ಹೆತ್ತೇನಹಳ್ಳಿ ಆದಿಶಕ್ತಿ ಅಮ್ಮನವರ ಜನ್ಮವರ್ಧಂತಿ
ಹಿಂದೂ ಸಂಸ್ಕೃತಿಯಲ್ಲಿ ಪರಂಪರಾನುಗತವಾಗಿ ನಡೆದು ಬಂದಿರುವ ಧಾರ್ಮಿಕ ಆಚರಣೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿವೆ. ಜಗತ್ತು ಪೂಜಿಸುವುದು ಶಕ್ತಿಯನ್ನು ದುರ್ಬಲತೆಯನ್ನಲ್ಲ. ಇಂತಹ ಶಕ್ತಿಯ ಮೂಲ ದೇವತೆ ಶ್ರೀ ಆದಿಶಕ್ತಿ ಹೆತ್ತೇನಹಳ್ಳಿ ಅಮ್ಮನವರ ಜನ್ಮ ವರ್ಧಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ನಾಡದೇವತೆ ಜಗತ್ತಿನ ದುಷ್ಟ ಶಕ್ತಿಗಳ ನಿರ್ಮೂಲನೆಗಾಗಿ ಜನ್ಮ ತಾಳಿದ ತಾಯಿ ಚಾಮುಂಡೇಶ್ವರಿ. ಈ ಸಂಪ್ರದಾಯವನ್ನು ಎಲ್ಲೆಡೆಯಲ್ಲಿಯೂ ಸಡಗರ ಸಂಭ್ರಮದಿAದ ಜನ ಭಯ ಭಕ್ತಿಯಿಂದ ಆಚರಿಸುತ್ತಾರೆ. ಸಾವಿರ ಒಕ್ಕಲ ಗರತಿ, ಭವರೋಗ ವೈದ್ಯೆ, ಮಕ್ಕಳ ತಾಯಿ ಎಂಬ ಬಿರುದನ್ನು ಹೊಂದಿರುವ ಹೆತ್ತೇನಹಳ್ಳಿ ಅಮ್ಮನವರ ಜನುಮ ದಿನವಾದ ಆಷಾಡ ಮಾಸದ ಸೋಮವಾರದಂದು ತಾಯಿಯನ್ನು ಪುಷ್ಪಗಳಿಂದ ಅಲಂಕರಿಸಿ ಸುತ್ತಮುತ್ತಲ ಹಳ್ಳಿಗಳ ಭಕ್ತಾದಿಗಳು ಸೇರಿ ಬೀದಿದೀಪಗಳನ್ನು ವರ್ಣಾಲಂಕೃತವಾಗಿಸಿ, ಮನೆಮನೆಗಳಲ್ಲೂ ಹಸಿರು ತೋರಣಗಳಿಂದ ಕಂಗೊಳಿಸುವAತೆ ಮಾಡಿ ಬೆಳಗ್ಗೆಯಿಂದ ಸಂಜೆಯವರೆಗೂ ಅಭಿಷೇಕ ಆರ್ಚನೆ ಅನ್ನದಾಸೋಹವನ್ನು ನಡೆಸಲಾಯಿತು. ಸಂಜೆ ಅಮ್ಮನವರಿಗೆ ಹೂವಿನ ಮಂಟಪೋತ್ಸವವನ್ನು ಸಿದ್ಧಗೊಳಿಸಿ ವೀರಗಾಸೆ ಚಿಟ್ಟಿಮೇಳ, ಭದ್ರಕಾಳಿ ಕುಣಿತ ಮುಂತಾದ ಜಾನಪದ ಕಲಾತಂಡಗಳೊAದಿಗೆ ಊರಿನ ರಾಜಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ದೂರದ ಊರುಗಳಿಂದ ಆಗಮಿಸಿದ ಭಕ್ತರು ಅಮ್ಮನ ವೈಭವವನ್ನು ಕಣ್ತುಂಬಿಕೊAಡು ಆಶೀರ್ವಾದ ಪಡೆದರು.
ಹೆತ್ತೇನಹಳ್ಳಿ ಆದಿಶಕ್ತಿ ಅಮ್ಮನವರ ಜನ್ಮವರ್ಧಂತಿ
Leave a comment
Leave a comment