ಸ್ಲಂ ನಿವಾಸಿಗಳಲ್ಲಿ ಆರ್ಥಿಕ ಶಿಸ್ತು ಮುಖ್ಯ – ಎಸ್.ರಮೇಶ್
ಮುಖ್ಯ ಅಥಿತಿಗಳಾಗಿ ಆಗಮಿಸಿದ ಸೂಫಿಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಸ್.ರಮೇಶ್ ಮಾತನಾಡಿ ನಾವು ಸಾಮಾಜಿಕ ಅಸಮಾನತೆಯ ಹಾಗೂ ರಾಜಕೀಯ ತಾರತಮ್ಯಗಳನ್ನು ಪ್ರಶ್ನಿಸಿ ಹಲವಾರು ಸಾಧನೆಗಳನ್ನು ಯಶಸ್ಸುಗಳನ್ನು ಸ್ಲಂ ಸಂಘಟನೆ ಕಂಡಿದೆ ಈ ಸಹಕಾರಿ ಸಂಘದ ಸ್ಥಾಪನೆ ಸ್ಲಂ ನಿವಾಸಿಗಳ ಆರ್ಥಿಕ ಶಿಸ್ತನ್ನು ತರುವ

ಮುಖ್ಯ ಗುರಿಯಾಗಿದೆ ಸ್ಲಂ ಜನರಲ್ಲಿ ಆರ್ಥಿಕ ಶಿಸ್ತು ಬಂದರೇ ಬೇರೆಯವರ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ ಷೇರುದಾರರ ಕ್ರಿಯಾಯೋಜನೆಯಿಂದ ನಮ್ಮ ಬದುಕಿನ ವಿಮೋಚನೆ ಸಾಧ್ಯವಾಗುತ್ತದೆ ಬಲಹೀನರು ಆರ್ಥಿಕವಾಗಿ ಹೆಜ್ಜೆ ಹಿಡುವುದು ಅಷಡ್ಡೆ ಸುಲಭದ ಮಾತಲ್ಲ, ಈ ಧೋರಣೆ ಬದಲಾಯಿಸಲು ನಾವು ಪ್ರಯತ್ನಿಸೋಣ ನಮ್ಮ ಲಾಭಾಂಶ ಷೇರುದಾರರಿಗೆ ಹಂಚಿಕೆಯಾಗುವ ಜೊತೆಗೆ ಶಿಕ್ಷಣ ನಮ್ಮ ಅಭಿವೃದ್ಧಿ ಮತ್ತು ಸಂವಿಧಾನದ ಹಕ್ಕುಗಳನ್ನು ಪಡೆಯುವ ದಾರಿಯಾಗಿರುತ್ತದೆ. ಇದರಿಂದ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗಿ ಗುಲಾಮಗಿರಿಯಿಂದ ಹೊರಬರಲು ಸಾಧ್ಯವಾಗುತ್ತದೆ. ಆದ್ದರಿಂದ ನಾವು ತೆಗೆದುಕೊಂಡ ಸಾಲವನ್ನು ಹಿಂತಿರುಗಿಸಿ ಸ್ಲಂ ಜನರ ಬ್ಯಾಂಕ್ ಬೆಳವಣಿಗೆಗೆಪ್ರತಿಜ್ಞೆ ಮಾಡುವ ಮೂಲಕ ಕ್ರಿಯಾಶಿಲತೆಯಿಂದ ಬ್ಯಾಂಕ್ನ್ನು ಬೆಳಸಬೇಕೆಂದರು.
ಸಹಕಾರಿ ಸಂಘದ ಅಧ್ಯಕ್ಷರಾದ ಎ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿಇದುವರೆಗೂ ಸಂಘದಿAದ ೮.೮ ಲಕ್ಷ ಸಾಲ ನೀಡಿದ್ದು ಮರುಪಾವತಿ ಶೇ.೧೦೦ ಕ್ಕೆ ೧೦೦ರಷ್ಟಿದೆ ನಮ್ಮ ಜನರ ಸಮಗ್ರ ಅಭಿವೃದ್ಧಿಗೆ ಈ ಸಾಲಿನಲ್ಲಿ ೧ ಸಾವಿರ ಷೇರುಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ೨ ವರ್ಷದಲ್ಲಿ ನಮ್ಮ ಬ್ಯಾಂಕ್ ಸ್ಲಂ ಜನರಲ್ಲಿ ಭರವಸೆ ಮೂಡಿಸಿದೆ ಎಂದರು.