ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕೋರ್ಸ್ಗಳಲ್ಲಿ ಫಿಸಿಯೋಥೆರಪಿ ಕೋರ್ಸ್ಗಳು ಅತ್ಯಂತ ಉಪಯುಕ್ತವಾಗುತ್ತಿದೆ. ವೈದ್ಯಕೀಯ ಕೋರ್ಸ್ಗಳನ್ನು ತೆಗೆದುಕೊಳ್ಳುವುದರಿಂದ ಉನ್ನತವಾದ ಹುದ್ದೆಗೆ ಆಯ್ಕೆಯಾಗಬಹುದು. ನೂತನ ತಾಂತ್ರಿಕತೆ ಪರಿಣಿತಿವುಳ್ಳ ಸಿಬ್ಬಂದಿಗಳ ಅವಶ್ಯಕತೆ ಹೊಂದಿದೆ. ರೋಗಿಗಳಿಗೆ ಉತ್ತಮ ಸೇವೆ ನೀಡಲು ಬಹು ಅವಶ್ಯಕವಾಗಿದ್ದು, ಶಿಕ್ಷಣದ ಜೊತೆ ಜೊತೆಯಲ್ಲಿ ಕಲಿಕೆಗೆ ಅತ್ಯವಶ್ಯಕವಾಗಿ ಉತ್ತಮವಾದ ಕೋರ್ಸ್ಯಾದ ಫಿಸಿಯೋಥೆರಪಿ ಕೋರ್ಸ್ಗಳು ಹೊಂದಿದೆ ಎಂದು ಕೊಯಮತ್ತೂರು ಆರ್.ವಿ.ಎಸ್. ಇನ್ಸಿ÷್ಟಟ್ಯೂಟ್ ಆಫ್ ಹೆಲ್ತ್ ಸೈನ್ಸ್ ಮತ್ತು ಆಯುರ್ವೇದ ಕಾಲೇಜಿನ ಕಾರ್ಯದರ್ಶಿಯಾದ ಡಾ.ಆರ್. ನಾಗರಾಣಿ ಷಣ್ಮುಗಂರವರು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ರವರು ಮಾತನಾಡುತ್ತಾ ಹೊಸ ಹೊಸ ಅವಿಷ್ಕಾರಗಳೂ, ತಂತ್ರಜ್ಞಾನಗಳು ಬೆಳೆದಿದೆ. ಅದನ್ನು ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳಬೇಕು. ವಿದ್ಯಾರ್ಥಿಗಳು ತ್ಯಾಗ, ಸಹನೆ, ವಿಶ್ವಾಸವನ್ನು ವೃತ್ತಿ ಜೀವನದಲ್ಲಿ ಮುಂದುವರೆಸಿಕೊAಡು ಹೋಗಬೇಕು. ಶ್ರದ್ದೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ವಿದ್ಯಾರ್ಥಿಗಳು ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು. ಹಾಗೂ ಉತ್ತಮ ಚಿಕಿತ್ಸೆಯನ್ನು ನೀಡುವುದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ. ರಮಣ್ ಎಂ. ಹುಲಿನಾಯ್ಕರ್ರವರು ಮಾತನಾಡುತ್ತಾ ನಿಮ್ಮ ತಂದೆ-ತಾಯಿಗಳ ಪರಿಶ್ರಮ ಗುರುಗಳ ಕರ್ತವ್ಯ ನಿಮ್ಮ ಪರಿಶ್ರಮಕ್ಕೆ ದಾರಿದೀಪವಾಗಿದೆ ಎಂದರು.ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಜೆ ೪ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.