ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಳಸ ಪ್ರಾಯವಾಗಿದೆ ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ವಿನಾಯಕನಗರದಲ್ಲಿರುವ ಶ್ರೀಸಿದ್ದಿವಿನಾಯಕ ಸೇವಾ ಮಂಡಳಿ ಆಯೋಜಿಸಿದ್ದ ೪೭ನೇ ವರ್ಷದ ಗಣೇಶಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕಳೆದ ೪೭ ವರ್ಷಗಳಿಂದಲೂ ಈ ಜಾಗದಲ್ಲಿ ಹಿರಿಯರಾದ ಜಗದೀಶ್ ಆರಾಧ್ಯರು ಸೇರಿದಂತೆ ಅನೇಕ ಹಿರಿಯರು ವಿನಾಯಕ ಪ್ರತಿಷ್ಠಾಪನೆ ಮಾಡುತ್ತಾ, ಸಾಂಸ್ಕöÈತಿಕವಾಗಿ ಮತ್ತು ಶ್ರದ್ದಾಪೂರ್ವಕವಾಗಿ ನಮ್ಮ ಸಂಸ್ಕöÈತಿಯನ್ನು ಉಳಿಸಿಕೊಂಡು ಬಂದಿದ್ದಾರೆ.ಅದೇ ರೀತಿಯಲ್ಲಿ ನೂತನ ಆಡಳಿತ ಮಂಡಳಿಯೂ ಸಹ ಮುನ್ನೆಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿಗಳು ಆಶೀರ್ವಚನ ನೀಡಿ,ಗಣೇಶ ಸಂಘಟನೆಗೆ ಪ್ರಧಾನ ದೇವತೆ, ಇದನ್ನೇ ಅರಿತೇ ತಿಲಕರು ಸ್ವಾತಂತ್ರ ಹೋರಾಟದಲ್ಲಿ ಜನರನ್ನು ತೊಡಗಿಸಲು ಸಾಮೂಹಿಕ ಗಣೇಶ ಉತ್ಸವಗಳನ್ನು ಆರಂಭಿಸಿದರು.ಅದನ್ನು ಇಂದಿಗೂ ಮುಂದುವರೆಸಿಕೊAಡು ಬರಲಾಗುತ್ತಿದೆ.ಘರ್ ಘರ್ ಮೇ ಗಣಪತಿ ಹೋಗಿ,ಇಂದು ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯುತ್ತಿದೆ.ಇದು ಒಳ್ಳೆಯ ಬೆಳೆವಣಿಗೆ,ಯುವಜನತೆ ಹೆಚ್ಚಿನ ರೀತಿಯಲ್ಲಿ ಇದರಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂಘಟನೆಯ ದೃಷ್ಟಿಯಿಂದ ಒಳ್ಳೆಯದು ಎಂದರು.
ಸಿದ್ದಿವಿನಾಯಕ ಸೇವಾ ಮಂಡಳಿಯ ಉಪಾಧ್ಯಕ್ಷ ಹೆಚ್.ಆರ್.ನಾಗೇಶ್ ಮಾತನಾಡಿ,೧೯೭೭ರಿಂದ ಆರಂಭವಾದ ಈ ಸಿದ್ದಿ ವಿನಾಯಕ ಸೇವಾ ಮಂಡಳಿ ಶ್ರೀಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ಆರಂಭವಾದ ಗಣೇಶಮೂರ್ತಿ ಪ್ರತಿಷ್ಠಾಪನೆ ಯಾವುದೇ ವಿಘ್ನವಿಲ್ಲದೆ ನಡೆಯುತ್ತಿದೆ.ಸುಮಾರು ಒಂದು ತಿಂಗಳ ಕಾಲ ನಡೆಯುವ ಸಾಂಸ್ಕöÈತಿಕ ಉತ್ಸವದಲ್ಲಿ ದೇಶದ ಹಿರಿಯ ಕಲಾವಿದರು ಪಾಲ್ಗೊಂಡು ಕಾರ್ಯಕ್ರಮ ನೀಡಿದ್ದಾರೆ.ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಸಮುದಾಯಭವನ್ನು ಶುಭ ಸಮಾರಂಭಗಳಿಗೆ ಅತಿ ಕಡಿಮೆ ಬಾಡಿಗೆಗೆ ನೀಡುತ್ತಿದ್ದೇವೆ.ಈ ಬಾರಿ ವಿಶೇಷವಾಗಿ ಸಾಮೂಹಿಕ ಭಾಗಿನ(ಮಡಿಲು ಅಕ್ಕಿ) ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ.ಎಲ್ಲರೂ ಸಹಕಾರ ನೀಡಬೇಕೆಂದರು.
ರೆಡ್ಕ್ರಾಸ್ನ ರಾಷ್ಟಿçÃಯ ಸಮಿತಿ ಪ್ರತಿನಿಧಿ ಎಸ್.ನಾಗಣ್ಣ ಮಾತನಾಡಿ,೧೯೭೨ರಲ್ಲಿ ಮಂಡಿಪೇಟೆಯಲ್ಲಿ ಪ್ರಾರಂಭವಾದ ಸಿದ್ದಿವಿನಾಯಕ ಸೇವಾ ಸಮಿತಿ,ಸರಕಾರ ನೀಡಿದ ಈ ಜಾಗದಲ್ಲಿ ೧೯೭೭ರಿಂದ ಆರಂಭಗೊAಡಿತ್ತು.ಅAದು ಸಿದ್ದಗಂಗಾ ಮಠಾಧ್ಯಕ್ಷರಾದ ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಅಡಿಗಲ್ಲು ಹಾಕಿ,ಆಶೀರ್ವದಿಸಿದ್ದರು.ಅವರು ಅಡಿಗಲ್ಲು ಹಾಕಿದ ಯಾವುದೇ ಕಾರ್ಯಕ್ರಮಗಳು ಅರ್ಧಕ್ಕೆ ನಿಂತಿಲ್ಲ.ಉತ್ತೋತ್ತರವಾಗಿ ಬೆಳೆಯುತ್ತಲೇ ಇವೆ.ಪೌರಾಣಿಕ ಹಿನ್ನೇಲೆಯ ಭಕ್ತ ಮಾರ್ಕಂಡೇಯ ರೂಪಕ ಉತ್ತಮವಾಗಿ ಮೂಡಿಬಂದಿದೆ.ವಿಘ್ನೇಶ್ವರ ಸ್ವರ್ವವ್ಯಾಪ್ತಿ ದೇವರು.ಇಡೀ ವಿಶ್ವದಲ್ಲಿಯೇ ಗಣೇಶನ ದೇವಾಲಯಗಳನ್ನು ಕಾಣಬಹುದಾಗಿದೆ.ಸುಖಿ ಕುಟುಂಬದ ಹೆಸರಿನಲ್ಲಿ ಕೌಟುಂಬ ಸಂಬAಧಗಳು ಜಾಳಾಗುತ್ತಿರುವ ಇಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಆಚರಿಸುವ ಗಣೇಶ ಉತ್ಸವ ಎಲ್ಲರಿಗೂ ಮಾದರಿಯಾಗಲಿ ಎಂದರು.
ಆರಂಭದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ಗಣೇಶಮೂರ್ತಿ ಪ್ರತಿಷ್ಠಾಪಿಸಿ, ಶುಭ ಹಾರೈಸಿದರು.
ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
Leave a comment
Leave a comment