ಕಲಬುರಗಿ: ಕಳೆದ ಎರಡು ವಾರಗಳ ಹಿಂದೆ ನಗರದ ಪೂಜಾರಿ ಚೌಕ್ ಬಳಿ ಗ್ಯಾಸ್ ಕಟರ್ ಬಳಸಿ sbi ಎಟಿಎಂನಲ್ಲಿದ್ದ 18 ಲಕ್ಷ ರೂಪಾಯಿ ದರೋಡೆ ಮಾಡಿದ್ದ ಆರೋಪಿಗಳಿಬ್ಬರ ಮೇಲೆ ಪೊಲೀಸರು ಫೈರಿಂಗ್ ನಡೆಸಿ, ಅವರನ್ನು ಬಂಧಿಸಿರುವ ಘಟನೆ ನಗರದ ಬೇಲೂರು ಕ್ರಾಸ್ ಸಮೀಪ ಶನಿವಾರ ಬೆಳಗ್ಗೆ ನಡೆದಿದೆ ಘಟನೆಯಲ್ಲಿ ಪಿಎಸ್ಐ ಬಸವರಾಜ್ ಹಾಗೂ ಇಬ್ಬರು ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ
ಏಪ್ರಿಲ್ 9ರಂದು ಕಲಬುರಗಿ ನಗರದ ಪೂಜಾರಿ ಚೌಕ್ ನಲ್ಲಿದ್ದ ಎಸ್ಬಿಐ ಬ್ಯಾಂಕ್ ಎಟಿಎಂ ಅನ್ನು ಒಡೆದು ದರೋಡೆಕೋರರು 18 ಲಕ್ಷ ಹಣ ದೋಚಿದ್ದರು. ಆರೋಪಿಯನ್ನು ಬಂಧಿಸಲು ಸವಾಲಾಗಿದ್ದ ಈ ಪ್ರಕರಣವನ್ನು ಭೇದಿಸುವಲ್ಲಿ ಕೊನೆಗೂ ಕಲಬುರಗಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ



