ತುಮಕೂರು:ನಗರದ ಟೌನ್ಹಾಲ್ ವೃತ್ತದಲ್ಲಿರುವ ನಾಗರಕಟ್ಟೆ ದೇವಾಲಯಲ್ಲಿ ಸ್ಥಾಪಿಸಿರುವ ಹಿಂದೂ ಮಹಾಗಣಪತಿಯ ವಿಸರ್ಜನಾ ಕಾರ್ಯಕ್ರಮ ವಿವಿಧ ಕಲಾ ತಂಡಗಳ ಪ್ರದರ್ಶನ ಹಾಗೂ ಅದ್ದೂರಿ ಮೆರವಣಿಗೆ ಮೂಲಕ ನಡೆಯಿತು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ತುಮಕೂರು ಇವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ೬ನೇ ವರ್ಷದ ಹಿಂದೂ ಮಹಾ ಗಣಪತಿಯ ಅದ್ದೂರಿ ವಿಸರ್ಜನಾ ಮಹೋತ್ಸವಕ್ಕೆ ಸಿದ್ದಗಂಗಾ ಮಠದ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ಚಾಲನೆ ನೀಡಿದರು.ಈ ವೇಳೆ ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮಿಜಿ,ತAಗನಹಳ್ಳಿ ಮಠದ ಶ್ರೀಬಸಲಿಂಗಸ್ವಾಮೀಜಿ, ಬೆಳ್ಳಾವೆಯ ಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ,ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ,ಅರೆ ಶಂಕರ ಮಠದ ಶ್ರೀಚೈತನ್ಯ ಮಹಾಸ್ವಾಮೀಜಿ ಸೇರಿದಂತೆ ಹಲವಾರು ಹರಗುರು ಚರಮೂರ್ತಿಗಳು ಹಿಂದು ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಗಣಪತಿ ಮೂರ್ತಿಯೊಂದಿಗೆ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶ್ರೀಶಿವಕುಮಾರಸ್ವಾಮೀಜಿ, ದತ್ತಾತ್ರೇಯ, ಬಜರಂಗಿ,ಲೋಕಮಾನ ತಿಲಕ್ ಅವರುಗಳ ಸ್ತಬ್ದ ಚಿತ್ರಗಳ ಮೆರವಣಿಗೆಯನ್ನು ಸಹ ಹಮ್ಮಿಕೊಳ್ಳಲಾಗಿತ್ತು.ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಪುಣೇರಿ ಡೋಲ್,ನಂದಿ ದ್ವಜ, ವೀರಗಾಸೆ, ಡಂಕವಾದ್ಯ, ತಮಟೆವಾದ್ಯ, ಡಿ.ಜೆ.,ಪಟಾಕಿ, ಸಿಡಿಮದ್ದುಗಳು ಪ್ರದರ್ಶನ ದೊಂದಿಗೆ ನಗರದ ಬಿ.ಜಿ.ಎಸ್ ವೃತ್ತದಿಂದ ಆರಂಭಗೊAಡು ಲಕ್ಕಪ್ಪ ವೃತ್ತದಿಂದ,ಜೆಸಿ ರಸ್ತೆ ಮೂಲಕ ಮಾರ್ಕೆಟ್ ಮಾರ್ಗವಾಗಿ ಮಂಡಿಪೇಟೆ,ಸ್ವತAತ್ರ್ಯ ಚೌಕ,ಆಶೋಕ ರಸ್ತೆ,ಬಿ.ಎಚ್.ರಸ್ತೆ,ಎಂ.ಜಿ.ರಸ್ತೆ,ಜೈನ್ ಟೆಂಪಲ್ ರಸ್ತೆ,ರಾಮಪ್ಪ ವೃತ್ತ, ಅಂಬೇಡ್ಕರ್ ರಸ್ತೆಯ ಮೂಲಕ ಕೋಟೆ ಆಂಜನೇಯಸ್ವಾಮಿ ವೃತ್ತ ತಲುಪಿತ್ತು. ತದನತರ ಗಾರ್ಡನ್ ರಸ್ತೆ ಮಾರ್ಗವಾಗಿ ಚಿಕ್ಕಪೇಟೆಯ ಕೆ.ಎನ್.ಎಸ್.ರೈಸ್ ಮಿಲ್ ಹಿಂಭಾಗದಲ್ಲಿರುವ ಕಲ್ಯಾಣಿಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಮಹಾಗಣಪತಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಟಿ.ಬಿ.ಶೇಖರ್, ಗೌರವಾಧ್ಯಕ್ಷರಾದ ಸಿ.ವಿ.ಮಹದೇವಯ್ಯ, ಕಾರ್ಯದರ್ಶಿ ಜಿ.ಕೆ.ಶ್ರೀನಿವಾಸ್,ಕೋರಿಮಂಜುನಾಥ್, ಸಹಕಾರ್ಯದರ್ಶಿ ನರಸಿಂಹಮೂರ್ತಿ, ಆರ್.ಎಲ್.ರಮೇಶಬಾಬು, ಖಜಾಂಚಿ ಆರ್.ಎಲ್.ರಮೇಶ್ಬಾಬು, ನಿರ್ದೇಶಕರಾದ ಕೆ.ಎಸ್.ಮಂಜುನಾಥ್, ಹೆಚ್.ಜಿ.ಚಂದ್ರಶೇಖರ್, ಮೋಹನ್ಲಾಲ್, ಮಹೇಂದ್ರ ವೈಶ್ಣವ್, ಮಾರಣ್ಣ ಪಾಳೆಗಾರ್,ಅಮರನಾಥಶೆಟ್ಟಿ, ಟಿ.ಎನ್.ಅಜಿತ್, ಪಿ.ಮೂರ್ತಿ, ಜಿ.ಕೇಶವಮೂರ್ತಿ, ಪ್ರಸನ್ನಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ನಾಗರಕಟ್ಟೆ ಸ್ಥಾಪಿಸಿರುವ ಹಿಂದೂ ಮಹಾಗಣಪತಿಯ ವಿಸರ್ಜನಾ ಕಾರ್ಯಕ್ರಮ
Leave a comment
Leave a comment