ತುಮಕೂರು: ವಿಶ್ವವಿದ್ಯಾನಿಲಯಗಳ ಕರ್ಯಕ್ಷಮತೆ ಅಲ್ಲಿನ ಪ್ರಾಧ್ಯಾಪಕರ ಸಂಶೋಧನಾ ಪ್ರವೃತ್ತಿಯಿಂದಾಗುವ ಶೈಕ್ಷಣಿಕ ಬೆಳವಣಿಗೆಯ ಮೇಲೆ ಅವಲಂಬಿಸಿರುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ (ಪಿ.ಎಂ.ಇ.ಬಿ.) ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐ.ಕ್ಯೂ.ಎ.ಸಿ.) ವತಿಯಿಂದ ಬುಧವಾರ ಆಯೋಜಿಸಿದ್ದ ‘ಧನ ಸಹಾಯ ಸಂಸ್ಥೆಗಳು ಮತ್ತು ಸಂಶೋಧನಾ ಪ್ರಸ್ತಾಪಗಳ ತಯಾರಿಕೆ’ ಕುರಿತ ಕರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹಲವು ಧನ ಸಹಾಯ ಸಂಸ್ಥೆಗಳು ನೀವು ಸಲ್ಲಿಸುವ ಯೋಜನಾಪೂರಕವಾದ ಸಂಶೋಧನಾ ಪ್ರಸ್ತಾಪಗಳನ್ನು ಮೌಲ್ಯಮಾಪನ ಮಾಡಿ, ಅವಶ್ಯಕವಾಗಿರುವ ಧನ ಸಹಾಯ ಮಾಡುತ್ತವೆ. ನಿಮ್ಮ ಕ್ಷಮತೆಯಿಂದ ಅನುಮೋದಿಸಿದ ಸಂಶೋಧನಾ ಪ್ರಸ್ತಾಪಗಳು ನಿಮ್ಮ ವೃತ್ತಿಜೀವನ ಹಾಗೂ ಸಂಸ್ಥೆಯ ವಿಶ್ವಾಸರ್ಹತೆಯನ್ನು ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರತಿಬಿಂಬಿಸುತ್ತದೆ ಎಂದರು.
ಈ ಶೈಕ್ಷಣಿಕ ರ್ಷದಲ್ಲಿ ನಮ್ಮ ವಿವಿಯಿಂದ ಆಗಲೇ ೨೦ ಸಂಶೋಧನಾ ಪ್ರಸ್ತಾಪಗಳು ವಿವಿಧ ಧನ ಸಹಾಯ ಸಂಸ್ಥೆಗಳಿಗೆ ಸಲ್ಲಿಕೆಯಾಗಿದ್ದು, ಅದರಲ್ಲಿ, ಏಳು ಪ್ರಸ್ತಾಪಗಳಿಗೆ ಧನ ಸಹಾಯದ ಅನುಮೋದನೆ ಸಿಕ್ಕಿರುವುದು ಸಂತಸದ ವಿಚಾರ. ಎರಡು ಸಂಶೋಧನಾ ಪ್ರಸ್ತಾಪಗಳ ಮುಂದಿನ ಹಂತ ಶುರುವಾಗಿರುವುದು ವಿವಿಯ ಅಭಿವೃದ್ಧಿಯೆಂದೇ ಹೇಳಬಹುದು ಎಂದು ತಿಳಿಸಿದರು.
ಯುಜಿಸಿಯ ನಿವೃತ್ತ ಅಧಿಕಾರಿ ಡಾ. ಅನಂತ್ ರಾಮ್ ಮಾತನಾಡಿ, ತುಮಕೂರು ವಿವಿಯು ಮುಂಬರುವ ದಿನಗಳಲ್ಲಿ ಪ್ರತೀ ವಿಭಾಗದಿಂದ ಹತ್ತು ಸಂಶೋಧನಾ ಪ್ರಸ್ತಾಪಗಳನ್ನು ಹಲವು ಧನಸಹಾಯ ಸಂಸ್ಥೆಗಳಿಗೆ ಸಲ್ಲಿಸುವ ಯೋಜನೆಯಿದೆ. ರ್ಷಕ್ಕೆ ನೂರಕ್ಕಿಂತ ಹೆಚ್ಚು ಪ್ರಸ್ತಾಪಗಳ ಸಲ್ಲಿಯಾದರೆ ವಿವಿಯ ಸಂಶೋಧನೆಗಳಿಗೆ ಹೆಚ್ಚು ಧನಸಹಾಯ ಬರಲಿದೆ. ಹೆಚ್ಚು ಶೈಕ್ಷಣಿಕ ಪ್ರಗತಿ ಕಾಣಲಿದೆ ಎಂದರು.
ಧನ ಸಹಾಯ ಸಂಸ್ಥೆಗಳು ಮತ್ತು ಸಂಶೋಧನಾ ಪ್ರಸ್ತಾಪಗಳ ತಯಾರಿಕೆ
Leave a comment
Leave a comment