ತುಮಕೂರು ದಸರಾ ಸಮಿತಿವತಿಯಿಂದ ೩೩ನೇ ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ ೨೧ ರಿಂದ ೨೪ರವರೆಗೆ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸರಾ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ಪರಮೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ನಾಡಹಬ್ಬವಾಗಿರುವ ದಸರಾ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು,ಜಿಲ್ಲೆಯ ಸಮಸ್ತ ನಾಗರಿಕರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಕೋರಿದರು.
ಅಕ್ಟೋಬರ್ ೨೧ರ ಶನಿವಾರದಂದು ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ ೪ ಕಲ್ಯಾಣೋತ್ಸವದೊಂದಿಗೆ ೨೦೨೩ನೇ ಸಾಲಿನ ದಸರಾ ಕಾರ್ಯಕ್ರಮಗಳು ಆರಂಭವಾಗುತ್ತಿದ್ದು,ಬೆAಗಳೂರಿನ ಶ್ರೀವಾನಿ ಫೌಂಡೇಶನ್ ವತಿಯಿಂದ ‘ಶ್ರೀ ಶ್ರೀನಿವಾಸ ಕಲಶೋತ್ಸವ ವನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದ ಪೂರ್ವದಲ್ಲಿ ಕೊಸಗಿ ಗುರುರಾಜ್ ಮತ್ತು ತಂಡದವರಿAದ ನಾದೋಪಾಸನೆಯ ಅಂಗವಾಗಿ ಶ್ರೀವಾರಿ ಕೀರ್ತನೆಗಳನ್ನು ಸಮರ್ಪಿಸುತ್ತಿದ್ದಾರೆ. ಕಲ್ಯಾಣೋತ್ಸವದ ನಂತರ ಸ್ವಾಮಿಯ ಪ್ರಸಾದ ವಿತರಣೆ ವ್ಯವಸ್ಥೆ ಇರುತ್ತದೆ.
ಅಕ್ಟೋಬರ್ ೨೨ರ ಭಾನುವಾರದಂದು ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ ೧೦ ಗಂಟೆಗೆ ಯೋಗ ದಸರಾ ಕಾರ್ಯಕ್ರಮ ನಡೆಯಲಿದ್ದು, ಶ್ರೀವಚನಾನಂದ ಶ್ರೀಗಳು ನಡೆಸಿಕೊಡಲಿದ್ದಾರೆ. ಸಂಜೆ ೫.೩೦ ಗಂಟೆಗೆ ವರ ಉತ್ಸವದ ಸಾಂಸ್ಕöÈತಿಕ ಕಾರ್ಯದ ಉದ್ಘಾಟನೆಯನ್ನು ಚಲನಚಿತ್ರ ಮತ್ತು ಕಿರುತೆರೆಯ ನಟರು ಹಾಗೂ ವಾಗ್ಮಿಗಳಾದ ಸುನೀಲ್ ಪುರಾಣಿಕ್ ನೆರವೇರಿಸಲಿದ್ದಾರೆ.ತುಮಕೂರಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸುತಿದ್ದು,ತಿಪಟೂರಿನ ಬಿಳಿಗೆರೆ ಸಾವಯವ ಕೃಷಿಕರಾದ ಚಂದ್ರಪ್ರಕಾಶ್ ಅವರನ್ನು ಗೌರವಿಸಲಾಗುವುದು.ನಂತರ ಕಾಮಿಡಿ ಕಿಲಾಡಿ ಖ್ಯಾತಿಯ ಜಗಪ್ಪ ಮತ್ತು ತಂಡದವರಿAದ ಹಾಗೂ ರಸ ಸÀಂಜೆ ಕಾರ್ಯಕ್ರಮ ಜರುಗಲಿದೆ.
ಆಕ್ಟೋಬರ್ ೨೩ರ ಸೋಮವಾರದಂದು ಸಾಂಸ್ಕöÈತಿಕ ನಾಡಹಬ್ಬವನ್ನು ಸಂಜೆ ೫.೩೦ ಗಂಟೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಷಿ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ. ಪರಮೇಶ್ವರ್,ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆಗಮಿಸುತ್ತಿದ್ದಾರೆ. ಇವರೊಂದಿಗೆ ಸಂಸದರಾದ ಜಿ.ಎಸ್. ಬಸವರಾಜು,ತುಮಕೂರು ನಗರ ಶಾಸಕರಾದ ಜಿ.ಬಿ. ಜೋತಿಗಣೇಶ್,ತುಮಕೂರು ಗ್ರಾಮಾಂತರ ಶಾಸಕರಾದ ಬಿ,ಸುರೇಶಗೌಡ,ಮಹಾನಗರಪಾಲಿಕೆಯ ಮಹಾಪೌರರಾದ ಶ್ರೀಮತಿ ಎಂ.ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ ಅವರು ಆಗಮಿಸುತ್ತಿದ್ದಾರೆ. ೪ ತಲೆಮಾರಿನ ಸಹಕುಟುಂಬಕ್ಕೆ ಜೀವಂತವಾಗಿಟ್ಟಿರುವ ತಿಪಟೂರಿನ ತರೀಕೆರೆ-ಕೊನೆಹಳ್ಳಿಯ ಶ್ರೀಮತಿ ಗಂಗಮ್ಮ ಶಿವರಾಮಯ್ಯ ಅವರನ್ನು ಸನ್ಮಾನಿಸಲಾಗುವುದು.ಸಾಂಸ್ಕöÈತಿಕ ನಾಡಹಬ್ಬದ ಉದ್ಘಾಟನೆ ನಂತರ ಕುಂದಾಪುರದ ರೂಪಕಲಾ ಬಳಗ ಅವರ ಮಜಾ ಟಾಕೀಸ್ ಖ್ಯಾತಿಯ ಮೂರು ಮುತ್ತುಗಳು ತಂಡದಿAದ ನಗೆಹಬ್ಬ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಕ್ಟೋಬರ್ ೨೪ರ ಮಂಗಳವಾರದAದು ವಿಜಯದಶಮಿ ಪ್ರಯುಕ್ತ ಧಾರ್ಮಿಕ ದಸರಾ ಪ್ರಯುಕ್ತ ಶ್ರೀ ಮನಿ, ಡಾ|ಕರಿವೃಷಭ ದೇಶಿಕೇಂದ್ರ ಶಿವಯೋಗಿ ಸ್ವಾಜೀಜಿಗಳ ನೇತೃತ್ವದಲ್ಲಿ ನಗರದ ವಿವಿಧ ದೇವಾಲಯಗಳ ಉತ್ತಮಮೂರ್ತಿಗಳ ಮೆರವಣಿಗೆ ನಡೆಸಲಿದೆ.ತಹಶೀಲ್ದಾರ್ ಸಿದ್ದೇಶ್ ಸಾಮೂಹಿಕ ಶಮೀಪೂಜೆ ನೆರವೇರಿಸಲಿದ್ದು, ಈ ಕಾರ್ಯಕ್ರಮದಲ್ಲಿ ಪತ್ರಕರ್ತ ಶ್ರೀಮತಿ ಲಕ್ಷ್ಮೀ ರಾಜ್ಕುಮಾರ್À ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ನಂತರ ಸಂಜೆ ೫.೩೦ ಗಂಟೆಗೆ ಆಕರ್ಷಕ ಕಲಾತಂಡಗಳೊAದಿಗೆ ವಿದ್ಯುತ್ ಅಲಂಕೃತ ನಗರದ ಪ್ರಮುಖ ರಾಜಮಾರ್ಗಗಳಲ್ಲಿ ನಗರದ ವಿವಿಧ ದೇವಾಲಯಗಳ ಉತ್ಸವಮೂರ್ತಿಯ ವೈಭವಯುತ ವಿಜಯದಶಮಿ ಮೆರವಣಿಗೆ ನಡೆಯಲಿದೆ ಎಂದು ಡಾ.ಪರಮೇಶ್ ವಿವರ ನೀಡಿದರು.
ದಸರಾ ಉತ್ಸವದ ಅಂಗವಾಗಿ ಸುಮಾರು ೨೮ ಎಲೆಕ್ಟಿçಕಲ್ ಗುತ್ತಿಗೆದಾರರು ನಗರದ ೨೮ ಕಿ.ಮಿ. ವಿದ್ಯುತ್ ಅಲಂಕಾರ ಮಾಡಿದ್ದು, ಸಾರ್ವಜನಿಕರು ವೀಕ್ಷಿಸಿ, ಅವುಗಳಿಗೆ ಮಾರ್ಕ್ಸ್ ನೀಡುವ ಮೂಲಕ ಯಾರು ಹೆಚ್ಚು ಆಕರ್ಷಕವಾಗಿ ವಿದ್ಯುತ್ ಅಲಂಕಾರ ಮಾಡಿದ್ದಾರೆ ಎಂದು ಎಸ್.ಎಂ.ಎಸ್ ಮೂಲಕ ತಿಳಿಸಿದರೆ, ಅಂತವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುದು ಎಂದು ದಸರಾ ಉತ್ಸವ ಸಮಿತಿ ಖಜಾಂಚಿ ಜಿ.ಎಸ್.ಬಸವರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಸರಾ ಉತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್,ಕಾರ್ಯಾಧ್ಯಕ್ಷ ಡಾ.ಪರಮೇಶ್,ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್,ಕಾರ್ಯದರ್ಶಿ ಮಹೇಶ್,ಖಜಾಂಚಿ ಜಿ.ಎಸ್.ಬಸವರಾಜು,ಸಂಯೋಜಕರಾದ ಗೋವಿಂದರಾವ್,ಉಪಾಧ್ಯಕ್ಷರಾದ ಗುರುಕುಲ ಮಲ್ಲಿಕಾರ್ಜುನ್, ಸಂದೀಪಗೌಡ ಮತ್ತಿತರರು ಉಪಸ್ಥಿತರಿದ್ದರು.
ಹೇಗಿರುತ್ತೆ ತುಮಕೂರಿನ ದಸರಾ, ಸಂಪೂರ್ಣ ಮಾಹಿತಿ
Leave a comment
Leave a comment