ತುಮಕೂರು: ಪರಿಸದರಲ್ಲೇ ಸಿಗುವಂತಹ ಗೀಡ ಮೂಲಿಕೆಗಳಿಂದ ನಿತ್ಯ ಮನೆಗಳಲ್ಲಿ ಉಪಯೋಗಿಸುವ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವಲ್ಲಿ ಮಹಿಳಾ ಸಂಘ,ಸAಸ್ಥೆಗಳು ಮುಂದೆ ಬರಬೇಕು ಎಂದು ಲಯನ್ಸ್ ಕ್ಲಬ್ ಬೆಂಗಳೂರು ಕಿಂಗ್ಸ್ನ ಅಧ್ಯಕ್ಷರಾದ ಮಂಜುನಾಥ್ ತಿಳಿಸಿದರು.
ತಾಲೂಕಿನ ಮೆಳೇಹಳ್ಳಿಯಲ್ಲಿ ಯನ್ಸ್ ಕ್ಲಬ್ ಬೆಂಗಳೂರು ಕಿಂಗ್ಸ್ ಹಾಗೂ ಮೆಳೇಹಳ್ಳಿಯ ಸಂಜೀವಿನಿ ಶ್ರೀ ಲಕ್ಷಿö್ಮÃ ಪುಡ್ ಪ್ರಾಡಕ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಿಳೆಯರಿಗೆ ಸ್ವಾವಲಂಬಿ ಸ್ವ ಉದ್ಯೋಗ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಹಿಳೆಯರು,ಸ್ತಿç ಶಕ್ತಿ ಸ್ವಸಾಯ ಸಂಘ ಮತ್ತು ಸಂಘ ಸಂಸ್ಥೆಗಳು ನೈಸರ್ಗಿಕವಾಗಿ ಸಿಗುವಂತಹ ಬೇವು,ಕರಿಬೇವು,ಅಲೋವೆರಾ,ನಿಂಬೆ, ದಾಸವಾಳ,ಗುಲಾಬಿ ಸೇರಿದಂತೆ ಸಸ್ಯಕಾಶಿ ಮತ್ತು ಹೂವುಗಳನ್ನು ಬಳಸಿ ಗೃಹ ಬಳಕೆಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಆರ್ಥಿಕವಾಗಿ ಸದೃಡರಾಗಬಹುದು ಎಂದು ತಿಳಿಸಿದರು.
ಗೀಡ ಮೂಲಿಕೆಗಳಿಂದ ನಿತ್ಯ ಮನೆಗಳಲ್ಲಿ ಬಳಸುವ ಮೆನಾಯಿಲ್,ಆಯಿಲ್,ಸೋಪ್,ಶಾಂಪು,ಸೋಪಿನ ಪೌಡರ್,ನೋವು ನಿವಾರಕ ಜಾಮ್ ಮುಂತಾದ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಹಣ ಸಂಪಾದಿಸಬಹುದು,ಇದರಿAದ ಮಹಿಳೆಯರ ಆರ್ಥಿಕ ಜೀವನ ಮಟ್ಟ ಸುಧಾರಣೆಯಾಗುತ್ತದೆ ಎಂದು ಹೇಳಿದರು.
ಸಂಜೀವಿನಿ ಶ್ರೀ ಲಕ್ಷಿö್ಮÃ ಪುಡ್ ಪ್ರಾಡಕ್ಟ್ ಸಂಸ್ಥೆಯ ಅಧ್ಯಕ್ಷೆ ಚಂದ್ರಕಲಾ ಮಾತನಾಡಿ, ನಮ್ಮ ಸಂಸ್ಥೆಯಿAದ ಹಲವಾರು ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಕೇವಲ ವಸ್ತುಗಳನ್ನು ಮಾರಾಟ ಮಾಡಿ ಮಾರಾಟ ಮಾಡುವುದಲ್ಲದೇ ಇತರೆ ಸಂಘ ಸಂಸ್ಥೆಯ ಮಹಿಳಾ ಸದಸ್ಯರಿಗೆ ಪುಡ್ ಪ್ರಾಡಕ್ಟ್ ಹಾಗೂ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ನಾವು ಕಳೆದ ವರ್ಷದಿಂದ ರೇಷ್ಮೆ ನೂಲು ಬಳಸಿ ಹಾರ,ಟೋಪಿ, ತಯಾರಿಸಿಕೊಡಲಾಗುತ್ತಿದೆ. ರೇಷ್ಮೆಯಿಂದ ಮಾಡಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಮತ್ತು ಬೆಲೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪದಾರ್ಥಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಾಗುವುದು ಎಂದು ತಿಳಿಸಿದರು.
ಈ ಕಾರ್ಯಗಾರದಲ್ಲಿ ನೈಸರ್ಗಿಕವಾಗಿ ಸಿಗುವಂತಹ ಬೇವು,ಕರಿಬೇವು,ಅಲೋವೆರಾ,ನಿಂಬೆ,ದಾಸವಾಳ, ಗುಲಾಬಿ ವಸ್ತುಗಳನ್ನು ಉಪಯೋಗಿಸಿಕೊಂಡು ಗೃಹ ಬಳಕೆ ಉತ್ಪನ್ನಗಳಾದ ಪೆನಾಯಿಲ್, ಆಯಿಲ್,ಸೋಪ್,ಶಾಂಪು,ಸೋಪಿನ ಪೌಡರ್,ನೋವು ನಿವಾರಕ eiÁಮ್ ಸೇರಿದಂತೆ ಹಲವಾರು ವಸ್ತುಗಳ ತಯಾರಿಕೆಯ ತರಬೇತಿಯನ್ನು ಮಹಿಳೆಯರಿಗಾಗಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ವಾಣಿ ಹಾಗೂ ಮಹಿಳಾ ಸಂಘ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.
ನೈಸರ್ಗಿಕ ವಸ್ತುಗಳಿಂದ ಗೃಹೋಪಯೋಗಿ ವಸ್ತು ಸಿದ್ದ
Household items are made from natural materials

Highlights
- Household items are made from natural materials
- ನೈಸರ್ಗಿಕ ವಸ್ತುಗಳಿಂದ ಗೃಹೋಪಯೋಗಿ ವಸ್ತು ಸಿದ್ದ
Leave a comment
Leave a comment