ತುಮಕೂರು ಗ್ರಾಮಾಂತರದ ಹೆಗ್ಗೆರೆ ಪಂಚಾಯಿತಿ ಒಕ್ಕೋಡಿ ಗ್ರಾಮದಲ್ಲಿ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜೋತಿ ಯೋಜನೆಯ ಸ್ವೀಕೃತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಗಳ ಕೋಟೆ ನರಸಿಂಹರಾಜು ಕಾಂಗ್ರೆಸ್ ಪಕ್ಷ ಚುನಾವಣೆಗಿಂತ ಮುಂಚೆ ನೀಡಿದ ಭರವಸೆಯನ್ನು ಈಡೇರಿಸುತ್ತಿದ್ದು ಹಾಗಾಗಿ ಕಾಂಗ್ರೆಸ್ ಸರ್ಕಾರದ ಜನಪ್ರಿಯ ೫ ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಉಚಿತ ಬಸ್ ಪ್ರಯಾಣ, ಗೃಹ ಜ್ಯೋತಿ ಯೋಜನೆ ಉಚಿತ ವಿದ್ಯುತ್, ಗೃಹಲಕ್ಷಿ÷್ಮ ಯೋಜನೆ ಪ್ರತಿ ಮನೆಯೊಡತಿಗೆ ೨೦೦೦, ಅನ್ನ ಭಾಗ್ಯ ಯೋಜನೆ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ಹಾಗೂ ಪದವೀಧರರಿಗೆ ವಿಶೇಷ ಬತ್ಯೆ ಯೋಜನೆ, ಈ ಎಲ್ಲ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿದ್ದು ಅದರ ಭಾಗವಾಗಿ ಈಗಾಗಲೇ ಶಕ್ತಿ ಯೋಜನೆ ಹಾಗೂ ಗೃಹಜೋತಿ ಯೋಜನೆಯನ್ನು ಪ್ರಾರಂಭಿಸಿದ್ದು ಇನ್ನೂ ಗೃಹಲಕ್ಷಿ÷್ಮ ಯೋಜನೆಯನ್ನು ಮುಂದಿನ ವಾರದಿಂದ ಪ್ರಾರಂಭವಾಗಲಿದ್ದು ಎಲ್ಲ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು. ಅದರಲ್ಲೂ ನಮ್ಮ ತುಮಕೂರು ಗ್ರಾಮಾಂತರದಲ್ಲಿ ಪ್ರತಿಯೊಬ್ಬರಿಗೂ ತಲುಪಬೇಕು. ಹಾಗಾಗಿ _ತುಮಕೂರು ಗ್ರಾಮಾಂತರದಲ್ಲಿ ಈ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಪ್ರತ್ಯೇಕ ತಂಡವನ್ನು ರಚಿಸಿದ್ದು ಇದರ ಸದುಪಯೋಗ ವನ್ನು ತುಮಕೂರು ಗ್ರಾಮಾಂತರ ಜನತೆ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಯಾರಿಗಾದರೂ ಈ ಯೋಜನೆಯ ಬಗ್ಗೆ ಮಾಹಿತಿ ಹಾಗೂ ಯೋಜನೆ ಪಡೆಯಲು ಆಗದಿದ್ದರೆ ದಯಮಾಡಿ ಈ ಕೆಳಕಂಡ ಸಹಾಯವಾಣಿಗೆ ಕರೆ ಮಾಡಿ ಯೋಜನೆಯನ್ನು ಪಡೆದುಕೊಳ್ಳಬಹುದು. ನರಸಿಂಹರಾಜು -೯೬೮೬೮೮೩೦೦೮, ಗಿರಿ ಸ್ವಾಮಿ-೮೧೦೫೯೬೩೧೩೨, ರಜನಿಕಾಂತ್-೯೧೧೩೯೮೫೭೮೫, ನರಸಿಂಹಮೂರ್ತಿ-೮೩೧೦೬೭೬೬೬೩. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಷಣ್ಮುಖಪ್ಪನವರು ಮಾತನಾಡಿ ಕೊನೆ ಕ್ಷಣದಲ್ಲಿ ನನಗೆ ಟಿಕೆಟ್ ನೀಡಿದರು ಹಾಗಾಗಿ ನನಗೆ ಕ್ಷೇತ್ರ ಸುತ್ತಲಾಗಲಿಲ್ಲ ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಗ್ರಾಮಾಂತರದಲ್ಲಿ ಹಿನ್ನಡೆಯಾಯಿತು. ಈಗ ಮುಂದೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆ ಬರುವುದರಿಂದ ತುಮಕೂರು ಗ್ರಾಮಾಂತರದ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದರು. ಕಾರ್ಯಕ್ರಮದ ಆಯೋಜಕರಾದ ಗಿರಿ ಸ್ವಾಮಿ ಮಾತನಾಡಿ ಗ್ಯಾರಂಟಿ ಸ್ಕೀಮ್ ಗಳು ಪ್ರತಿಯೊಬ್ಬರಿಗೂ ತಲುಪಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಂಪಣ್ಣ, ತುಮಕೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಮೂರ್ತಿ, ರಮೇಶ್, ಕಾಂಗ್ರೆಸ್ ಮುಖಂಡ ರಜನಿಕಾಂತ್, ಪರಮೇಶ್ವರ್ ಯುವ ಸೈನ್ಯ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಹೆಗ್ಗೆರೆ ಸುರೇಶ್ ಹಾಗೂ ಮುಂತಾದವರು ಭಾಗವಹಿಸಿದ್ದರು.