ತುಮಕೂರು:ಮುಂಬರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಅಕ್ಟೋಬರ್ ೨೦ರಂದು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತಿದ್ದು, ಅವರೊಂದಿಗೆ ನಾನು ಸಹ ಕಾಂಗ್ರೆಸ್ ಪಕ್ಷ ಸೇರುತ್ತಿರುವುದಾಗಿ ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮ ಶ್ರೀನಿವಾಸ್ ತಿಳಿಸಿದ್ದಾರೆ.ಪತಿಯೊಂದಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಚಾರ ಸಭೆಯಲ್ಲಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಹಿಂದೆಯೇ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಪಕ್ಷಕ್ಕೆ ನಮ್ಮನ್ನು ಆಹ್ವಾನಿಸಿದ್ದರು.ನಾನು ಪ್ರತಿನಿಧಿಸಿದ ಕ್ಷೇತ್ರವನ್ನು ಬಿಡಬಾರದು ಎಂಬ ಕಾರಣಕ್ಕೆ ಹಿರಿಯೂರಿನಿಂದಲೇ ಸ್ಪರ್ಧೆಗೆ ಇಳಿದಿದ್ದೆ.ಅನಿವಾರ್ಯ ಕಾರಣಗಳಿಂದ ಸೋಲು ಕಾಣಬೇಕಾಯಿತು.ಅಂತಿಮವಾಗಿ ಅಕ್ಟೋಬರ್ ೨೦ ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದರು.ಬಿಜೆಪಿ ಪಕ್ಷದ ನಾನು ಶಾಸಕಿಯಾಗಿ ಆಯ್ಕೆಯಾಗಿದ್ದ ಹಿರಿಯೂರು ಕ್ಷೇತ್ರಕ್ಕೆ ನೀಡುವ ಅನುದಾನದಲ್ಲಿ ಯಾವುದೇ ಕೊರತೆ ಮಾಡಿರಲಿಲ್ಲ.ಆದರೆ ಗೊಲ್ಲಸಮುದಾಯಕ್ಕೆ ನೀಡಬೇಕಾದ ಸವಲತ್ತುಗಳಲ್ಲಿ ಸಾಕಷ್ಟು ಹಿಂದೇಟು ಹಾಕಿತ್ತು.೨೦೨೦ರ ಶಿರಾ ಉಪಚುನಾವಣೆ ಸಮಯದಲ್ಲಿ ತರಾತುರಿಯಲ್ಲಿ ಗೊಲ್ಲ ಅಭಿವೃದ್ದಿ ನಿಗಮ ಸ್ಥಾಪಿಸಿ, ತದನಂತರ ಕಾಡುಗೊಲ್ಲ ಅಭಿವೃದ್ದಿ ನಿಗಮ ಎಂದು ಹೆಸರು ಬದಲಾಯಿಸಿ,ಸಾಕಷ್ಟು ಗೊಂದಲಗಳನ್ನು ಮಾಡಿತ್ತು ಎಂದು ದೂರಿದರು.ಅಲ್ಲದೆ ೨೦೨೩ರಲ್ಲಿ ನಡೆದ ವಿಧಾನ ಸಭಾ ಚುನಾವಣೆ ಇನ್ನೂ ಒಂದುವರೆ ತಿಂಗಳು ಇದೇ ಎನ್ನುವಾಗ ಕಾಡುಗೊಲ್ಲ ಅಭಿವೃದ್ದಿ ನಿಗಮದ ಅಧ್ಯಕ್ಷರನ್ನು ನೇಮಕ ಮಾಡಿ, ಅನುದಾನ ನೀಡಿ, ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಅವಕಾಶವಿಲ್ಲದಂತೆ ಮಾಡಿದರು.ಇದು ನಮಗೆ ಬೇಸರ ತರಿಸಿದೆ.ನಾನು ಕೂಡ ಒಂದು ಸಮುದಾಯವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ,ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕಾಗಿದೆ ಎಂದು ಪೂರ್ಣೀಮಾ ಶ್ರೀನಿವಾಸ್ ನುಡಿದರುಪ್ರವರ್ಗ ೧ರ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ,ಪ್ರವರ್ಗ ೧ರ ಅಡಿಯಲ್ಲಿ ಬರುವ ಸುಮಾರು ೯೫ ಅತಿ ಹಿಂದುಳಿದ ಜಾತಿಗಳಿವೆ.ಅವುಗಳಲ್ಲಿ ಸುಮಾರು ಅಲೆಮಾರಿ, ಅರೆ ಅಲೆಮಾರಿ ಸಮುದಾಯ ಗಳಿವೆ. ಅವುಗಳಿಗೆ ನೀಡುತ್ತಿದ್ದ ಶೈಕ್ಷಣಿಕ ಸವಲತ್ತುಗಳನ್ನು ಹಿಂಪಡೆಯಲಾಗಿದೆ.ಹತ್ತಾರು ಬಾರಿ ಸಂಬAಧಪಟ್ಟ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು ಸ್ಪಂದಿಸಲಿಲ್ಲ.ರಾಜ್ಯದ ೩೬ ತಾಲೂಕುಗಳಲ್ಲಿ ಹಿಂದುಳಿದ ವರ್ಗದ ಹಾಸ್ಟಲ್ ಕಟ್ಟಡಗಳಿಗೆ ಅನುದಾನವಿಲ್ಲದೆ ಅರ್ಧಕ್ಕೆ ನಿಂತಿವೆ.ಜನರ ಬಳಿ ಯಾವ ಮುಖ ಇಟ್ಟುಕೊಂಡು ಹೋಗಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರುಗಳು ಭರವಸೆ ನೀಡಿದ್ದಾರೆ. ಪ್ರಾಣಾಳಿಕೆಯಲ್ಲಿ ಈ ವಿಷಯ ಇದೆ. ಹಾಗಾಗಿ ಸಮುದಾಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದರು.ಚಿತ್ರದುರ್ಗ,ದಾವಣಗೆರೆ,ತುಮಕೂರು,ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಸುಮಾರು ೪೪ ತಾಲೂಕುಗಳ ಒಳಗೊಂಡ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತಿದ್ದೇನೆ.ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು,ಶಿಕ್ಷಕ ವಲಯದಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಿAದ ಸೋಲು ಕಂಡಿದ್ದರಿAದ ಅನುಕಂಪವಿದೆ.ಅದು ನನಗೆ ಸಹಕಾರಿಯಾಗಲಿದೆ ಎಂದ ಅವರು,ಕಳೆದ ೧೯೭೩ ರಿಂದ ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಾ,ಶಿಕ್ಷಕರ ಜಲ್ವಂತ ಸಮಸ್ಯೆಗಳ ಅರಿವಿದೆ.ಶೀಘ್ರದಲ್ಲಿಯೇ ಓಪಿಎಸ್ ಕುರಿತು ಒಳ್ಳೆಯ ಸುದ್ದಿ ನೌಕರರಿಗೆ ಬರಲಿದೆ ಎಂಬ ವಿಶ್ವಾಸವಿದೆ.ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಮನವರಿಕೆ ಮಾಡಿಕೊಡಲಾಗಿದೆ. ಬಡ್ತಿ ತಾರತಮ್ಯ, ೨೦೧೫ರಿಂದಲೂ ತಡೆಹಿಡಿದಿರುವ ಸಿಬ್ಬಂದಿ ನೇಮಕ ಎಲ್ಲವೂ ಹಂತ ಹಂತವಾಗಿ ಬಗೆಹರಿಯಲಿವೆ ಎಂಬ ವಿಶ್ವಾಸವನ್ನು ಶ್ರೀನಿವಾಸ್ ವ್ಯಕ್ತಪಡಿಸಿದರು.