ತುಮಕೂರು:ತಾಲೂಕಿನ ಗೂಳೂರು ವಲಯದ ಗುಳಹರಿವೆ ಕೆರೆಯ ಭೂಮಿ ಪೂಜೆ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮದ ಭೂಮಿ ಪೂಜೆಯನ್ನು ತುಮಕೂರು ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾದ ಶಿವಕುಮಾರ್ ರವರು ನೆರವೇರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತುಮಕೂರು ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಶ್ರೀಮತಿ ಸುನಿತಾ ಪ್ರಭು ರವರು ನಮ್ಮೂರು ನಮ್ಮ ಕೆರೆಯ ಮಹತ್ವ ಮತ್ತು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ನಂತರದಲ್ಲಿ ಕೆರೆ ಅಭಿಯಂತರರಾದ ಶ್ರೀಯುತ ಅರುಣ್ ಕುಮಾರ್ ರವರು ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರುಗಳ ಜವಾಬ್ದಾರಿಗಳ ಬಗ್ಗೆ ಹಾಗೂ ಕೆರೆಗಳ ಪುನರ್ಚೇತನದ ಮಹತ್ವದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ರೇಣುಕಮ್ಮ. ಗೂಳೂರು ಗ್ರಾಮ ಪಂಚಾಯತಿಯ ಸದಸ್ಯರಾದ ನವೀನ್ ಗೌಡ, ಶಿವಕುಮಾರ್. ಶ್ರೀಮತಿ ಉಮಾದೇವಿ, ಶ್ರೀಧರ್ ಹಾಗೂ ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರು ವಲಯ ಮತ್ತು ಕೃಷಿ ಮೇಲ್ವಿಚಾರಕರಾದ ಅನುಕುಮಾರ್ ಸ್ಥಳೀಯ ಸೇವಾ ಪ್ರತಿನಿಧಿಗಳು ಮತ್ತು ಸ್ವಸಹಾಯ ಸಂಘಗಳ ಸದಸ್ಯರುಗಳು,ಸಾರ್ವಜನಿಕರು ಉಪಸ್ಥಿತಿಯಲ್ಲಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗೂಳಹರಿವೆ ಕೆರೆ ಅಭಿವೃದ್ಧಿ ಭೂಮಿ ಪೂಜೆ
Leave a comment
Leave a comment