ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ವತಿಯಿಂದ ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ನಗರದ ಕುಣಿಗಲ್ ಮುಖ್ಯರಸ್ತೆ, ಸದಾಶಿವನಗರ ಬಡಾವಣೆಯಲ್ಲಿರುವ ಭೈರವೇಶ್ವರ ಕಾಲೇಜಿನ ಆವರಣದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಉಚಿತ ಆರೋಗ್ಯ ತಪಾಸಣಾ ಶಿಬಿರದ ಆಯೋಜಕರಾದ ಎಸ್.ಡಿ.ಟಿ.ಯು ಕಾರ್ಯದರ್ಶಿಗಳು ಮಾತನಾಡುತ್ತಾ ಈ ಶಿಬಿರದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಬಗ್ಗೆಯ ತಪಾಸಣೆಗಳನ್ನು ನಡೆಸಲಾಗುತ್ತಿದ್ದು ಇದರಲ್ಲಿ ಬಿಪಿ, ಸಕ್ಕರೆ ಖಾಯಿಲೆ, ರಕ್ತ ತಪಾಸಣೆ, ಹೃದ್ರೋಗ ತಪಾಸಣೆ, ಕಣ್ಣಿನ ತೊಂದರೆ, ಶ್ವಾಸಕೋಶದ ತಪಾಸಣೆ ಸೇರಿದಂತೆ ಹಲವಾರು ವಿಧವಾದ ತಪಾಸಣೆಗಳನ್ನು ನಡೆಸಲಾಗುತ್ತಿದ್ದು ನಮ್ಮ ಕಾರ್ಮಿಕ ಬಂಧುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು ಎಂದು ತಿಳಿಸಿದರು.
ಈ ಒಂದು ಶಿಬಿರದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಕಾರ್ಮಿಕರು ಮತ್ತು ಅವರ ಕುಟುಂಬವರ್ಗದವರು ಇದರ ಲಾಭವನ್ನು ಪಡೆದುಕೊಂಡರು ಎಂದು ತಿಳಿಸಿದರು, ಈ ಒಂದು ಕಾರ್ಯಕ್ರಮ ಯಶಸ್ವಿಪೂರ್ಣವಾಗಲು ಸಹಕಾರಿಸಿದ ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ವೆಂಕಟೇಶ ಬಾಬುರವರಿಗೆ ನಾವುಗಳು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆಂದು ಎಸ್.ಡಿ.ಟಿ.ಯು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಝಬಿವುಲ್ಲಾ ತಿಳಿಸಿದರು.