ತುಮಕೂರು: ನನ್ನ ಇದುವರೆಗಿನ ರಾಜಕೀಯ ಜೀವನದಲ್ಲಿ ತಿಗಳ ಸಮುದಾಯ ಆರಂಭದಿಂದಲೂ ಜೊತೆಗಿದ್ದು ಸಹಕಾರ ನೀಡುತ್ತಾ ಬಂದಿದ್ದು, ನನ್ನನ್ನು ಶಾಸಕನಾಗಿ ನೋಡದೆ, ಓರ್ವ ಮನೆ ಮಗನಂತೆ ಪರಿಗಣಿಸಿದ್ದು, ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿ ಸೌಧದಲ್ಲಿಂದು ತಿಗಳ ಸಮುದಾಯಕ್ಕೆ ಸೇರಿದ ಯಜಮಾನರು, ಅಣೆಕಾರರು, ಮುದ್ರೆಯವರ ಸಭೆ ನಡೆಸಿ ಮಾತನಾಡಿದ ಅವರು, ನಿಮ್ಮೆಲ್ಲರ ಆಶೀರ್ವಾದಿಂದ ಶಾಸಕನಾಗಿ ಮತ್ತೊಮ್ಮೆ ಆಯ್ಕೆಯಾಗುವುದು ಖಚಿತ.ತುಮಕೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ನೆನೆಗುದಿಗೆ ಬಿದ್ದಿರುವ ತಿಗಳ ಸಮಾಜದ ಸಮುದಾಯ ಭವನಗಳನ್ನು ಪೂರ್ಣಗೊಳಿಸಿಕೊಡುವ ಭರವಸೆ ನೀಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ತಿಗಳ ಸಮುದಾಯ ರಾಜಕೀಯವಾಗಿ ಬೆಳೆಯಲು ಅಗತ್ಯವಿರುವ ಎಲ್ಲಾ ಅವಕಾಶಗಳನ್ನು ಕಲ್ಪಿಸಿದ್ದೇನೆ.ಅಲ್ಲದೆ ಶೈಕ್ಷಣಿಕ ಅಭಿವೃದ್ದಿಗಾಗಿ ಬುಗಡನಹಳ್ಳಿ, ಪಾಲಸಂದ್ರಗಳಲ್ಲಿ ಹೈಟೆಕ್ ಶಾಲೆ ನಿರ್ಮಾಣ ಮಾಡಿ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ ಗ್ರಾಮಾಂತರದಲ್ಲಿ ಒಂದು ಎಕರೆ ಜಾಗ ಗುರುತಿಸಿ, ಬೃಹತ್ ಸಮುದಾಯಭವನ ನಿರ್ಮಿಸುವ ಗುರಿ ಹೊಂದಿದ್ದೇನೆ.ಇದರ ಜೊತೆಗೆ ದೇವಸ್ಥಾನಗಳ ಅಭಿವೃದ್ದಿಗೂ ಅದ್ಯತೆ ನೀಡುವುದಾಗಿ ಬಿ.ಸುರೇಶಗೌಡ ನುಡಿದರು.
ಇದುವರೆಗಿನ ರಾಜಕೀಯ ಜೀವನದಲ್ಲಿ ತಿಗಳ ಸಮುದಾಯದವರ ಜೊತೆ ಇದ್ದೇನೆ
Leave a comment
Leave a comment