ಬದಲಾವಣೆ ಜಗದ ನಿಯಮ. ಆಯಾ ಕಾಲದ ಬದಲಾವಣೆಗಳಿಂದ ಅಭಿವೃದ್ಧಿ ಸಾಧ್ಯ. ಆದರೆ ಸಮಾಜದಲ್ಲಿ ಬದಲಾವಣೆಗಳನ್ನು ತಂದಾಗ ಪರ ವಿರೋಧಗಳು ಸಹಜ, ಸಮಾಜದ ಇಂತಹ ಯಾವುದೇ ಬದಲಾವಣೆಯು ಮೊದಲು ಪ್ರಭಾವಿಸುವುದು ಮಹಿಳೆಯರನ್ನೇ. ಹಾಗಾಗಿ ಸರ್ಕಾರಗಳು ಯಾವುದೇ ಯೋಜನೆಗಳನ್ನು ಜಾರಿಗೆ ತರುವಾಗ ಮಹಳೆಯರನ್ನೇ ಕೇಂದ್ರೀಕರಿಸಿ ಯೋಜನೆ ರೂಪಿಸುತ್ತವೆ. ಹಾಗಾಗಿ ಮಹಿಳೆಯರು ಬದಲಾವಣೆಗಳಿಗೆ ಒಗ್ಗಿಕೊಂಡರೆ ಅಭಿವೃದ್ಧಿ ಸಾಧಿಸಬಹುದು. ಎಂದು ಸಮರ್ಥ್ ಫೌಂಡೇಷನ್ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಕೇಂದ್ರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಜಾಪ್ರಗತಿ ಸಂಪಾದಕರಾದ ಎಸ್ ನಾಗಣ್ಣನವರು ಮಾತನಾಡಿದರು, ಮುಂದುವರಿದು ಈಗಿನ ಸರ್ಕಾರ ಮಹಿಳೆಯರಿಗೆ ನೀಡಿರುವ ಉಚಿತ ಬಸ್ ಪ್ರಯಾಣದಿಂದ ಗ್ರಾಮೀಣ ಭಾಗದ ಮಹಿಳೆಯರು ನಗರಗಳಿಗೆ ಬಂದು ವಿದ್ಯಾಭ್ಯಾಸ ಕಲಿಯಲು, ಕೌಶಲ್ಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಹಾಗಾಗಿ ಉಚಿತ ಎನ್ನುವುದು ಸರ್ಕಾರಕ್ಕೆ ಹೊರೆಯಾಗದೆ ಅಭಿವೃದ್ಧಿಗೆ ದಾರಿಯಾಗುತ್ತದೆ. ಎನ್ನುವ ದೃಷ್ಠಿಕೋನದಿಂದ ಅರ್ಥೈಸಿಕೊಳ್ಳಬೇಕು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಸ್ತಿçà ಯುಗ ಪ್ರಾರಂಭವಾಗಿದೆ ಎನಿಸುತ್ತದೆ. ಎಂದರು.
ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ವಕ್ತಾರರಾದ ಮುರಳೀಧರ ಹಾಲಪ್ಪ ನವರು ಮಾತನಾಡುತ್ತಾ ಹಿಂದಿನ ಸರ್ಕಾರದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾಗ, ಕರ್ನಾಟಕದಾದ್ಯಂತ ಯುವ ಜನರಿಗೊಸ್ಕರ ಉದ್ಯೋಗ ಮೇಳಗಳನ್ನು ನಡೆಸಿ ಉದ್ಯೋಗ ದೊರಕಿಸಿಕೊಳ್ಳಲು ಅನುವು ಮಾಡಲಾಯಿತು. ಜೊತೆಗೆ ಸಾವಿರಾರು ಮಹಿಳೆಯರಿಗೆ ಸ್ವಾವಲಂಭಿಗಳಾಗಿ ದುಡಿಯಲು ಮಾರ್ಗದರ್ಶನ ಮಾಡಲಾಯಿತು. ಮಹಿಳೆಯರು ಉದ್ದಿಮೆದಾರರಾಗಲು ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿದೆ ಅದರ ಉಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕವಾಗಿ ಸಧೃಡರಾಗಬೇಕು. ಇಷ್ಟರಲ್ಲೇ ಎಲ್ಲಾ ಇಲಾಖೆಗಳನ್ನು ಒಗ್ಗೂಡಿಸಿ ತುಮಕೂರಿನಲ್ಲಿ ಮಹಿಳೆಯರಿಗಾಗಿ ಒಂದು ಬೃಹತ್ ಕಾರ್ಯಾಗಾರವನ್ನು ನನ್ನ ನೇತೃತ್ವದಲ್ಲೆ ಆಯೋಜಿಸುತ್ತೇನೆ ಎಂದರು.
ಸಮರ್ಥ್ ಫೌಂಡೇಷನ್ನಿನ ಅಧ್ಯಕ್ಷರಾದ ಹೆಚ್.ಮಲ್ಲಿಕಾರ್ಜುನಯ್ಯ, ಹಾಗೂ ಫೌಂಡೇಷನ್ನಿನ ಟ್ರಸ್ಟಿಗಳಾದ ಎಂ.ಹೆಚ್.ನಾಗರಾಜು, ಕಾರ್ಯದರ್ಶಿ ರಾಣಿಚಂದ್ರಶೇಖರ್ ಮಾತನಾಡಿದರು. ಹಾಗೂ ಶಿಬಿರಾರ್ಥಿ ರಮಾಮಣಿ ಕಾರ್ಯಕ್ರಮ ನಿರೂಪಿಸಿದರು.