ಸ್ಲಂ ಜನಾಂದೋಲನ ಕರ್ನಾಟಕ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಕರ್ನಾಟಕದಲ್ಲಿ ನಡೆಯುತ್ತಿರುವ 2ಹಂತದ ಚುನಾವಣೆಯಲ್ಲಿ 16 ಲೋಕಸಭಾ ಕ್ಷೇತ್ರದಲ್ಲಿ ಸ್ಲಂ ಜನರ ಮತ ಭಾರತ ಸಂವಿಧಾನ ರಕ್ಷಣೆಗಾಗಿ ಜಾಥಾ ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಸರ್ಕಾರದ ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಜಿ ಪರಮೇಶ್ವರ್ ಹೇಳಿದ್ದರು.
ಇಂದು ತುಮಕೂರಿನ ಅವರ ನಿವಾಸದಲ್ಲಿ ಕರೆದಿದ್ದ ಪರಿಶಿಷ್ಟ ಜಾತಿ ಸಂಘಟನೆಗಳ ಮುಖಂಡರು ಮತ್ತು ಸ್ಲಂ ಸಂಘಟನೆಯ ಮುಖಂಡರೊoದಿಗೆ ಸಭೆ ನಡೆಸಿ ದೇಶದಲ್ಲಿ ಎದುರಾಗಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯುತ ನಾಗರೀಕ ಸಂವಿಧಾನವನ್ನು ರಕ್ಷಿಸಬೇಕು ಆಗ ಮಾತ್ರ ನಾಗರೀಕ ಹಕ್ಕುಗಳು ಉಳಿಯಲು ಸಾಧ್ಯ ಪಾಶ್ಚಿಮಾತ್ಯ ದೇಶಗಳು ಹಾಗೂ ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲಿ ಬಂದಿರುವ ಸ್ಥಿತಿ ಬಿಜೆಪಿಗೆ ಬಹುಮತ ಸಿಕ್ಕರೆ ನಾವು 2025ರಲ್ಲಿ ಎದುರಿಸಬೇಕಾಗಿದೆ ಈ ನಿಟ್ಟಿನಲ್ಲಿ ಸ್ಲಂ ಜನಾಂದೋಲನ ಸಂಘಟನೆ ಕೊಳಗೇರಿ ಜನರಿಗೆ ಮತಜಾಗೃತಿ ಕೈಗೊಂಡು ವಂಚಿತ ಸಮುದಾಯಗಳು ಸಂವಿಧಾನ ರಕ್ಷಣೆಗಾಗಿ ಹಾಗೂ ಪ್ರಜಾಪ್ರಭುತ್ವ ಉಳಿಸಲು ಮತ ಚಾಲಾಯಿಸಲು ಕರೆ ನೀಡುತ್ತಿರುವುದು ಮಾದರಿಯಾಗಿದೆ. ಇಂದು ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ದಲಿತ ಸಂಘಟನೆಗಳು ಎಡಪಂಥಿಯ ಸಂಘಟನೆಗಳು, ರೈತ ಸಂಘಟನೆಗಳ, ಮಹಿಳಾ ಸಂಘಟನೆಗಳು ಮಾನವ ಹಕ್ಕು ಸಂಘಟನೆಗಳು ಮತ್ತು ಸ್ಲಂ ಸಂಘಟನೆಗಳು ಸಂವಿಧಾನ ರಕ್ಷಣೆಗಾಗಿ ಜಾಗೃತಿ ಕೈಗೊಂಡಿವೆ ಸಂವಿಧಾನ ಆಶಯಗಳನ್ನೆ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ನ್ಯಾಯಪತ್ರದಲ್ಲಿ ಪ್ರತಿಪಾಧಿಸಿದೆ ಸರ್ವರನ್ನು ಒಳಗೊಂಡು ಅಭಿವೃದ್ಧಿಯೆ ಸಂವಿಧಾನದ ನೈಜ ಮೌಲ್ಯವಾಗಿದೆ, ಇದರ ರಕ್ಷಣೆಗಾಗಿ ನಾವೆಲ್ಲರು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ ಜಿಲ್ಲೆಯಲ್ಲಿ ಮುದ್ದಹನುಮೇಗೌಡರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದ್ದರು.