ಮಾವಿನ ಗಿಡಗಳಲ್ಲಿ ಅಕಾಲಿವಾಗಿ ಹೂವು ಬಂದಿರುವ ಬಗ್ಗೆ ರೈತರಿಗೆ ಮಾರ್ಗದರ್ಶನ
ತುಮಕೂರು(ಕ.ವಾ.)ಸೆ.೨೬: ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಮಾವಿನ ಗಿಡಗಳು ಕೆಲವೊಮ್ಮೆ ಅಕಾಲಿಕವಾಗಿ ಹೂಗಳನ್ನು ಬಿಡುವುದು ಅಪರೂಪವೇನಲ್ಲ. ಈ ರೀತಿಯ ಹೂ ಬಿಡುವಿಕೆ ಹೆಚ್ಚು ವ್ಯಾಪಕವಾಗಿರುವುದಿಲ್ಲ, ಅಲ್ಲಲ್ಲಿ ಚದುರಿದಂತೆ ಹೂಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಎಲ್ಲಾ ಗಿಡಗಳಲ್ಲೂ ಹೂ ಬಿಡುವುದಿಲ್ಲ, ಹಲವು ಮರಗಳಲ್ಲಿ ಮಾತ್ರ ಹೂಗಳು ಕಾಣಿಸಿಕೊಳ್ಳುತ್ತವೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.
ಇದೇ ರೀತಿ ೨೦೨೩ರ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಮಳೆ ಇಲ್ಲದೇ ತೀವ್ರ ಒಣ ಸನ್ನಿವೇಶ ನಿರ್ಮಾಣವಾಗಿದ್ದು, ಮೇಲಾಗಿ ವಾತಾವರಣದ ಉಷ್ಣಾಂಶವೂ ಸಹ ಬೇಸಿಗೆಯನ್ನು ನೆನಪಿಸುವಂತಿತ್ತು. ಈ ಕಾರಣಗಳಿಂದಾಗಿ ಗಿಡಗಳಲ್ಲಿ “ಸ್ಟೆçಸ್” (ಒತ್ತಡ) ಉಂಟಾಗಿ ಹೂವುಗಳು ಕಾಣಿಸಿಕೊಂಡಿತ್ತವೆ. ನೈಜವಾಗಿ ಯೋಚಿಸಿದಾಗ ಈ ಅಕಾಲಿಕ ಹೂಗಳಿಂದ ರೈತರಿಗೆ ಯಾವುದೇ ಪ್ರಯೋಜನ ಲಭಿಸುವುದಿಲ್ಲ. ಮಿಗಿಲಾಗಿ ಈ ಹೂಗಳು ಮುಂಬರುವ ಮಳೆಗಳಿಂದಾಗಿ ರೋಗ ರುಜಿನಿಗಳಿಗೆ ತುತ್ತಾಗಿ ಕಪ್ಪಾಗಿ ನಾಶಗೊಳ್ಳುತ್ತವೆ. ಒಂದು ಪಕ್ಷ ಕಾಯಿ ಕಚ್ಚಿದರೂ ಅವುಗಳು ಮಳೆ, ಹೆಚ್ಚಿನ ತೇವಾಂಶ, ಕೀಟರೋಗಗಳ ಸತತ ಭಾಧೆಯಿಂದಾಗಿ ಗುಣಮಟ್ಟದ ಕಾಯಿಗಳಾಗಿ ಬೆಳೆವಣಿಗೆಯಾಗುವುದಿಲ್ಲ.
ಇಂತಹ ಕಾಯಿಗಳು ಒಂದು ಪಕ್ಷ ಬಲಿತು, ಹಣ್ಣಾದರೂ ಅವುಗಳು ತೀರಾ ಕಳಪೆ ನೋಟ ಹಾಗೂ ಹೀನ ಗುಣಮಟ್ಟ ಹೊಂದಿದ್ದು, ಮಾರಾಟಕ್ಕೆ ಹಾಗೂ ತಿನ್ನಲು ಯೋಗ್ಯವಾಗಿರುವುದಿಲ್ಲ. ಕೇವಲ ಉಪ್ಪಿನಕಾಯಿ ಅಥವಾ ಚಟ್ನಿ ಮಾಡಲು ಅವುಗಳನ್ನು ಬಳಸಬಹುದಷ್ಟೇ. ಆದ್ದರಿಂದ ಈ ಕಾರಣಗಳಿಂದಾಗಿ ರೈತರು ಈಗ ಬಂದಿರುವ ಹೂಗಳನ್ನು ಉಪೇಕ್ಷೆ ಮಾಡುವುದು ಒಳಿತು. ಈ ಹೂಗಳನ್ನು ಉಳಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡುವ ಅವಶ್ಯಕತೆ ಇರುವುದಿಲ್ಲ.
ಪ್ರಸಕ್ತ ಅಕಾಲಿಕವಾಗಿ ಬಂದಿರುವ ಹೂಗಳು ನಾಶವಾದರೂ ನಂತರ ಮುಖ್ಯ ಹೂ ಬಿಡುವ ಹಂಗಾಮಿನಲ್ಲಿ (ಜನವರಿ-ಫೆಬ್ರವರಿ) ಹೂ ಬಿಡುವಿಕೆಗೆ ಯಾವುದೇ ತೊಂದರೆ, ಅಡಚಣೆ ಉಂಟಾಗುವುದಿಲ್ಲವೆAಬ ವಿಷಯವನ್ನು ಮಾವು ಬೆಳಗಾರರ ಗಮನಕ್ಕೆ ಈ ಪ್ರಕಟಣೆ ಮೂಲಕ ತರಲಾಗಿದೆ.
ಮಾವಿನ ಗಿಡಗಳಲ್ಲಿ ಅಕಾಲಿವಾಗಿ ಹೂವು ಬಂದಿರುವ ಬಗ್ಗೆ ರೈತರಿಗೆ ಮಾರ್ಗದರ್ಶನ

Leave a comment
Leave a comment