ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೆಲ ಸರಕಾರಿ ಶಾಲೆಗಳ ಕೊಠಡಿಗಳು ಸಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿದ್ದು, ಅದನ್ನು ಸರಿಪಡಿಸಲು ಹಾಗೂ ಶಾಲಾ ಮಕ್ಕಳಿಗೆ ಯಾವುದೇ ಹಾನಿಗಳನ್ನು ಸಂಭವಿಸದಂತೆ ಮುಂಜಾಗ್ರತ ಕ್ರಮಕ್ಕೆ ಒತ್ತಾಯಿಸಿ, ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಮಾಡಿ ಜಿಲ್ಲಾಧಿಕಾರಿ ಬಿ. ಫೌಜಿಯ ತರನಮ್ ಭೇಟಿಯಾಗಿ ಮನವಿ ಸಲ್ಲಿಸಿ . ತದ ನಂತರ ನಗರಕ್ಕೆ ಆಗಮಿಸಿದ ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಕೃಷ್ಣ ಬೈರೇಗೌಡರವರನ್ನ ಭೇಟಿ ಮಾಡಿ ಮನವಿ ಕೊಡಲಾಯಿತು.ಈ ಸಂದರ್ಭದಲ್ಲಿ ಕಲಬುರ್ಗಿ ವಿಭಾಗಿಯ ಉಸ್ತುವಾರಿಗಳಾದ ಮಲ್ಲಿಕಾರ್ಜುನ ಸಾರವಾಡ, ಪ್ರವೀಣ್ ಕಟ್ಟಿಮನಿ, ಶಿವುಕುಮಾರ ನಾಸಿ, ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ರಾಠೋಡ, ರಾಜು ಕುಂಬಾರ ಅಪ್ಪು ಕ್ಷತ್ರಿಯ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.