ಇತ್ತೀಚೆಗೆ ತುಮಕೂರಿನ ೨೪ನೇ ವಾರ್ಡ್ ಉಪಾರಹಳ್ಳಿ ಬಡಾವಣೆಯಲ್ಲಿ ಗ್ರಾಮ ದೇವತೆ ಶ್ರೀ ಕಾಳಘಟ್ಟಮ್ಮ ದೇವಸ್ಥಾನ ನೂತನ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪರಮಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳಿಗೆ ಶ್ರೀ ಕಾಳಘಟ್ಟಮ್ಮ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಹಾಗೂ ಉಪ್ಪಾರಹಳ್ಳಿ ಭಕ್ತಾಧಿಗಳ ವತಿಯಿಂದ ಗುರು ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಮಹಾನಗರ ಪಾಲಿಕೆ ಸದಸ್ಯರಾದ ಶಿವರಾಂ, ಧರಣೇಂದ್ರ ಕುಮಾರ್ (ರಾಜು), ಮುಖಂಡರುಗಳಾದ ಸ್ವಚ್ಛ ಮಂಜುನಾಥ್, ಸಿದ್ಧರಾಜು ಗೌಡ, ನಟರಾಜು, ನರಸಿಂಹಣ್ಣ, ಉಪ್ಪಾರಹಳ್ಳಿ ಕುಮಾರ್, ಗುತ್ತಿಗೆದಾರರಾದ ಶ್ರೀನಿವಾಸ್, ಅರ್ಚಕರಾದ ತಿಮ್ಮಪ್ಪ, ರೇವಣ್ಣ ಸಿದ್ಧಪ್ಪ, ನಿಖಿಲ್, ನಾಗೇಶ್, ಅಯ್ಯೂಬ್, ಲೋಕೇಶ್ ಸ್ವಾಮಿ, ಮಂಜು, ರಂಗಸ್ವಾಮಿ, ಪ್ರಕಾಶ್ ಸೇರಿದಂತೆ ಇನ್ನಿತರೆ ಉಪ್ಪಾರಹಳ್ಳಿ ಬಡಾವಣೆಯ ಮುಖಂಡರು ಉಪಸ್ಥಿತರಿದ್ದರು.