ತನ್ನ ಹುಟ್ಟು ಹಬ್ಬಕ್ಕೆ ಅಪಾರ ಅಭಿಮಾನಿಗಳಿಗೆ ಶುಭ ಸುದ್ಧಿ ನೀಡಲಿರುವ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್!
ತುಮಕೂರು : ತುಮಕೂರು ಗ್ರಾಮಾಂತರ ಮಾಜಿ ಶಾಸಕರಾಗಿರುವ ಡಿ.ಸಿ.ಗೌರಿಶಂಕರ್ರವರು ತಮ್ಮ ಹುಟ್ಟು ಹಬ್ಬದ ದಿನದಂದೇ ಅಂದರೆ ಇದೇ ತಿಂಗಳ ೧೬ ನೇ ತಾರೀಖಿನಂದು ತಮ್ಮ ಅಪಾರ ಬೆಂಬಲಿಗರು, ಅಭಿಮಾನಿಗಳು ಹಾಗೂ ಗ್ರಾಮಾಂತರದ ಜನತೆಗೆ ಶುಭ ಸುದ್ಧಿಯನ್ನು ನೀಡಲಿದ್ದಾರೆ ಎಂಬ ಗುಸು ಗುಸು ಮಾತು ಶುರುವಾಗಿದೆ
ಹೌದು ಇದು ನಿಜಕ್ಕೂ ಅಚ್ಚರಿ ಮೂಡಿಸುವಂತಹ ವಿಷಯವಾಗಿದೆ, ಏಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಜಯರಾಗಿರುವ ಡಿ.ಸಿ.ಗೌರಿಶಂಕರ್ರವರು ಚುನಾವಣೆಯ ಬಳಿಕ ಅಷ್ಟು ಹೆಚ್ಚಾಗಿ ಕಾಣಿಸಿಕೊಳ್ಳದೇ ತಮ್ಮ ಅತ್ಯಾಪ್ತರು ಮತ್ತು ಕೆಲ ಮುಖಂಡರನ್ನು ಮಾತ್ರ ಭೇಟಿಯಾಗುತ್ತಿದ್ದ ಗೌರಿಶಂಕರ್ರವರು ಕಳೆದ ೨-೩ ದಿನಗಳಿಂದ ಬಳ್ಳಗೆರೆಯ ತಮ್ಮ ನಿವಾಸದ ಬಳಿಯಲ್ಲಿಯೇ ಇದ್ದಾರೆ.
ಇದೇ ತಿಂಗಳ ೧೬ನೇ ತಾರೀಖಿನಂದು ತಮ್ಮ ಸ್ನೇಹಿತರು, ಅಭಿಮಾನಿಗಳು ಆಯೋಜಿಸಿರುವ ಹುಟ್ಟು ಹಬ್ಬದ ಕಾರ್ಯಕ್ರಮದ ದಿನದಂದು ತಮ್ಮ ರಾಜಕೀಯ ನಡೆಯ ಬಗ್ಗೆ ಬಹಿರಂಗ ಹೇಳಿಕೆಯನ್ನು ತಮ್ಮ ಅಭಿಮಾನಿ ವಲಯಕ್ಕೆ ನೀಡಲಿದ್ದಾರೆ, ಹೌದು, ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಯ ವಿಚಾರ ಇಂದು ಗುಟ್ಟಾಗಿ ಉಳಿದಿಲ್ಲ, ಎಲ್ಲರ ಬಾಯಲ್ಲಿಯೂ ಹರಿದಾಡುತ್ತಿದೆ, ಆದರೆ ಅವರ ಬಹಿರಂಗ ಹೇಳಿಕೆ ಮಾತ್ರ ಬಾಕಿ ಉಳಿದಿದೆ, ಅದನ್ನು ಅವರ ಹುಟ್ಟು ಹಬ್ಬದ ದಿನದಂದು ಬಹಿರಂಗ ಪಡಿಸಲಿದ್ದಾರೆಂಬುದು ಅವರ ಆಪ್ತ ವಲಯದಿಂದ ಇದೀಗ ಖಚಿತವಾಗಿದೆ.
ಇನ್ನು ಗೌರಿಶಂಕರ್ರವರು ಇದೇ ತಿಂಗಳ ೨೧ನೇ ತಾರೀಖಿನಂದು ಬೆಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮವಿದ್ದು, ಕಳೆದರೆಡು ದಿನಗಳಿಂದ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳನ್ನು ಸರಥಿಯಾಗಿ ಭೇಟಿಯಾಗಿದ್ದಾರೆ, ಜೊತೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಚಂದ್ರಶೇಖರ್ಗೌಡ ರವರೂ ಸಹ ಬುಧವಾರ ಗೌರಿಶಂಕರ್ರವರನ್ನು ಬಳ್ಳಗೆರೆಯ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಅಭಿಮಾನಿಗಳು ಹಾಗೂ ಗ್ರಾಮಾಂತರದ ಜನತೆಗೆ ಶುಭ ಸುದ್ಧಿಯನ್ನು ನೀಡಲಿದ್ದಾರೆ
Leave a comment
Leave a comment