ಕಲ್ಬುರ್ಗಿಯಲ್ಲಿಂದು ಕರ್ನಾಟಕ ಯುವಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಅವ್ವಣ್ಣಗೌಡ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಲ್ಬುರ್ಗಿ ಜಿಲ್ಲೆಯ ಅಫಜಪೂರ ತಾಲೂಕಿನ ಕೌಲ್ಗಾ ಬಿ ಗ್ರಾಮದ ಶಂಕರಲಿಂಗ ತಂದೆ ಪರಮೇಶ್ ಎಂಬ ಯುವಕ ಕೆಲಸ ಮಾಡಲು ಕುಟುಂಬ ಸಮೇತ ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ. ದಿನಾಂಕ 4.11.2023 ರಂದು ರಾತ್ರಿ 10.30 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಊಟ ತೆಗೆದುಕೊಂಡು ಹೊಸೂರು ರಸ್ತೆ ಮಾರ್ಗವಾಗಿ ಮನೆಗೆ ಹೋಗುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ 30ವರ್ಷದ ಶಂಕರ್ಲಿಂಗ್ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟು 40 ದಿನ ಗತಿಸಿವೆ ಆದರೆ ಇಲ್ಲಿವರೆಗೆ ಶಂಕರಲಿಂಗನ ಸಾವಿಗೆ ಕಾರಣರಾದವರು ಯಾರು ಎಂದು ಪತ್ತೆಹಚ್ಚದ ಮಾದನಾಯಕ ಪೊಲೀಸ್ ಠಾಣೆಯ ಪೊಲೀಸರು. ನಮ್ಮ ಸಂಘಟನೆ ಕಡೆಯಿಂದ ಮೃತ ಶಂಕರಲಿಂಗ ಕುಟುಂಬಕ್ಕೆ ನ್ಯಾಯಕೂಡಿಸುವವರಿಗೂ ಬಿಡುವುದಿಲ್ಲ. ಒಂದು ವೇಳೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಪೊಲೀಸರು ಎಂಟು ದಿವಸದ ಒಳಗಡೆ ಅಪರಾಧಿಗಳಿಗೆ ಹಿಡಿದು ಆ ಕುಟುಂಬಕ್ಕೆ ನ್ಯಾಯ ಕೊಡಿಸಿದೆ ಹೋದರೆ ನಾವು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.