ತುಮಕೂರು- ಸತ್ಯ, ಸಮಾನತೆಯ ಮತ್ತೊಂದು ಪ್ರತಿರೂಪವೇ ಶ್ರೀರಾಮ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಹೇಳಿದರು.
ನಗರದ ಬಟವಾಡಿ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಆಯೋಜಿಸಿದ್ದ ಶ್ರೀರಾಮನವಮಿ ಆಚರಣೆಯಲ್ಲಿ ಪಾಲ್ಗೊಂಡು ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪೂಜೆ ನೆರವೇರಿಸಿ ಭಕ್ತರಿಗೆ ಪಾನಕ, ಮಜ್ಜಿಗೆ, ಹೆಸರು ಬೇಳೆ ವಿತರಿಸಿದ ನಂತರ ಮಾತನಾಡಿದ ಅವರು, ಶ್ರೀರಾಮ ಸತ್ಯಕ್ಕೆ ನಿಂತವನು. ಶ್ರೀರಾಮ ಪ್ರತಿಯೊಬ್ಬ ಮಾನವನ ಸಮಾನತೆಗಾಗಿ ನಿಂತವನು. ಇಂತಹ ಮರ್ಯಾದ ಪುರುಷನಿಗೆ ವಿಶೇಷ ಪೂಜೆ, ಭಕ್ತಿ ಸಮರ್ಪಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ರಾಮರಾಜ್ಯ ಎಂದರೆ ಎಲ್ಲರೂ ಕೂಡ ಸಂತೋಷದಿoದ ಯಾವುದೇ ಕಷ್ಟ ಇಲ್ಲದೆ ಶಾಂತಿ-ನೆಮ್ಮದಿಯಿoದ ಜೀವನ ಮಾಡಬೇಕು ಎಂದರ್ಥ. ಭಕ್ತಿಯಿಂದ ನಾವೆಲ್ಲರೂ ಶ್ರೀರಾಮನನ್ನು ಪೂಜಿಸೋಣ ಎಂದರು.
ನೂರಾರು ವರ್ಷಗಳಿಂದ ಶ್ರೀರಾಮನವಮಿಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಈ ಸಂಪ್ರದಾಯವನ್ನು ಈಗಲೂ ಮುಂದುವರೆಸಿಕೊoಡು ಹೋಗುತ್ತಿದ್ದೇವೆ. ಶ್ರೀರಾಮನವಮಿ ಆಚರಿಸಿ ಜನತೆಗೆ ಮಜ್ಜಿಗೆ, ಪಾನಕ, ಹೆಸರುಬೇಳೆ ಹಂಚುವ ಕೆಲಸವನ್ನು ಹಿಂದಿನಿoದಲೂ ಮಾಡಿಕೊಂಡೇ ಬಂದಿದ್ದೇವೆ ಎಂದರು.
ಶ್ರೀರಾಮನಿಗೆ ವಿಶೇಷ ಪೂಜೆ
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ಬೆಳಿಗ್ಗೆಯಿಂದಲೇ ಶ್ರೀರಾಮನವಮಿ ಆಚರಣೆಯಲ್ಲಿ ಪಾಲ್ಗೊಂಡಿದ್ದು, ನಗರದ ಬಟವಾಡಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಶ್ರೀರಾಮನವಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಂತರ ತುಮಕೂರು ವಿವಿ ಮುಂಭಾಗ, ಟೌನ್ಹಾಲ್ ವೃತ್ತದಲ್ಲಿ ಪಾಲಿಕೆ ಮಾಜಿ ಸದಸ್ಯ ಜೆ. ಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ಶ್ರೀರಾಮನವಮಿ ಆಚರಣೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಈ ಎಲ್ಲ ಕಡೆಯಲ್ಲ ಪರಮೇಶ್ವರ್ ಅವರು ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗಿಸಿದರು.
ಸಚಿವ ಪರಮೇಶ್ವರ್ ಅವರು ಬಿ.ಹೆಚ್. ರಸ್ತೆ ಬಟವಾಡಿಯಿಂದ ಬಿ.ಜಿ. ಪಾಳ್ಯ ಸರ್ಕಲ್, ಸಿರಾ ಗೇಟ್ ಸೇರಿದಂತೆ ನಗರದ ವಿವಿಧೆಡೆ ಆಯೋಜಿಸಿದ ಶ್ರೀರಾಮನವಮಿ ಆಚರಣೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ. ರಫೀಕ್ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಗೋವಿಂದರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಠ್, ಮೂರ್ತಿ , ಜೆ. ಕುಮಾರ್, ಮಾಜಿ ಮೇಯರ್ ಪ್ರಭಾವತಿ ಸುಧೀಶ್ವರ್, ಮಹೇಶ್, ಮೆಹಬೂಬ್ ಪಾಷ, ಜಿಯಾವುಲ್ಲಾಖಾನ್, ಸೈಯದ್ ಇಸ್ಮಾಯಿಲ್, ಉಬೇದುಲ್ಲಾ, ನಟರಾಜು ಮತ್ತಿತರರು ಪಾಲ್ಗೊಂಡಿದ್ದರು.
ಸತ್ಯ, ಸಮಾನತೆಯ ಮತ್ತೊಂದು ಪ್ರತಿರೂಪವೇ ಶ್ರೀರಾಮ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್
Leave a comment
Leave a comment