ಅಂತರ್ ಕಾಲೇಜು ಬಾಲಕಿಯರ ಥ್ರೋಬಾಲ್ ಪಂದ್ಯಾವಳಿ : ಎಸ್ಎಸ್ಐಟಿ ಚಾಂಪಿಯನ್
ತುಮಕೂರು : ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮೈದಾನದಲ್ಲಿ ಜೂನ್ ೧೭ರ ಶುಕ್ರವಾರಂದು ಅಂತರ್ ಕಾಲೇಜು ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ಸಾಹೇನ ಉಪಕುಲಪತಿ ಡಾ.ಲಿಂಗೇಗೌಡ, ಸಾಹೇ ರಿಜಿಸ್ಟಾçರ್ ಡಾ.ಎಂ.ಝಡ್.ಕುರಿಯನ್ ಮತ್ತು ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ ಅವರು ಸ್ವತಃ ಥ್ರೋಬಾಲ್ ಆಡುವುದರ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಸಾಹೇನ ಐದು ಕಾಲೇಜುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಫೈನಲ್ನಲ್ಲಿ ಎಸ್ಎಸ್ಎಂಸಿ ಮತ್ತು ಎಸ್ಎಸ್ಐಟಿ ಕಾಲೇಜು ತಂಡಗಳು ಮುಖಾಮುಖಿಯಾಗಿದವು. ಎಸ್ಎಸ್ಎಂಸಿ ತಂಡವನ್ನು ಮಣಿಸಿದ ಎಸ್ಎಸ್ಐಟಿ ಕಾಲೇಜು ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಎಸ್ಎಸ್ಎಂಸಿ ಕಾಲೇಜು ತಂಡ ಎರಡನೇ ಸ್ಥಾನ ಪಡೆದುಕೊಂಡಿದ್ದರೆ, ಎಸ್ಎಸ್ಐಎಂಎಸ್ ಕಾಲೇಜು ತಂಡವು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಎಸ್ಎಸ್ಐಟಿ ತಂಡದ ಲಕ್ಷಿö್ಮÃ ಮತ್ತು ಎಸ್ಎಸ್ಎಂಸಿ ತಂಡದ ನಾಗಶ್ರೀ ಅವರಿಗೆ ಬೆಸ್ಟ್ ಪ್ಲೇಯರ್ ಪ್ರಶಸ್ತಿ ನೀಡಲಾಯಿತು.
ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದ ನಂತರ, ಪಂದ್ಯದ ನಿರ್ಣಾಯಕರಾಗಿದ್ದ ಹನುಮಂತ ಅವರನ್ನು ಸನ್ಮಾನಿಸಲಾಯಿತು. ಅದೇ ವೇಳೆ ಪಂದ್ಯಾವಳಿಗಳ ಆಯೋಜನೆ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಎಮ್.ಸಿ.ಎ ವಿಭಾಗದ ಪ್ರೊ.ಮೋಹನ್ ಕುಮಾರ ಅವರು ಪಂದ್ಯಾವಳಿಗಳ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ತಿಳಿಸಿದರು.