ಪ್ರತಿಭಾನ್ವಿತ ಅಶಕ್ತರಿಗೆ ಸಹಾಯಹಸ್ತ ನೀಡುವುದು ನಿಜವಾದ ರಾಷ್ಟç ನಿರ್ಮಾಣದ ಕೆಲಸ : ಡಾ.ಎಂ.ಆರ್.ಹುಲಿನಾಯ್ಕರ್
ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಟೆಸ್ಟ್ -೨೦೨೩
ತುಮಕೂರು:
ವಿದ್ಯೆ ಮತ್ತು ವ್ಯಾಸಂಗದಲ್ಲಿ ಪ್ರತಿಭಾನ್ವಿತರಾಗಿದ್ದು ಅಶಕ್ತರಾದ ಮಕ್ಕಳಿಗೆ ತಮ್ಮ ಮುಂದಿನ ಉನ್ನತ ವ್ಯಾಸಂಗಕ್ಕೆ ಸಹಾಯಹಸ್ತ ನೀಡುವುದು ನಿಜವಾದ ರಾಷ್ಟç ನಿರ್ಮಾಣದ ಕೆಲಸ ಮತ್ತು ಸಮಾಜದ ಸಬಲೀಕರಣ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಮುಖ್ಯಸ್ಥರಾದ ಡಾ.ಎಂ.ಆರ್.ಹುಲಿನಾಯ್ಕರ್ರವರು ನುಡಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಇಂಜಿನಿಯರಿAಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ಜುಲೈ ೧ ರಂದು ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರವೇಶಾತಿ ಮತ್ತು ವಿದ್ಯಾರ್ಥಿ ವೇತನ ಪರೀಕ್ಷೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು, ಭಾರತವು ೫ ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಿ ಜಾಗತಿಕವಾಗಿ ತನ್ನ ಸ್ಥಾನವನ್ನು ಗುರುತಿಸುವೆಡೆಗೆ ಸಾಗುತ್ತಿದ್ದು ವಿಶ್ವದ ಎಲ್ಲಾ ರಾಷ್ಟçಗಳೂ ಅಚ್ಚರಿಯಿಂದ ಸ್ನೇಹಕ್ಕಾಗಿ ಹಾತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆಯೆಂದ ಅವರು ಇದೆಲ್ಲಕ್ಕೂ ಮೂಲಭೂತವಾಗಿ ಯುವಜನತೆ ಉತ್ತಮ ವಿದ್ಯೆ, ಸಾಧನೆ ಮತ್ತು ಉತ್ಪಾದಕತೆಗಳ ಮೂಲಕ ಇದನ್ನು ಸಾಧ್ಯವಾಗಿಸಿದ್ದಾರೆಂದು ನುಡಿದರು. ಇದನ್ನು ಮುಂದುವರೆಸಬೇಕಾದರೆ ಉತ್ತಮ ಇಂಜಿನಿಯರಿAಗ್ ಶಿಕ್ಷಣದ ಅವಶ್ಯಕತೆಯಿರುವ ಎಲ್ಲಾ ಪ್ರತಿಭಾವಂತರಿಗೂ ಅವಕಾಶ ದೊರಕಿಸಲು ಸಂಸ್ಥೆಯಿAದ ಸ್ಕಾಲರ್ಶಿಪ್ ಟೆಸ್ಟ್ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಉತ್ತಮ ಪ್ರಯೋಜನ ಪಡೆದುಕೊಳ್ಳಬೇಕೆಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್ರವರು ಮಾತನಾಡುತ್ತಾ ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ೨೦ ಲಕ್ಷ ರೂಪಾಯಿಗಳಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು ಪ್ರತಿವರ್ಷವೂ ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿ ಕಾಲೇಜಿನಲ್ಲಿ ವ್ಯಾಸಂಗಕ್ಕೆ ಅಗತ್ಯವಾದ ಉತ್ತಮ ಕಲಿಕಾ ವಾತಾವರಣ, ಲ್ಯಾಬ್ಗಳು ಹಾಗೂ ಮತ್ತೆಲ್ಲಾ ಸೌಕರ್ಯಗಳನ್ನು ಒದಗಿಸಿದ್ದು ಉದ್ಯೋಗ ನಿಯೋಜನೆ ಮತ್ತು ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆಯೆಂದರು. ವಿದ್ಯಾರ್ಥಿಗಳು ವಾರ್ಷಿಕ ಗರಿಷ್ಟ ೧೦ ಲಕ್ಷರೂಗಳ ವೇತನ ಪಡೆದುಕೊಳ್ಳುತ್ತಿದ್ದು ಇನ್ನೂ ಹೆಚ್ಚಿನ ಪ್ರಾಮುಖ್ಯತೆ ನೀಡಿ ಉದ್ಯೋಗ ಲಭ್ಯತೆ ಹೆಚ್ಚಿಸುವಲ್ಲಿ ಇಂಜಿನಿಯರಿAಗ್ ಕಾಲೇಜು ಸನ್ನದ್ಧವಾಗಿದೆಯೆಂದರು.
ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ನರೇಂದ್ರ ವಿಶ್ವನಾಥ್ರವರು ಸ್ವಾಗತಿಸಿ ವಾರ್ಷಿಕ ಚಟುವಟಿಕೆಗಳ ಪ್ರಾತ್ಯಕ್ಷಿಕೆ ಮಂಡಿಸಿದರು. ಡಾ.ಸಿ.ನಾಗರಾಜ್ರವರು ನಿರ್ವಹಿಸಿ ವಂದನಾರ್ಪಣೆ ಮಾಡಿದರು. ಪ್ರವೇಶಾತಿ ಪರೀಕ್ಷೆಗೆ ಸುಮಾರು ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಪಾಲ್ಗೊಂಡಿದ್ದರು. ಮೊದಲ ೨೦ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಅವರ ಇಚ್ಚಿತ ವಿಭಾಗಕ್ಕೆ ಪ್ರವೇಶಾತಿಯ ಅವಕಾಶ ಕಲ್ಪಿಸಲಾಯಿತು. ಸಮಾರಂಭದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ್, ಡಾ.ಕೆ.ಎಸ್.ರಾಮಕೃಷ್ಣ, ಡಾ.ಬಸವೇಶ್, ಪ್ರೊ.ಸಿ.ವಿ.ಷಣ್ಮುಖಸ್ವಾಮಿ, ಪ್ರೊ.ಜಿ.ಮಹೇಶ್ಕುಮಾರ್, ಪ್ರೊ.ಕೆ.ಪಿ.ಚಂದ್ರಯ್ಯ, ಡಾ.ಕಿಶೋರ್ ಕುಮಾರ್, ಡಾ.ಪಿ.ಜೆ.ಸದಾಶಿವಯ್ಯ, ಪ್ರೊ.ಐಜಾಜ್ ಅಹಮದ್ ಷರೀಫ್, ಪ್ರೊ.ಕೆ.ವಿ.ಚರಣ್, ಪ್ರೊ.ಜಿ.ಹೆಚ್.ರವಿಕುಮಾರ್ ಮುಂತಾದವರು ಭಾಗವಹಿಸಿದ್ದರು.
ಪ್ರತಿಭಾನ್ವಿತ ಅಶಕ್ತರಿಗೆ ಸಹಾಯಹಸ್ತ ನೀಡುವುದು ನಿಜವಾದ ರಾಷ್ಟ್ರ ನಿರ್ಮಾಣದ ಕೆಲಸ

Leave a comment
Leave a comment