ಹವ್ಯಾಸಗಳು ಬದುಕನ್ನು ರೂಪಿಸುವ ಶಕ್ತಿಗಳು- ಪ್ರಿಯಾ ಪ್ರದೀಪ್
ನಮ್ಮಲ್ಲಿರುವ ಹವ್ಯಾಸಗಳು ಮತ್ತು ಆಸಕ್ತಿಗಳು ನಮ್ಮ ಬದುಕನ್ನು ರೂಪಿಸುವ ಶಕ್ತಿಗಳು. ನಮ್ಮನ್ನು ನಾವು ಕಂಡುಕೊಳ್ಳಲು ಅವು ನೆರವಾಗುತ್ತವೆ ಎಂದು ಪ್ರಿಯಾ ಪ್ರದೀಪ್ ಹೇಳಿದರು.
ಅವರು ವಿದ್ಯಾನಿಧಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿ-ಆರ್ಟ್ಮೇನಿಯಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಂಸ್ಕೃತಿಕ ಚಟುವಟಿಕೆಗಳು ನಮ್ಮನ್ನು ಸದಾ ಉಲ್ಲಸಿತರನ್ನಾಗಿರಿಸುತ್ತವೆ. ಸಭಾಕಂಪನವನ್ನು ಹೋಗಲಾಡಿಸುವುದರ ಮೂಲಕ ಸಭಾಸದರನ್ನು ಎದುರಿಸುವ ಆತ್ಮವಿಶ್ವಾಸವನ್ನು ತುಂಬುತ್ತವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತಾಗಲಿ ಎಂದು ಅವರು ಹಾರೈಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಾಂಶುಪಾಲ ಸಿದ್ಧೇಶ್ವರ ಸ್ವಾಮಿ ಎಸ್.ಆರ್. ವಿದ್ಯಾರ್ಥಿಗಳಿಗೆ ಸರ್ವತೋಮುಖವಾಗಿ ಪ್ರಗತಿ ಹೊಂದುವುದಕ್ಕೆ ಪೂರಕವಾದ ಅವಕಾಶವನ್ನೂ ಅನುಕೂಲವನ್ನೂ ಕಲ್ಪಿಸುವುದು ವಿ-ಆರ್ಟ್ಮೇನಿಯಾದ ಉದ್ದೇಶ. ಸಣ್ಣಪುಟ್ಟ ತಪ್ಪುಗಳು ಆಗುವುದು ಸಹಜ. ಅದನ್ನು ತಿದ್ದಿಕೊಂಡು ಬೆಳೆದಲ್ಲಿ ಮುಂದೆ ಯಾವುದೇ ಸಂದರ್ಭಗಳನ್ನಾದರೂ ಧೈರ್ಯವಾಗಿ ಎದುರಿಸುವ ಮನೋಭಾವ ನಿಮ್ಮಲ್ಲಿ ಬೆಳೆಯುತ್ತದೆ ಎಂದರು.
ವಿದ್ಯಾರ್ಥಿ ಪ್ರತಿನಿಧಿಯಾಗಿ ಮಾತನಾಡಿದ ಕಶಿಶ್ ಒಂದು ಕಾರ್ಯಕ್ರಮವನ್ನು ಸಂಪೂರ್ಣವಾಗಿ ರೂಪುಗೊಳಿಸುವುದು ಹೇಗೆ ಎಂಬುದನ್ನು ಕಲಿತಿದ್ದೇವೆ. ನಮ್ಮಲ್ಲಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿದ್ದು ಪ್ರತಿಯೊಬ್ಬರಿಗೂ ಸೂಕ್ತ ವೇದಿಕೆ ಒದಗುವಂತಾಗಿದೆ. ನಮ್ಮಲ್ಲಿ ಸ್ಪರ್ಧಾತ್ಮಕ ಮನೋಧರ್ಮವನ್ನು ಬೆಳೆಸಲು ಈ ಕಾರ್ಯಕ್ರಮ ತುಂಬಾ ಸಹಕಾರಿಯಾಗಿದೆ. ಈ ಅವಕಾಶಕ್ಕಾಗಿ ಕಾಲೇಜಿಗೆ ಆಭಾರಿಗಳಾಗಿದ್ದೇವೆ ಎಂದರು.
ಯೋಗ ಪ್ರಸ್ತುತಿಯಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿರುವ ವಿದ್ಯಾರ್ಥಿನಿ ಮೀನಾಕ್ಷಿ ಯೋಗದ ಹಲವು ಭಂಗಿಗಳನ್ನು ಪ್ರದರ್ಶಿಸಿದರು.
ವಿದ್ಯಾರ್ಥಿನಿಯರಾದ ನವ್ಯಾ ಮತ್ತು ಬಳಗದವರು ಪ್ರಾರ್ಥನೆಯನ್ನು ಪ್ರಸ್ತುತಪಡಿಸಿದರು. ದೀಕ್ಷಾ ಸ್ವಾಗತಿಸಿ, ತಾಹಃ ಧನ್ಯವಾದ ಸಮರ್ಪಣೆ ಮಾಡಿದರು. ಯಶಸ್ವಿನಿ ಮತ್ತು ಭೂಮಿಕಾ ಕಲೆಗಳ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ನೃತ್ಯ, ರಸಪ್ರಶ್ನೆ, ಪಿಯಾನೋ ಮತ್ತು ಗಿಟಾರ್ ಸಹಿತ ಗಾಯನ ಕಾರ್ಯಕ್ರಮಗಳನ್ನು ವಿದ್ಯಾರ್ಥಿನಿಯರು ನಡೆಸಿಕೊಟ್ಟರು.
ಹವ್ಯಾಸಗಳು ಬದುಕನ್ನು ರೂಪಿಸುವ ಶಕ್ತಿಗಳು

Leave a comment
Leave a comment