ತುಮಕೂರು ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಶ್ರೀಮತಿ ಶಾರದಾ ಜಯರಾಮಪ್ಪ (ಎಸ್.ಎಸ್.ಜೆ) ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಮಾಡಲು ೧೬೦ ತಟ್ಟೆ ಮತ್ತು ಲೋಟಗಳನ್ನು ಮಂಜುನಾಥ ಆಸ್ಪತ್ರೆ ಮುಖ್ಯಸ್ಥರಾದ ಡಾ||ಪರಮೇಶ್ವರಪ್ಪ.ಎಸ್.ಜಿ. ರವರು ವಿತರಿಸಿದರು.ಈ ಸಂದರ್ಭದಲ್ಲಿ ಟ್ರಸ್ಟ್ನ ಜಯರಾಮಪ್ಪ, ಡಾ||ಹೇಮ, ಮುಖ್ಯ ಶಿಕ್ಷಕರಾದ ಶ್ರೀಮತಿ ಎಂ.ವಿ.ನಳಿನ,ಸಹ ಶಿಕ್ಷಕರಾದ ವಿಜಯಶ್ರೀ,ಬಿ.ಪಿ.ಶೋಭಾ,ರಂಗನಾಥ್,ಪ್ರಜಾವಾಣಿ ಪತ್ರಿಕಾವಿತರಕ ಸಿದ್ದಪ್ಪ, ಮುಂತಾದವರು ಉಪಸ್ಥಿತರಿದ್ದರು.