ತುಮಕೂರು, ಮೇ 25- ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದರ್ಜನ್ಯ ಖಂಡಿಸಿ ಮೇ 30 ರಂದು ವಿವಿಧ ಪ್ರಗತಿಪರ ಸಂಘಟನೆಗಳಿಂದ `ಹೋರಾಟದ ನಡಿಗೆ ಹಾಸನದ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಹಾಸನ ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿ ರುವುದಾಗಿ ಸಂಘಟನೆಗಳ ಮುಖಂಡರು ತಿಳಿಸಿದರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ, ರಾಜಕೀಯ ಮತ್ತು ಜಾತಿ ಪ್ರಭಾವದಿಂದಾಗಿ ಆರೋಪಿ ಬಂಧನ ವಿಳಂಬವಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ರ್ಕಾರಗಳು ಅಗತ್ಯ ಕ್ರಮಕೈಗೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿ ಸೂಕ್ತ ಕಾನೂನು ಕ್ರಮಕೈಗೊಂಡು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಇದೊಂದು ಸಾಮೂಹಿಕ ಲೈಂಗಿಕ ಹತ್ಯಾಖಂಡವಾಗಿದ್ದು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗೆ ಶಿಕ್ಷೆ ನೀಡಬೇಕು. ಸಂತ್ರಸ್ತರಿಗೆ ಆರೋಪಿ ಕುಟುಂಬದವರಿಂದಲೇ ಪರಿಹಾರ ದೊರಕಿಸಿಕೊಡಬೇಕು ಎಂದರು.
ಈ ವಿಡಿಯೋ ಹಂಚಿದವರ ಬಗ್ಗೆಯೂ ತನಿಖೆಯಾಗಿ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸ ಬೇಕೆಂದರು.
ದೇಶದ ಪವಿತ್ರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತ್ಯಾಚಾರಿ ಸಂಸದನೊಬ್ಬ 5 ರ್ಷ ಆಡಳಿತ ನಡೆಸಿದ್ದು ನಾಚಿಕೆಗೇಡಿನ ಸಂಗತಿ. ಈ ಘಟನೆ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಮೇ 30 ರಂದು ಹಾಸನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಇದರಲ್ಲಿ 10 ಸಾವಿರ ಜನರು ಭಾಗವಹಿ ಸುವ ನಿರೀಕ್ಷೆ ಇದೆ ತುಮಕೂರು ಜಿಲ್ಲೆಯಿಂದ 500 ಜನ ತೆರಳುತ್ತಿರುವುದಾಗಿ ಹೇಳಿದರು.
ರಾಜಕೀಯ ಅಧಿಕಾರ ಕುಟುಂಬದ ಹಿನ್ನೆಲೆ, ಪ್ರಬಲ ಜಾತಿ ಅಹಮಿಕೆ ಬಳಸಿಕೊಂಡು ನೂರಾರು ಮಹಿಳೆಯರ ಮೇಲೆ ಲೈಂಗಿಕ ದರ್ಜನ್ಯ ನಡೆಸಿದ್ದು ಈ ಬಗ್ಗೆ ಸಮಗ್ರ ತನಿಖೆಯಾಗಿ ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಅನೇಕ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಅಧಿಕಾರಿಗಳ ಮೂಲಕ ರ್ಕಾರ ಗಮನಕ್ಕೆ ತರುವುದಾಗಿ ತಿಳಿಸಿದರು.
ಬಾ.ಹ.ರಮಾಕುಮಾರಿ, ಇಂದಿರಮ್ಮ, ಕೆ.ದೊರೈರಾಜ್, ಸಿ.ಯತಿರಾಜ್ ಇವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿ.ಸಿ.ಶೈಲಾನಾಗರಾಜ್, ಸೈಯದ್ ಮುಜೀಬ್, ಮಲ್ಲಿಕಾಬಸವರಾಜು, ದೀಪಿಕಾ ಮರಳೂರು ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದರ್ಜನ್ಯ ಸಂಘಟನೆಗಳಿಂದ `ಹೋರಾಟದ
Leave a comment
Leave a comment