ಇಂದು ಎಂ.ಜಿ. ಮತ್ತು ಶಿರಾನಿ ರಸ್ತೆಯಲ್ಲಿ ತುಮಕೂರು ಜಿಲ್ಲಾ ಪುಟ್ ಪಾತ್ ವ್ಯಾಪಾರಿಗಳ ಸಂಘ (ಸಿಐಟಿಯು) ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಜಯಂತಿ ಆಚರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು.
ಮಹಾ ನಗರ ಪಾಲಿಕೆಯ ಬೀದಿ ಬದಿ ವ್ಯಾಪಾರಿಗಳ ಡೇ ನಲ್ಮ ಶಾಖೆಯ ಸಿಇಒ ರಾಮಾಂಜಿನಪ್ಪ ರವರು ಮಾತನಾಡಿ ನಾವು ಸುತ್ತಮುತ್ತಲಿರುವ ಪರಿಸರವನ್ನು ಸ್ವಚ್ಛತೆ ಇಟ್ಕೊಂಡು ಬೇಕು. ಉತ್ತಮವಾದಂತಹ ಗಾಳಿ ಪರಿಸರ ಹಾಗೂ ಉತ್ತಮವಾದ ಆರೋಗ್ಯ ಸಿಗುತ್ತೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೈಯದ್ ಮುಜೀಬ್ ಅಹಮದ್ ಅವರು ಮಾತನಾಡಿ ಕೇವಲ ಒಂದು ದಿನ ಸ್ವಚ್ಛ ಮಾಡಿ ಕೊಂಡು ಸಾಲದು. ಪ್ರತಿದಿನ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಕಷ್ಟಗಳನ್ನು ಅರ್ಥ ಮಾಡಿಕೊಂಡು ತಮ್ಮ ತಮ್ಮ ಅಂಗಡಿಯ ಒಂದು ಬಳಿಯಲ್ಲಿ ಕಸದ ಪುಟ್ಟಿಯನ್ನು ಶೇಖರಣೆ ಮಾಡಿ ಆವರಿಗು ಸಹಕರಿಸಿ. ಹಾಗೂ ಕೇವಲ ಭೌತಿಕವಾಗಿ ನಮ್ಮ ಮುಂದೆ ಇರುವಂತಹ ಕಸ ಆದರೆ ಶಾರೀರಿಕವಾಗಿ ನಮ್ಮ ಮನಸಲ್ಲಿ ಇರೋದು ತಾರತಮ್ಯದ ಕಸ. ಮೇಲು ಕೀಳು ಜಾತಿ ಎಂಬ ಕಸ. ಬಡವ ಶ್ರೀಮಂತರ ಅಂತರದ ಕಸ. ಭ್ರಷ್ಟಾಚಾರದ ಕಸ. ಈ ಕಸಗಳು ಸಮಾಜದಿಂದ ಹೋಗಲಾಡಿಸಬೇಕು ಮಹಾತ್ಮ ಗಾಂಧೀಜಿ ಸೌಹಾರ್ದತೆ ಸಹಬಾಳ್ವೆ ಮತ್ತು ಶಾಂತಿ ಈ ಆದರ್ಶಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ಕಟ್ಟಿದರೆನಿಜವಾದ ಗಾಂಧೀಜಿಯವರಿಗೆ ಕೃತಜ್ಞತೆ ಸಲ್ಲಿಸಬಹುದಾಗುತ್ತದೆ.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಪುಟ್ ಪಾತ್ ವ್ಯಾಪಾರಿಗಳ ಸಂಘ ದ ಪ್ರಧಾನ ಕಾರ್ಯದರ್ಶಿ ವಾಸೀಂ ಅಕ್ರಂ ಮಾತನಾಡಿ ಗಾಂಧೀಜಿಯವರುಭಾರತ ದೇಶವನ್ನು ಬ್ರಿಟಿಷರ ವಿರುದ್ಧ ಅಹಿಂಸೆಯ ಮುಖಾಂತರ ಸ್ವಾತಂತ್ರವನ್ನು ನೀಡಿರುತ್ತಾರೆ. ಆ ತತ್ವ ಸಿದ್ಧಾಂತಗಳನ್ನು ಬೀದಿ ವ್ಯಾಪಾರಿಗಳು ಅಳವಡಿಸಿಕೊಂಡು ತಮ್ಮ ಹಕ್ಕುಗಳನ್ನು ಪಡೆಯಬಹುದು ಎಂದರು.
ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಎಚ್ ಕೆ ರವಿಕುಮಾರ್ ಸ್ವಾಗತಿಸಿದರು ಶ್ರೀಧರ್ ವಂದಿಸಿದರು .ಈ ಸಂದರ್ಭದಲ್ಲಿ ಟಿ ಎಸ್ ರಾಜಶೇಖರ್.ಮುತ್ತರಾಜು.ಜಿ ಜಗದೀಶ್. ಗಿರಿ. ಪ್ರಸನ್ನ ಕುಮಾರ್. ಅತಿಕ್ ರೆಹಮಾನ್. ಬಾಬು. ಜಯ ಕುಮಾರ್. ಪಾಲಿಕೆಯ ಸಿಬ್ಬಂದಿ ಮುಂತಾದವರು ಹಾಜರಿದ್ದರು.
ಸೌಹಾರ್ದತೆ ಸಹಬಾಳ್ವೆ ಶಾಂತಿ- ಮಹಾತ್ಮ ಗಾಂಧೀಜಿಯವರ ಮೂಲ ತತ್ವಗಳು

Leave a comment
Leave a comment