ತುಮಕೂರು ವಿಭಾಗದಲ್ಲಿಯೂ ಕಾರ್ಮಿಕರ ಕೊರತೆ-ತಾಂತ್ರಿಕ ಸಿಬ್ಬಂದಿಗಳ ಕೊರತೆ, ಹಳೇ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಾರಿಗೆ ಕಾರ್ಮಿಕರ ಹೆಚ್ಚಿರುವ ಕೆಲಸದ ಹೊರೆಯನ್ನು ಪರಿಗಣಿಸದೆ.ಸೇಡಿನ ಕ್ರಮವಾಗಿ ಶಿಕ್ಷಿಸಲು, ಇಂಕ್ರಿಮೆAಟ್ ಕಡಿತ ಮಾಡಿಸೋದು ಗ್ಲಾಸ್ ಏರ್ ಕ್ರಾಕ್ ಆದಲ್ಲಿ ಚಾಲಕರನ್ನು ಹೊಣೆಗಾರರನ್ನಾಗಿ ಮಾಡಿ ದಂಡ ಹಾಕಿ ಸಂಬಳದಲ್ಲಿ ಕಡಿತ ಮಾಡುತ್ತಾರೆ , ಫಾರಂ ೪ ನ್ನು ಪದೇ- ಪದೇ ಬದಲಾಯಿಸೋದು. ಂ/ಃ ಮಾರ್ಗಗಳನ್ನು ಕಡಿಮೆ ಮಾಡಿ ಕಾರ್ಮಿಕರಿಗೆ ಕೆಲಸದ ಒತ್ತಡ ಹೆಚ್ಚಳ ಮಾಡೋದು. ವಿರೋಧಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ. ರಿ ಸಿಐಟಿಯು ತುಮಕೂರು ವಿಭಾಗಿಯ ಕಛೇರಿ ಎದುರು ದಿ; ೬-೦೭-೨೦೨೩ರಂದು ಪತ್ರಿಭಟನೆ ನಡೆಸಿತ್ತು
ಈ ಹಿನ್ನೆಲೆಯಲ್ಲಿ ದಿನಾಂಕ; ೧೩- ೦೭- ೨೦೨೩ ರಂದು ತುಮಕೂರು ವಿಭಾಗೀಯ ನಿಯಂಣತ್ರಾಣಧಿಕಾರಿಗಳಾದ ಗಜೇಂದ್ರ ಕುಮಾರ್ ಅವರ ಅಧಕ್ಷತೆಯಲ್ಲಿ ಸಾರಿಗೆ ನೌಕರರ ಸಂಘ, ರಿ ಸಿಐಟಿಯು ಪ್ರದಾಧಿಕಾರಿಗಳ ಜೊತೆ ಜಂಟಿ ಸಭೆ ದಿ; ೧೩-೦೭-೨೦೨೩ ರಂದು ಸಂಜೆ ನಡೆಯಿತು.
ಕ.ರಾ.ರ ಸಾ. ಸ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಹೆಚ್ ಡಿ ರೇವಪ್ಪ, ಪ್ರಧಾನ ಕಾರ್ಯಧರ್ಶಿಗಳಾದ ಹೆಚ್.ಎಸ್. ಮಂಜುನಾಥ್ ,ಸಂಘದ ಜಿಲ್ಲಾ ಗೌರವ ಅಧ್ಯಕ್ಷರಾದ ಸೈಯದ್ ಮುಜೀಬ್ . ಜಿಲ್ಲಾ ಅಧ್ಯಕ್ಷರಾದ ದೇವರಾಜು , ಪ್ರಧಾನ ಕಾರ್ಯಧರ್ಶಿ ಸಮಿವುಲ್ಲಾ, ಖಚಾಂಚಿ; ರಾಜಣ್ಣ, ಉಪಾಧ್ಯಕ್ಷರಾದ ಮೋಹನ್ ದಾಸ್, ಖಲಂದರ್ ಅವರುಗಳು ಕಾರ್ಮಿಕರ ಸಮಸ್ಯೆಗಳನ್ನು ವಿವರಿಸಿದರು
ಸಮಸ್ಯೆಗಳನ್ನು ಅಲಿಸಿದ ನಿಯಂತ್ರಣಾಧಿಕಾರಿಗಳಾದ ಶ್ರೀ ಗಜೆಂದ್ರ ಕುಮಾರ್ ಅವರು ಸಮಸ್ಯೆಗಳನ್ನು ಪರಿಶಿಲಿಸಿ ಬಗೆ ಹರಿಸುವುದಾಗಿ ನುಡಿದರು. ರಾಜ್ಯದಲ್ಲೆ ತುಮಕೂರು ವಿಭಾಗದಲ್ಲಿನ ಕಾರ್ಮಿಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಹಾಗಾಗಿ ಈ ವಿಭಾಗ ಉತ್ತಮವಾದ ರೀತಿಯಲ್ಲಿ ಜನತೆಗೆ ಸೇವೆಗಳನ್ನು ನೀಡಿ,ಆದಾಯವನ್ನು ಗಳಿಸಲು ಸಾಧವಾಗಿದೆ ಎಂದರು.
ರಾತ್ರಿ ಹೊರಗೆ ನಿಲುಗಡೆಯಾಗುವ ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿಗೆ ಮಿಲಿಟರಿ ಮಾದರಿ ಹಾಸಿಗೆ, ಎಲ್ಲಾ ತಂಗುದಾಣಗಳಲ್ಲಿ ಮೂಲಭೂತವಾಗಿ ಅಗತ್ಯತೆಗಳನ್ನು ಕಲ್ಪಿಸಲು ಒತ್ತಾಯಿಸಲಾತು. ಓವರ್ ಟೈಮ್ ಅವನ್ನು ಸರಿಯಾಗಿ ನಮೂಧಿಸುವುದರಲ್ಲಿನ ಸಮಸ್ಯೆಗಳು- ಬಾರ್ ಡ್ಯೂಟಿ ಕಡಿಮೆ ಮಾಡಿ ಂಃ ಮಾರ್ಗಗಳನ್ನು ಹೆಚ್ಚಿಸಬೇಕು
ಬಾರ್ ಡ್ಯೂಟಿಯಲ್ಲಿ ಕಿಲೋಮೀಟರ್ ಜಾಸ್ತಿ ಮಾಡಿ ಔಖಿ ಕಡಿಮೆ ಮಾಡಿರುವುದರ ಬಗ್ಗೆ ,ಬಸ್ಸು ಗಳು ದುರಸ್ತಿ ಬಗ್ಗೆ ಉತ್ತಮ ಬಿಡಿಭಾಗಗಳನ್ನು ಒದಗಿಸುವ ಬಗ್ಗೆ , ಏರ್ ಕ್ರಾಕ್ ಬಂದ ಗ್ಲಾಸ್ ದಂಡ ಹಿಡಿದಿರುವುದು ವಾಪಸು ಕೊಡುವುದರ ಹಾಗು
೨೦೨೩ ಕ್ಕೆ ಸಂಬAಧಿಸಿದAತೆ ವಿಭಾಗದ ಎಲ್ಲಾ ಕಾರ್ಮಿಕರ ಖಾತೆಗೆ ಸಿಎಂಎಲ್ ಅಪ್ಡೇಟ್ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಎಲ್ಲಾ ಸಮಸ್ಯೆಗಳನ್ನು ಅಲಿಸಿದ ಅಧಿಕಾರಿಗಳು ಈ ಕರಿತು ಪರಿಶಿಲಿಸಿ ಸೂಕ್ತ ಕ್ರಮ ವಹಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು . ಮಾತುಕತೆಯಲ್ಲಿ ಜಿಲ್ಲಾ ಡಿ.ಎಂ.ಇ. ಷರಿಪ್, ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ಹಂಸ ವೀಣಾ, ಬಸವರಾಜು, ಮತ್ತಿತರರು ಇದ್ದರು
ಸಾರಿಗೆ ನೌಕರರ ಸಮಸ್ಯೆ ಅಲಿಸಿ ಬಗೆಹರಿಸುವ ಭರವಸೆ
Leave a comment
Leave a comment