ಸಸಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ನಟ ಕೆ ಶಿವರಾಂ ಅವರ ನುಡಿ ನಮನ ಕಾರ್ಯಕ್ರಮವನ್ನು ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ ಹಾಗೂ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು.
ನಗರದ ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘದಲ್ಲಿ ನಡೆದ ನುಡಿನಮನದಲ್ಲಿ ಮಾತನಾಡಿದ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅವರು, ತಳಸಮುದಾಯಗಳಿಗೆ ನಿರಂತರ ಪ್ರೇರಣೆಯಾಗಿದ್ದ ಕೆ.ಶಿವರಾಂ ಅವರು, ಐಎಎಸ್ ಹುದ್ದೆಗೆ ಅಗತ್ಯವಿರುವ ಇಂಗ್ಲೀಷ ಭಾಷೆಯ ಜ್ಞಾನವಿದ್ದರೂ ಕನ್ನಡದ ಮೇಲಿನ ಅಭಿಮಾನದಿಂದ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಕನ್ನಡದಲ್ಲಿಯೇ ಯುಪಿಎಸ್ಸಿ ಪರೀಕ್ಷೆ ಬರೆದು ಉದ್ಯೋಗವನ್ನು ಪಡೆದರು ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತುಗಳು ದೊರೆಯುಬೇಕು ಎಂಬ ಮಹತ್ವ ಉದ್ದೇಶ ಹೊಂದಿದ್ದ ಕೆ.ಶಿವರಾಮ್ ಅಧಿಕಾರದ ಅವಧಿಯಲ್ಲಿ ಗುಡಿಸಲಲ್ಲಿ ಇದ್ದವರ ಪರವಾಗಿಯೇ ಯೋಚಿಸುತ್ತಿದ್ದರು, ಅವರ ಅಭ್ಯುದಯಕ್ಕಾಗಿ ಮಿಡಿಯುತ್ತಿದ್ದರು ಎನ್ನುವುದಕ್ಕೆ ಸಾಕಷ್ಟು ಜೀವಂತ ನಿದರ್ಶನಗಳು ರಾಜ್ಯದಲ್ಲೆಡೆ ಕಾಣಿಸುತ್ತವೆ ಅಂತಹ ಜೀವಪರ ಅಧಿಕಾರಿಯಾಗಿ ಸಮುದಾಯ ಏಳ್ಗೆಗಾಗಿ ಸಂಘಟನೆಯನ್ನು ಕಟ್ಟುವಲ್ಲಿ ಪ್ರಮುಖಪಾತ್ರವಹಿಸಿದ್ದರು ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತುಗಳು ದೊರೆಯುಬೇಕು

Leave a comment
Leave a comment