ಇಂದು ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕುರುಬ ಸಮಾಜದ ವತಿಯಿಂದ ಏರ್ಪಡಿಸಿದ್ದ ಕುರುಬ ಜಾಗೃತಿ ಸಮಾವೇಶದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಡಾ.ಜಿ.ಪರಮೇಶ್ವರ್ ರವರು ಭಾಗವಹಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜ ಸುಧಾರಕರಾದ ಕನಕ ದಾಸರು ನಮ್ಮ ಸಮಾಜದಲ್ಲಿ ಸಮಾನತೆ ತರಲು ಶ್ರಮ ವಹಿಸಿದ್ದನ್ನು ಸ್ಮರಿಸಿದರು ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಂಗೊಳ್ಳಿರಾಯಣ್ಣ ರವರ ತ್ಯಾಗ ಬಲಿದಾನಗಳನ್ನು ನೆನೆಯುತ್ತಾ ಸದ್ಯದ ವಿದ್ಯಾಮಾನಗಳ ಕುರಿತು ಮಾತನಾಡಿದ ಅವರು ತಮ್ಮ ಹಾಗೂ ಶ್ರೀ ಸಿದ್ದರಾಮಯ್ಯನವರ ಭಾಂಧವ್ಯ ಕುರಿತು ಮಾತನಾಡಿ ಈ ಹಿಂದೆ ತಮ್ಮ ಹಾಗೂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಬಂದ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಇಬ್ಬರ ಜುಗಲ್ ಬಂದಿಯ ಕುರಿತು ಮನಬಿಚ್ಚಿ ಮಾತನಾಡಿ ವಿರೋಧ ಪಕ್ಷಗಳು ಜಾತಿಗಳ ಮದ್ಯೆ ವಿಷಬೀಜ ಬಿತ್ತಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದು ಇಂತಹ ಯಾವುದೇ ಕುತಂತ್ರಕ್ಕೆ ಕ್ಷೇತ್ರದ ಯಾವುದೇ ಸಮಾಜದ ಜನತೆ ಕಿವಿಗೊಡದೇ ನಿಮ್ಮ ಸಹೋದರನಾಗಿ ನಿಮ್ಮ ಜೊತೆ ನಿಂತು ನಿಮಗಾಗಿ ದುಡಿಯುತ್ತಿರುವ ನನ್ನನ್ನು ಆಶೀರ್ವದಿಸಿ ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯತ್ತ ಮತ್ತಷ್ಟು ಬಲ ನೀಡಬೇಕೆಂದು ಮನವಿ ಮಾಡಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಸುಭಾಷ್ ಕಾಲೇಜಿನ ಗಂಗರಾಜು ಮತ್ತು ಪುರವಾರ ಜಿ.ಪಂ ಮಾಜಿ ಸದಸ್ಯರಾದ ತಿಮ್ಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್ ಜಿ ರವರ ಗೆಲುವಿಗೆ ಸಮಾಜದ ಮುಖಂಡರೊಂದಿಗೆ ಸೇರಿ ಅವಿರತ ಶ್ರಮವಹಿಸುವುದಾಗಿ ವಾಗ್ದಾನ ನೀಡಿದರು.