ತುಮಕೂರು: ನಗರದ ಜಯನಗರದಲ್ಲಿರುವ ಕ್ಯಾಲ್ಸಿ ಅಬಾಕಸ್ ಶಾಲೆಯ ಇಬ್ಬರು ಮಕ್ಕಳು ಹುಬ್ಬಳಿಯಲ್ಲಿ ರೇಡಿಯಂಟ್ ಮೆಂಟಲ್ ಅರ್ಥಮೆಟಿಕ್ ಸಂಸ್ಥೆ ನಡೆಸಿದ ಮಾನಸಿಕ ಅಂಕಗಣಿತ ಮೌಖಿಕ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಎ ವಿಭಾಗದ ಸ್ವರ್ಧೆಯಲ್ಲಿ ೪೫೯ ಅಂಕಗಳನ್ನು ಗಳಿಸುವ ಮೂಲಕ ಪರೀಕ್ಷಿತ್.ಡಿ.ವಿ ಪ್ರಥಮ ಸ್ಥಾನ ಪಡೆದರೆ, ಡಿ ವಿಭಾಗದಲ್ಲಿ ೩೪೮ ಅಂಕಗಳಿಸಿದ ಸಮರ್ಥ ಮಹಾಂತೇಶ್ ಸಜ್ಜನ್ ಪ್ರಥಮ ಸ್ಥಾನ ಗಳಿಸಿದರು. ಅಲ್ಲದೇ ೧೨ ವಿವಿಧ ವಿಭಾಗಗಳಲ್ಲಿನ ಸ್ವರ್ಧೆಯಲ್ಲಿ ೪೫ ಮಂದಿ ಪಾಲ್ಗೊಂಡು ೧೨ ಸಮಧಾನಕ ಬಹುಮಾನಗಳಿಸಿದ್ದಾರೆ.
ನಗರದ ಜಯನಗರದಲ್ಲಿರುವ ವಿಪ್ರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಬಸವೇಶ್ವರ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾz ಪ್ರೇಮಜ್ಯೋತಿ ತೇಜಶ್ವಿನಿ ಅವರು ಕ್ಯಾಲ್ಸಿ ಅಬಾಕಸ್ ಶಾಲೆಯ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳ ಬೌದ್ದಿಕ ಶಕ್ತಿ ವಿಕಸನಕ್ಕೆ ಮತ್ತು ಚಲನಶೀಲತಗೆ ಅಬಾಕಸ್ ಕಲಿಕೆ ಪೂರಕವಾಗಲಿದೆ ಎಂದರು.
ವಕೀಲ ಆರ್.ನಾಗೇಶ್ರಾವ್ ಗಾಯಕ್ವಾಡ್ ಮಾತನಾಡಿ, ಮೌಖಿಕ ಅಂಕಗಣಿತ ಪ್ರಕ್ರಿಯೆಯನ್ನು ಕಲಿಯವುದರಿಂದ ಮಕ್ಕಳ ಮೆದುಳಿನ ಪ್ರಕ್ರಿಯೆ ವೇಗಗೊಳ್ಳುತ್ತದೆ. ಗಣಿತಶಾಸ್ತçದಲ್ಲಿ ಹೆಚ್ಚು ಪರಿಣಿತಿ ಸಾಧಿಸುತ್ತಾರೆ ಎಂದರು.
ಕ್ಯಾಲ್ಸಿ ಅಬಾಕಸ್ ಶಾಲೆಯ ಮುಖ್ಯಸ್ಥರಾದ ಸಂತೋಷ ಶಿರೂರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಅಬಾಕಸ್ ಕಲಿಕೆಯಿಂದ ಮಕ್ಕಳಿಗಾಗುವ ಪ್ರಯೋಜನೆಗಳನ್ನು ವಿವರಿಸಿದರು.
ಕ್ಯಾಲ್ಸಿ ಅಬಾಕಸ್ನ ಪ್ರಾಂಶುಪಾಲರಾದ ಸೌಮ್ಯ ಎಸ್. ಶಿರೂರ್ ಅವರು ಸ್ಥಳದಲ್ಲಿಯೇ ಮಕ್ಕಳಿಂದ ಮಾನಸಿಕ ಅಂಕಗಣಿತದ ಮೌಖಿಕ ಪರೀಕ್ಷೆಯ ಪ್ರಾಯೋಗಿಕ ಪ್ರಾತ್ಯಕ್ಷಿತೆಗಳನ್ನು ನಡೆಸಿದರು.
ಪೋಷಕರಾದ ಶ್ರೀರಂಗರಾಜು, ವಿದ್ಯಾ, ತೇಜಸ್ಸು ಮತ್ತು ದೇವರಾಜು ಮಾತನಾಡಿ, ತಮ್ಮ ಮಕ್ಕಳ ಕಲಿಕೆಯ ಪ್ರಗತಿ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕ್ಯಾಲ್ಸಿ ಅಬಾಕಸ್ ಶಾಲೆಯ ಮಕ್ಕಳಾದ ಮೋಕ್ಷ ಮತ್ತು ಧನುಶ್ರೀ ಪ್ರಾರ್ಥಿಸಿದರೆ, ಸಿದ್ದಾರ್ಥ ಮಾಧ್ಯಮ ಮಾಧ್ಯಮ ಅಧ್ಯಯನ ಕೆಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್ ಕಾರ್ಯಕ್ರಮ ನಿರೂಪಿಸಿದರು.
ಕ್ಯಾಲ್ಸಿ ಅಬಾಕಸ್ ಶಾಲೆಗೆ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ
Leave a comment
Leave a comment