ತುಮಕೂರು: ನಗರದ ಜಯನಗರದಲ್ಲಿರುವ ಕ್ಯಾಲ್ಸಿ ಅಬಾಕಸ್ ಶಾಲೆಯ ಮಕ್ಕಳು ಹುಬ್ಬಳಿಯಲ್ಲಿ ರೇಡಿಯಂಟ್ ಮೆಂಟಲ್ ಅರ್ಥಮೆಟಿಕ್ ಸಂಸ್ಥೆ ನಡೆಸಿದ ಮಾನಸಿಕ ಅಂಕಗಣಿತ ಟೇಬಲ್ ಸ್ವರ್ಧೆಯಲ್ಲಿ ಒರ್ವ ಪ್ರಥಮ ಸ್ಥಾನ ಪಡೆದಿರುವುದು ಸೇರಿದಂತೆ ೧೧ ಮಂದಿ ಮಕ್ಕಳು ಪ್ರಶಸ್ತಿ ಗಳಿಸಿದ್ದಾರೆ.
ಟೇಬಲ್ ಸ್ವರ್ಧೆಯಲ್ಲಿ ನಾಲ್ಕನೆಯ ತರಗತಿ ಓದುತ್ತಿರುವ ಮನ್ವೀತ ಪ್ರಥಮ ಸ್ಥಾನ ಪಡೆದರೆ, ಸಮರ್ಥ ದ್ವೀತೀಯ ಸ್ಥಾನ ಗಳಿಸಿದರು. ಅಲ್ಲದೇ ವಿವಿಧ ವಿಭಾಗಗಳಲ್ಲಿನ ಸ್ವರ್ಧೆಯಲ್ಲಿ ನಾಗಾಚರಿತಾ, ಅನನ್ಯಾ, ವಿಷ್ಣುನಿಧಿ, ನಾಗಾಧಿರಜ ಅವರು ತೃತೀಯ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಲಿಖಿತ್, ಶಿವಾನಿ,ಮಿತ್ರವಿಂದ, ಹರ್ಷಿಣಿ ಮತ್ತು ಮಲ್ಲಿಕಾ ಅವರು ಸಮಧಾನಕರ ಬಹುಮಾನ ಗಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತುಮಕೂರಿನ ಕ್ಯಾಲ್ಸಿ ಅಬಾಕಸ್ ಶಾಲೆಯ ಮಕ್ಕಳಿಗೆ ರೆಡಿಮೆಂಟ್ ಅಕಾಡೆಮಿ ಸಂಸ್ಥೆಯ ಮುಖ್ಯಸ್ಥರಾದ ವೆಂಕಟೇಶ್ ಕಬಾಡಿ ಮತ್ತು ಗೀತಾ ಕಬಾಡಿ ಅವರು ಪ್ರಶಸ್ತಿಗಳನ್ನು ವಿತರಿಸಿದರು.
ಮೌಖಿಕಅಂಕಗಣಿತ ಪ್ರಕ್ರಿಯೆಯನ್ನುಕಲಿಯವುದರಿಂದ ಮಕ್ಕಳ ಮೆದುಳಿನ ಪ್ರಕ್ರಿಯೆ ವೇಗಗೊಳ್ಳುತ್ತದೆ.ಗಣಿತಶಾಸ್ತçದಲ್ಲಿ ಹೆಚ್ಚು ಪರಿಣಿತಿ ಸಾಧಿಸುತ್ತಾರೆಂದು ವೆಂಕಟೇಶ್ ಕಬಾಡಿ ಹೇಳಿದರು. ಕ್ಯಾಲ್ಸಿ ಅಬಾಕಸ್ ಶಾಲೆಯ ಪ್ರಾಂಶುಪಾಲರಾದ ಸೌಮ್ಯ ಎಸ್.ಶಿರೂರ್ ಮತ್ತು ಶಿಕ್ಷಕರು ಹಾಜರಿದ್ದರು.
ಟೇಬಲ್ ಸ್ವರ್ಧೆಯಲ್ಲಿ ಕ್ಯಾಲ್ಸಿ ಅಬಾಕಸ್ ಶಾಲೆಗೆ ಪ್ರಥಮ ಸ್ಥಾನ
Leave a comment
Leave a comment