ಹೋರಾಟದ ಪರವಾಗಿ ೨೦೦೧ ರಿಂದಲೂ ೩,೧೦೪ ಪದವಿಧರರಿಗೆ ಬ್ಲಾಕ್ಲಾಗ್ ಹುದ್ದೆಗಳಿಗೆ ನೇಮಕಾತಿ ಕಲ್ಪಿಸಿಕೊಡುವಲ್ಲಿ ಸಂಘಟನೆ ಸಹಕಾರಿಯಾಗಿದೆ. ಅದೇ ರೀತಿಯಲ್ಲಿ ದಲಿತ ಸಮುದಾಯದ ೫೪ ಜನ ಪದವೀಧರರು ಕೆ.ಎ.ಎಸ್ ಅಧಿಕಾರಿಗಳಾಗಿ ಇಂದು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇಂದು ಅನೇಕ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಿಗೆ ದಲಿತ ಸಮುದಾಯದವರು ಸೇರಲು ಹೋಗುವುದಕ್ಕೆ ಅವರಿಗೆ ವಯೋಮಿತಿ ಸಡಿಲಿಕೆ ಮಾಡಿ ಎಸ್.ಸಿ/ಎಸ್.ಟಿ ಸಮುದಾಯಕ್ಕೆ ವಯಸ್ಸು ೪೫ಕ್ಕೆ ಆದ್ಯತೆ ನೀಡಲು ಹೋರಾಟ ರೂಪಿಸಿದ್ದು ಅಂದಿನ ನಮ್ಮ ಪದವಿಧರರ ರಾಜ್ಯ ಸಂಘಟನೆ ಅನೇಕ ಸರ್ಕಾರಗಳು ರಾಜ್ಯದಲ್ಲಿರುವ ಪದವೀಧರರಿಗೆ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದವು, ಆ ಘೋಷಣೆಗಳು ದಲಿತ ಪದವೀಧರರಿಗೆ ಸಿಗದೇ ಅವರು ಅಭಿವೃದ್ಧಿಯಾಗದೇ ಕೇವಲ ಕನಸು ಕಾಣುವಂತಾಗಿದೆ. ಈ ಹಿಂದೆ ಘೋಷಣೆ ಮಾಡಿರುವ ಪದವೀಧರ ಅನೇಕ ಯೋಜನೆಗಳನ್ನು ಅವರಿಗೆ ದೊರಕಿಸುವ ಸಲುವಾಗಿ ಹೋರಾಟಗಳನ್ನು