ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು ನೀಡುವುದು ಭಾರತೀಯ ಸನಾತನ ಧರ್ಮದ ಪ್ರಮುಖ ದ್ಯೇಯ ಎಂದು ಪಾವಗಡದ ರಾಮಕೃಷ್ಣ ಆಶ್ರಮದ ಡಾ.ಜಪಾನಂದ ಜೀ ತಿಳಿಸಿದ್ದಾರೆ.
ನಗರದ ತುಮಕೂರು ವಿವಿ ಕಲಾ ಕಾಲೇಜಿನಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್ ಅವರ ಸ್ಥಳೀಯ ಪ್ರದೇಶಾಭಿವೃದ್ದಿ ನಧಿಯಿಂದ ಸುಮಾರು ೮ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭÀದ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದ ಅವರು,ಇಡೀ ದೇಶದಲ್ಲಿಯೇ ವಿಶ್ವವಿದ್ಯಾಲಯವೊಂದು ತನ್ನಲ್ಲಿ ಕಲಿಯುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವುದು ತುಮಕೂರು ವಿಶ್ವವಿದ್ಯಾಲಯ ಮಾತ್ರ. ಇತ್ತೀಚಗೆ ಲಂಡನ್ ವಿಶ್ವವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ಭಾರತೀಯ ಮಕ್ಕಳಿಗಾಗಿ ಇಸ್ಕಾನ್ ಸಂಸ್ಥೆ ಮದ್ಯಾಹ್ನದ ಬಿಸಿಯೂಟ ಆರಂಭಿಸಿದ್ದು,ಇದು ಕೂಡ ಭಾರತೀಯ ಸನಾತನ ಧರ್ಮದ ದ್ಯೋತಕವಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಬರ ಆರಂಭಗೊAಡಿದೆ.ನಗರದ ಎಂಪ್ರೆಸ್ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಗ್ರಾಮೀಣ ಭಾಗದಿಂದ ಸಾವಿರಾರು ಮಕ್ಕಳು ಬರುತ್ತಾರೆ.ಅವರಿಗೂ ಸಹ ಸಾರ್ವಜನಿಕರು ಮತ್ತು ದಾನಿಗಳ ಸಹಾಯದಿಂದ ಮದ್ಯಾಹ್ನದ ಬಿಸಿಯೂಟ ನೀಡಲು ಅಗತ್ಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅದು ಸಹ ಉದ್ಘಾಟನೆಗೊಳ್ಳಲಿದೆ. ಇದರಿಂದ ಸುಮಾರು ೨೦೦೦ ಮಕ್ಕಳಿಗೆ ಅನುಕೂಲವಾಗಲಿದೆ ಎಂದ ಸ್ವಾಮೀಜಿಗಳು, ಸುಮಾರು ೧೫೦೦ ಮಕ್ಕಳು ಕಲಿಯುತ್ತಿರುವ ತುಮಕೂರು ವಿವಿ ಕಲಾ ಕಾಲೇಜಿನ ಮಕ್ಕಳಿಗಾಗಿ ತಮ್ಮ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಟ್ಟ ಶಾಸಕ ಜೋತಿಗಣೇಶ್ ಅವರಿಗೆ ಹೃಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಕುಡಿಯುವ ನೀರು ಅತ್ಯಮೂಲ್ಯವಾದ ವಸ್ತು.ಹಾಗಾಗಿ ಅದನ್ನು ಎಂದಿಗೂ ಪೊಲು ಮಾಡಬೇಡಿ. ಕುಡಿಯಲಿಷ್ಟ ಬಳಸಿ, ಕೈತೊಳೆಯಲು, ನಿಮ್ಮ ತಿಂಡಿ ಡಬ್ಬಿ ತೊಳೆಯಲು ಬೇರೆ ನೀರಿದೆ.ಅದನ್ನು ಬಳಕೆ ಮಾಡಿ.ವಿಶ್ವವಿದ್ಯಾಲಯ ನೀಡಿರುವ ಈ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಸತ್ಪçಜೆಗಳಾಗಿ ರೂಪಗೊಳ್ಳಿ ಎಂದು ಸ್ವಾಮೀಜಿ ಸಲಹೆ ನೀಡಿದರು.
ರೆಡ್ಕ್ರಾಸ್ ದೆಹಲಿ ಪ್ರತಿನಿಧಿ ಎಸ್.ನಾಗಣ್ಣ ಮಾತನಾಡಿ,ಸರಕಾರದ ನೀಡಬೇಕಾದ ಸವಲತ್ತನ್ನು ದಾನಿಗಳ ಸಹಕಾರದಿಂದ ನಿಮಗೆ ಸ್ವಾಮೀಜಿಯವರು ಒದಗಿಸಿದ್ದಾರೆ. ಹೆಚ್ಚು ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉನ್ನತ್ತಿಯತ್ತ ಮುನ್ನೆಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಮಾತನಾಡಿ,೧೫೦೦ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ನೀಡುವುದು ಅಷ್ಟು ಸುಲಭದ ಮಾತಲ್ಲ. ರುಚಿ, ಶುಚಿಯ ಜೊತೆಗೆ,ಗುಣಮಟ್ಟದ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಇದುವರೆಗೂ ಕುಡಿಯುವ ನೀರಿನ ಕೊರತೆ ಇದ್ದು, ಅದು ಕೂಡ ಇಂದು ನಿವಾರಣೆಯಾಗಿದೆ. ಇದರಿಂದ ಮಕ್ಕಳಿಗೆ ಆಹಾರದ ಜೊತೆಗೆ ಶುದ್ದ ಕುಡಿಯುವ ನೀರು ನೀಡಿದ ತೃಪ್ತಿ ನಮಗಿದೆ.ಈ ರೀತಿಯ ಯೋಜನೆ ಇಲ್ಲ. ನಾನು ಆರಂಭದಲ್ಲಿ ಕುಲಪತಿಯಾಗಿ ಬಂದಾಗ ಇಲ್ಲಿನ ಎಲ್ಲಾ ಜನಪ್ರತಿನಿಧಿಗಳನ್ನು ಭೇಟಿಯಾಗಿ ವಿವಿಯ ಭೌತಿಕ ಮತ್ತು ಭೌದ್ಧಿಕ ಬೆಳೆವಣಿಗೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದೇ, ಅದರ ಫಲವಾಗಿ ಒಂದೊAದೆ ಸವಲತ್ತುಗಳು ತಲುಪತ್ತಿವೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳ ಸಿಗಲಿವೆ ಎಂಬ ವಿಶ್ವಾಸ ನಮಗಿದೆ ಎಂದರು