಡರು ಸೂಚಿಸಿದರು.
ರಾಮಗೊಂಡನಹಳ್ಳಿ ಸರ್ವೆ ನಂ 35 ರಲ್ಲಿ ದಲಿತ ಜನಾಂಗಕ್ಕೆ ಸೇರಿದ ಲಕ್ಷ್ಮೀದೇವಮ್ಮ ಎಂಬುವವರು ಕಳೆದ 70 ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದು,ತೆಂಗು, ಅಡಿಕೆ, ಮಾವಿನ ಸಸಿಗಳನ್ನು ನೆಟ್ಟಿದ್ದಾರೆ.ಅಲ್ಲದೆ ಲಕ್ಷ್ಮಿದೇವಮ್ಮ ಅವರ ತಂದೆಯ ಸಮಾದಿಯು ಕೂಡ ಇದೇ ಜಾಗದಲ್ಲಿದೆ.ಇವರು ಸರಕಾರದ ನಿಯಮದ ಅನ್ವಯ 1998ರಲ್ಲಿ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿದ್ದಾರೆ.2018 ರಲ್ಲಿ ಹಕ್ಕುಪತ್ರ ನೀಡಲಾಗಿದೆ. ಆದರೆ ಅರಣ್ಯ ಇಲಾಖೆಯ ತಕರಾರು ಎಂದು ಇದುವರೆಗೂ ಖಾತೆ, ಪಹಣಿ ಮಾಡಿಲ್ಲ. ಅಲ್ಲದೆ ಹೈಕೋರ್ಟ್ ಕೂಡ ಮೂಲ ದಾಖಲೆಗಳನ್ನು ಪರಿಶೀಲಿಸಿ ತಹಶೀಲ್ದಾರ್ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.ಹೈಕೋರ್ಟ್ ಆದೇಶವನ್ನು ಸರಿಯಾಗಿ ಓದದೆ ಇದುವರೆಗೂ ಖಾತೆ ಮಾಡಿಲ್ಲ.ಕೂಡಲೇ ಖಾತೆ ಮಾಡಿಕೊಡುವಂತೆ ತಹಶೀಲ್ದಾರರಿಗೆ ತಾಕೀತು ಮಾಡಿದರು.
ಇದೇ ಪ್ರಕಾರ ಸಭೆ ನಡೆಯುವ ವೇಳೆ ಅರ್ಜಿ ಹಿಡಿದು ಬಂದ ಸಾರ್ವಜನಿಕ ರು ಅಹವಾಲು ಕೇಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನ ನಡೆಸಿದರು. ಸಭೆಯಲ್ಲಿ ತಹಶೀಲ್ದಾರ್ ಸಿದ್ದೇಶ್,ಇಓ ಜೈಪಾಲ್,ಬಿ.ಇ.ಒ ಹನುಮನಾಯಕ್ ಗ್ರೆಡ್ 2 ತಹಶೀಲ್ದಾರ್ ಕಮಲಮ್ಮ,ಭೂಮಿ ಕೇಂದ್ರದ ಶಿರಸ್ತೆದಾರ್ ನರಸಿಂಹರಾಜು ಸೇರಿದಂತೆ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಸರ್ವೆ ಯರ್ಗಳು ಭಾಗವಹಿಸಿದ್ದರು.
341 ಸ್ಮಶಾನ ಭೂಮಿ ಗುರುತಿಸಿ ಇಲ್ಲವಾದಲ್ಲಿ ಕ್ರಮ, ಸುರೇಶ್ ಗೌಡ ಬಿಜೆಪಿ ಶಾಸಕ ಗ್ರಾಮಾಂತರ
Leave a comment
Leave a comment