ತುಮಕೂರು:ಟಿ.ಆರ್.ಪಿ ಕ್ರಿಯೇಷನ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ನಿಗೂಢ, ಹಾಸ್ಯ ಕಥಾವಸ್ತುವನ್ನು ಒಳಗೊಂಡ ಗುಳ್ಳೆನರಿ ಸಿನಿಮಾದ ಚಿತ್ರೀಕರಣ ಇಂದಿನಿAದ ತುಮಕೂರಿನಲ್ಲಿ ಆರಂಭವಾಗಿದ್ದು,ಹಿರೇಮಠದ ಡಾ.ಶ್ರೀಶಿವಾನಂದಶಿವಚಾರ್ಯ ಸ್ವಾಮೀಜಿಗಳು ಅಲದಮರದ ಪಾರ್ಕಿನ್ಲ ಪ್ರೆಸ್ ಕ್ಲಬ್ಬಿನಲ್ಲಿ
ಗುಳ್ಳೆನರಿ ಚಿತ್ರದ ಚಿತ್ರೀಕರಣಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಚಲನಚಿತ್ರ ಒಂದು ಒಳ್ಳೆಯ ಮಾಧ್ಯಮ.ಅದನ್ನು ಸಮರ್ಥವಾಗಿ ಬಳಸಿಕೊಂಡು ಜನರಿಗೆ ಒಳ್ಳೆಯ ಸಂದೇಶ ನೀಡಬಹುದು ಎಂಬುದಕ್ಕೆ ನಮ್ಮ ಮುಂದೆ ಅನೇಕ ಉದಾಹರಣೆಗಳಿವೆ.ಅದೇ ರೀತಿ ಹಾಸ್ಯ ಕಲಾವಿದರಿಗೆ ತುಮಕೂರು ಜಿಲ್ಲೆಯಲ್ಲಿ ಹಾಸ್ಯ ಕಲಾವಿದರ ಕೊರತೆಯಿಲ್ಲ.ನರಸಿಂಹರಾಜು,ಗುಬ್ಬಿ ವೀರಣ್ಣ,ಮಾಸ್ಟರ್ ಹಿರಣ್ಣಯ್ಯ ಸೇರಿದಂತೆ ಹಲವಾರು ಜನರು ಈ ಸಾಲಿನಲ್ಲಿ ನಿಲ್ಲುತ್ತಾರೆ.ಗುಳ್ಳೆನರಿ ಸಿನಿಮಾದ ನಾಯಕನಾಗಿರುವ ರಘು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದು, ಆತನನ್ನೇ ನಾಯಕನಾಗಿ ಮಾಡುತ್ತಿರುವ ಈ ಚಿತ್ರ ಯಶಸ್ಸು ಕಾಣಲಿ,ಹಾಕಿದ ಬಂಡವಾಳ ಬರಲಿ ಎಂದು ಶುಭ ಹಾರೈಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಳ್ಳೆನರಿ ಚಲನಚಿತ್ರದ ನಿರ್ದೇಶಕ ಶ್ರೀರಂಜನ್ ಮಾತನಾಡಿ,ಇದು ನನ್ನ ಎರಡನೇ ಚಿತ್ರ.ನವಭಾರತ ಎಂಬ ಮೊದಲು ಚಿತ್ರವನ್ನು ನಾನೇ ನಿರ್ದೇಶಿಸಿದ್ದು,ಒಳ್ಳೆಯ ಪ್ರದರ್ಶನ ಕಂಡಿದೆ.ಒAದು ಗ್ರಾಮಪಂಚಾಯಿತಿ ಚುನಾವಣೆಯ ಸುತ್ತ ನಡೆಯುವ ಘಟನೆಗಳನ್ನೇ ಕಥಾವಸ್ತುವಾಗಿಟ್ಟುಕೊಂಡು ಗುಳ್ಳೆನರಿ ಸಿನಿಮಾದ ಚಿತ್ರಕಥೆ ಸಿದ್ದಪಡಿಸ ಲಾಗಿದೆ.ಇದರಲ್ಲಿ ಸಸ್ಪೇನ್, ಥ್ರಿಲ್ಲರ್,ಹಾಸ್ಯ ಮೂರನ್ನು ಒಳಗೊಂಡಿದ್ದು,ರಘು ನಾಯಕ ನಟನಾಗಿ,ಇತರೆ ಸಹ ಕಲಾವಿದರ ಆಯ್ಕೆ ನಡೆದಿದೆ.ನಾಯಕಿಯ ಆಯ್ಕೆ ಕೊನೆಯ ಹಂತದಲ್ಲಿದೆ.ತುಮಕೂರು,ಶಿವಮೊಗ್ಗ,ಮAಡ್ಯ ಮತ್ತಿತರ ಕಡೆ ಚಿತ್ರೀಕರಣ ನಡೆಯಲಿದೆ.ಸ್ಥಳೀಯ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಚಿತ್ರಕಥೆ,ಸAಭಾಷಣೆ, ಹಾಡುಗಾರಿಕೆ ಮಾಡಿದ್ದೇನೆ.ಜನರಿಗೆ ಇಷ್ಟವಾಗಲಿದೆ ಎಂಬ ನಂಬಿಕೆ ಇದೆ ಎಂದರು.
ಚಿತ್ರದ ನಿರ್ಮಾಪಕ ಮಹಾಂತೇಶ ಮಾತನಾಡಿ, ಸ್ಥಳೀಯ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿರುವುದು, ಮತ್ತು ಉತ್ತಮ ಸಂದೇಶವನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಇದಾಗಿದೆ.ಹಾಗಾಗಿ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದು,ಚಿತ್ರಕ್ಕೆ ಕನ್ನಡಪರ ಸಂಘಟನೆಗಳ ಬೆಂಬಲವೂ ಇದೆ ಎಂದರು.
ಗುಳ್ಳೆನರಿ ಚಲನಚಿತ್ರದ ಕಲಾವಿದರಾದ ಡಾ.ಪ್ರಹ್ಲಾದ್,ಶಿವಕುಮಾರ್,ಮಲ್ಲೇಶ್, ನಾರಾಯಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿತ್ರೀಕರಣದ ನಂತರ ಕನ್ನಡ ರಾಜೋತ್ಸವವನ್ನು ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ(ರಿ), ಸುವರ್ಣ ಚಾರಿಟಬಲ್ ಟ್ರಸ್ಟ್(ರಿ) ವತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷ ಶ್ರೀನಿವಾಸ್ಬಾಬು,ಜಿಲ್ಲಾ ಗೌರವಾಧ್ಯಕ್ಷ ಸಿದ್ದರಾಜು,.ಬಿ.ಸಿ.,ಜಿಲ್ಲಾಧ್ಯಕ್ಷರಾದ ವಿನಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಗುಳ್ಳೆನರಿ ಸಿನಿಮಾದ ಚಿತ್ರೀಕರಣ ಪ್ರಾರಂಭ, Gullenari Kannada Movie
Leave a comment
Leave a comment